ಹೈದರಾಬಾದ್​:ನಂಬಿಸಿ ಮದುವೆಯಾದ ಯುವಕ ವಂಚನೆ ಮಾಡಿದ್ದಾನೆಂದು ದೂರು ದಾಖಲಿಸಿರುವ ಹೈದರಬಾದ್​​ನ ಮಹಿಳಾ ಕಾನ್ಸ್​ಟೇಬಲ್​ ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಇಡೀ ಪ್ರಕರಣದಲ್ಲಿ ಆಕೆಯೇ ಖಳನಾಯಕಿ ಎನ್ನಲಾಗಿದೆ.
ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿ ಹಣ ಪೀಕಿರುವ ಆರೋಪ ಮಹಿಳಾ ಕಾನ್ಸ್​ಟೇಬಲ್​ ವಿರುದ್ಧವೇ ಕೇಳಿಬಂದಿದೆ. ಎಆರ್​ ಮುಖ್ಯಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್​ಟೇಬಲ್​ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸಂತ್ರಸ್ತರನ್ನು ಹೆದರಿಸುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿ ಕಾನ್ಸ್​ಟೇಬಲ್​ನನ್ನು ಸಂಧ್ಯಾರಾಣಿ (28) ಎಂದು ಗುರುತಿಸಲಾಗಿದೆ. ಈ ಹಿಂದೆಯೇ ಈಕೆಗೆ ಮೂರು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾಳೆ. ಓರ್ವ ಪತಿ ಈಕೆಯ ಕಿರುಕುಳವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿರಿ:ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಉಳಿಯಿತು ಒಂದೇ ಕುಟುಂಬದ ಮೂವರ ಪ್ರಾಣ!
ಇತ್ತೀಚೆಗೆ ಹೈದರಾಬಾದ್​ನಲ್ಲಿ ಕೆಲಸ ಮಾಡುತ್ತಿದ್ದ ಚರಣ್​ತೇಜ ಎಂಬಾತನನ್ನು ಸಂಧ್ಯಾರಾಣಿ ತನ್ನ ಬಲೆಗೆ ಕೆಡವಿದ್ದಳು. ಬಳಿಕ ಆತನನ್ನು ಬಲವಂತವಾಗಿ ಒಪ್ಪಿಸಿ ಮದುವೆ ಸಹ ಆಗಿದ್ದಳು. ಮದುವೆ ಆಗದಿದ್ದರೆ, ಎಸ್​ಸಿ-ಎಸ್​ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದಳು.
ಇದಾದ ಬಳಿಕ ಚರಣ್​ ಶಮ್ಶಾಬಾದ್​ ಡಿಸಿಪಿ ಮತ್ತು ಶಬಾದ್​ ಪೊಲೀಸ್​ ಠಾಣೆಗೆ ಈಮೇಲ್​ ಮೂಲಕ ದೂರು ನೀಡಿದ್ದನು. ಈ ಹಿಂದೆಯೇ ಮದುವೆ ಆಗಿದ್ದ ವಿಚಾರವನ್ನು ಮುಚ್ಚಿಟ್ಟು ಬೆದರಿಸಿ ಮದುವೆ ಆಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಮದುವೆಯಾಗದ ಯುವಕರನ್ನು ಟಾರ್ಗೆಟ್​ ಮಾಡಿ ಪ್ರೀತಿಯ ಹೆಸರಲ್ಲಿ ಹನಿಟ್ರ್ಯಾಪ್​ ಮಾಡಿದ ಬಳಿಕ ಬೆದರಿಸಿ ಹಣ ಕಸಿಯುತ್ತಿದ್ದಳು ಎಂದು ದೂರಿದ್ದಾನೆ.
ಈ ಹಿಂದೆಯು ಒಮ್ಮೆ ಸಂಧ್ಯಾರಾಣಿ ವಿರುದ್ಧ ಇದೇ ರೀತಿಯ ದೂರು ಸಹ ದಾಖಲಾಗಿದೆ. ಇನ್ನು ಸಂಧ್ಯಾಗೆ ಮನೆಯಿದ್ದರೂ ಪ್ರತ್ಯೇಕವಾಗಿ ಒಂದು ಕೊಠಡಿಯನ್ನು ಬಾಡಿಗೆ ಪಡೆದುಕೊಂಡಿದ್ದಳು. ಅಲ್ಲಿಯೇ ಸಂತ್ರಸ್ತರೊಂದಿಗೆ ಸಮಯ ಕಳೆಯುತ್ತಾ ತನ್ನ ಕಾರ್ಯ ಸಾಧಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ:ರಾಕೆಟ್​ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಕುಟುಂಬಕ್ಕೆ ಕರೆ ಮಾಡಿ ಇಸ್ರೇಲ್​ ಅಧ್ಯಕ್ಷರು ಕೊಟ್ಟ ಮಾತಿದು..!
ಇದೀಗ ಆಕೆಯಿಂದ ಮೋಸ ಹೋಗಿರುವ ಚರಣ್​, ದೂರು ನೀಡಿದ್ದು, ಆಕೆಯನ್ನು ಜವಬ್ದಾರಿಯುತ ಪೊಲೀಸ್​ ಕೆಲಸದಿಂದ ತೆಗೆಯುವಂತೆ ಒತ್ತಾಯಿಸಿದ್ದಾನೆ.
ಭಾನುವಾರವಷ್ಟೇ ಜುಬಿಲಿಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಸಂಧ್ಯಾರಾಣಿ, ನನಗೆ ಮದುವೆಯಾಗಿ 7 ವರ್ಷದ ಮಗಳಿರುವ ವಿಚಾರ ತಿಳಿದು, ಬಾಂಡ್​ ಪೇಪರ್​ ಸಹಿ ಹಾಕಿಯೇ ಚರಣ್​ ಮದುವೆ ಆಗಿದ್ದರು. ಜತೆಯಲ್ಲಿಯೇ ಇದ್ದ ಅವರು ನಾಲ್ಕು ದಿನಗಳಿಂದ ಮನೆಗೆ ಬಂದಿಲ್ಲ ಎಂದು ಆರೋಪಿಸಿದ್ದಳು.(ಏಜೆನ್ಸೀಸ್​)
ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮಂಗಳಸೂತ್ರ ಕದ್ದು ಪುರೋಹಿತ ಪರಾರಿ! ಮುಂದಾಗಿದ್ದು ರೋಚಕ

ಓಕೆ ಅನ್ನದಿದ್ರೆ ವಾಟ್ಸ್‌ಆ್ಯಪ್‌ ಬಂದ್‌: ಐಟಿ ಸಚಿವಾಲಯ ಕಿಡಿ- ಗೋಪ್ಯತೆ ನೀತಿ ಹಿಂಪಡೆಯಲು ನೋಟಿಸ್‌ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
