ಹೈದರಾಬಾದ್​:ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ಚಂದ್ರಯಾನಗುಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೈಯದ್​ ಸಮ್ಯಿದ್ದೀನ್​ ಮತ್ತು ಮುಶ್ರತ್​ ಅನ್ಸಾರಿ (24) ದಂಪತಿ ಚಂದ್ರಾಯನಗುಟ್ಟ ಹಷ್ಮಾಬಾದ್ ಏರಿಯಾದ ನಿವಾಸಿಗಳು. ದಂಪತಿಗೆ ಸೈದಾ ಜೈನಾ ಫಾತಿಮಾ (5) ಮತ್ತು ಸೈದಾ ಜೋಹಾ ಫಾತಿಮಾ (2) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇದೇ ತಿಂಗಳ 21ರಂದು ಸೈಯದ್​ ಕೆಲಸಕ್ಕೆಂದು ಮನೆ ಬಿಟ್ಟು ಹೋದ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಆತನಿಗೆ ಕಾದಿತ್ತು. ಪತ್ನಿ ಮತ್ತು ಮಕ್ಕಳು ಕಾಣುತ್ತಿರಲಿಲ್ಲ. ಎಷ್ಟೇ ಹುಡುಕಾಡಿದರೂ ಕೂಡ ಮೂವರ ಸುಳಿವು ಸಿಕ್ಕೇ ಇಲ್ಲ. ಪತ್ನಿಯ ಮೊಬೈಲ್​ಗೆ ಫೋನ್​ ಮಡಿದರೂ ಕೂಡ ಸ್ವಿಚ್​ ಆಫ್​ ಆಗಿದೆ.
ಸಂಬಂಧಿಕರ ಮನೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಹುಡುಕಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಸೈಯದ್​ ಚಂದ್ರಯಾನಗುಟ್ಟ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ನಾಪತ್ತೆ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್​)
ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ತೆಗೆದಿದ್ದ ಗುಂಡಿ ಮುಚ್ಚಿಸಿ ಅಮಾನವೀಯತೆ ಮೆರೆದ ಪೊಲೀಸರು

30.26 ಲಕ್ಷ ರೈತರಿಗೆ 19,370 ಕೋಟಿ ರೂ. ಸಾಲ: ಸಾಲ ಮನ್ನಾ ಯೋಚನೆ ಇಲ್ಲ, ಬಲವಂತದ ಸಾಲ ವಸೂಲಿಯೂ ಇಲ್ಲ

ಬಿಜೆಪಿಯಲ್ಲಿ ಸಂಪುಟ ಸಂಚಲನ: ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 4 =
Remember me
