ಗುಂಟೂರು:ಹೆಂಡತಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಅದನ್ನು ಮೊಬೈಲ್​ನಿಂದ ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುವ ಮೂಲಕ ಪಾಪಿ ಪತಿ ವಿಕೃತಿ ಮೆರೆದಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಅಟ್ಮಕರು ಎಂಬಲ್ಲಿ ನಡೆದಿದೆ.
ಕೊಂಡಮ್ಮ ಮೃತ ದುರ್ದೈವಿ. ನೆಲ್ಲೂರು ಜಿಲ್ಲೆಯ ಅನಂತಸಾಗರಂ ವಲಯದ ಕೊಟಪಲ್ಲಿ ಗ್ರಾಮದ ನಿವಾಸಿಯಾದ ಕೊಂಡಮ್ಮಳನ್ನು ಅಟ್ಮಕೂರು ಪಟ್ಟಣದ ದಲಿತ ಕಾಲನಿ ನಿವಾಸಿ ಮೊದ್ದು ಪೆಂಚಲಯಾ ಎಂಬಾತನ ಜತೆ ಮದುವೆ ಮಾಡಿಕೊಡಲಾಗಿತ್ತು. ಪೆಂಚಾಲಯ ಬ್ಯಾಂಕ್​ ಒಂದ ಎಟಿಎಂ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ. ಕೊಂಡಮ್ಮ ಅಟ್ಮಕೂರು ಪಟ್ಟಣದ ಖಾಸಗಿ ಕಂಪನಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಳು. ದಂಪತಿ ಇಬ್ಬರು ಗಂಡು ಮಕ್ಕಳಿದ್ದರು. ದಂಪತಿಯ ಎರಡನೇ ಮಗ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಆದರೆ, ವರ್ಷಗಳು ಕಳೆದಂತೆ ಕೊಂಡಮ್ಮಳ ಶೀಲ ಶಂಕಿಸಿ ಆಕೆಯ ಪತಿ ಪೆಂಚಾಲಯ ಆಗಾಗ ಆಕೆಯನ್ನು ಹಿಂಸಿಸುತ್ತಿದ್ದ.
ಹೀಗಿರುವಾಗ ಮಂಗಳವಾರ ಸಂಜೆ ಇಬ್ಬರ ನಡುವೆ ಜಗಳ ನಡೆದಿದೆ. ಇದೇ ಸಂದರ್ಭದಲ್ಲಿ ಕೋಪಗೊಂಡ ಪೆಂಚಾಲಾಯ “ನೀನು ಸತ್ತರೆ ಸಮಸ್ಯೆಯೆಲ್ಲ ಪರಿಹಾರವಾಗುತ್ತದೆ” ಎಂದಿದ್ದಾನೆ. ಇದರಿಂದ ಮನನೊಂದ ಕೊಂಡಮ್ಮ ಗಂಡನ ಮುಂದೆ ಸೀರೆ ಎತ್ತಿಕೊಂಡು ಫ್ಯಾನಿಗೆ ಕಟ್ಟಿ ನೇಣು ಹಾಕಿಕೊಂಡಿದ್ದಾಳೆ. ಇದನೆಲ್ಲ ನೋಡುತ್ತಾ ನಿಂತಿದ್ದ ಪಾಪಿ ಪತಿ ತನ್ನ ಮೊಬೈಲ್​ನಲ್ಲಿ ಅಷ್ಟೂ ದೃಶ್ಯವನ್ನು ರೆಕಾರ್ಡ್​ ಮಾಡಿಕೊಂಡು ವಿಕೃತಿ ಮರೆದಿದ್ದಾನೆ.
ಯಾವಾಗ ಉಸಿರುಗಟ್ಟಿ ಕೊಂಡಮ್ಮ ಪ್ರಜ್ಞೆ ಕಳೆದುಕೊಂಡಳೋ ಆವಾಗ ಪಾಪಿ ಪತಿ ಪೆಂಚಾಲಯ ಮನೆಯಿಂದ ಕಾಲ್ಕಿತ್ತಿದ್ದಾನೆ. ಸ್ಥಳೀಯರು ಕೊಂಡಮ್ಮಳನ್ನು ಆಸ್ಪತ್ರಗೆ ದಾಖಲಿಸಿದಾದರೂ ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ ಕೊಂಡಮ್ಮ ಕೊನೆಯುಸಿರೆಳೆದಿದ್ದಾಳೆ. ಪಾಪಿ ಪೆಂಚಾಲಯ, ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟ್ಟು ಮೃಗೀಯವಾಗಿ ವರ್ತಿಸಿದ್ದಾನೆ. ಈ ವಿಡಿಯೋ ವೈರಲ್​ ಆಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಪಾಪಿ ಪತಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಗಳು ಕೇಳಿಬಂದಿವೆ. ತಾಯಿ ಮೃತಪಟ್ಟಿದ್ದರೆ, ಇತ್ತ ತಂದೆ ಪರಾರಿಯಾಗಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಇನ್ನು ಬುಧವಾರ ರಾತ್ರಿ ಆರೋಪಿ ಪೆಂಚಾಲಯನನ್ನು ಅಟ್ಮಕೂರು ಪೊಲೀಸರು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.(ಏಜೆನ್ಸೀಸ್​)
ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

ನಗ್ನ ಫೋಟೋ ವೈರಲ್ ಮಾಡೋ ಬೆದರಿಕೆ: ಪ್ರೇಯಸಿಯಿಂದ 35 ಲಕ್ಷ ರೂ. ಪೀಕಿದ್ದ ಆರೋಪಿ ಅಂದರ್​!

ಹೊಸ ಲಕ್ಷುರಿ ಕಾರಿನ ಫ್ಯಾನ್ಸಿ ನಂಬರ್​ಗೆ Jr. NTR ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
