ಹೈದರಾಬಾದ್​:ಹೀಗೂ ಉಂಟೇ ಎನ್ನುವಂತಹ ಘಟನೆಯೊಂದು ಹೈದರಾಬಾದ್​ನಲ್ಲಿ ನಡೆದಿದೆ. 36 ವರ್ಷದ ಆಟೋ ಟ್ರಾಲಿ ಚಾಲಕನೊಬ್ಬ ಸುಲಭವಾಗಿ ಸಾಗಿಸಬಹುದಾದಂತಹ ಸಾರ್ವಜನಿಕ ಟಾಯ್ಲೆಟ್​ ಅನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.
ಚಾಲಕನನ್ನು ಎಂ. ಜೋಗಯ್ಯ ಎಂದು ಗುರುತಿಸಲಾಗಿದೆ. ಮೇದಕ್​ ಜಿಲ್ಲೆಯ ದೊಮಲಗುಡ ಮೂಲದ ಆರೋಪಿ ಚಾಲಕನನ್ನು ಮಲ್ಕಜ್​ಗಿರಿ ಪೊಲೀಸರು ಮಾರ್ಚ್​ 21ರ ಸೋಮವಾರದಂದು ಬಂಧಿಸಿದ್ದಾರೆ. ಆರೋಪಿ ಜೋಗಯ್ಯ, ತನ್ನ ಇಬ್ಬರು ಸಹಚರರಾದ ಬುದ್ಧ ಭವನದ ಜಿಎಚ್‌ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್‌ಗಿರಿಯ ಆನಂದಬಾಗ್‌ನಲ್ಲಿರುವ ಜೈನ್ ಕನ್‌ಸ್ಟ್ರಕ್ಷನ್‌ನ ಬಿಕ್ಷಪತಿ ಎಂಬುವರ ಜತೆ ಸೇರಿ ಸಾರ್ವಜನಿಕ ಆಸ್ತಿಯನ್ನು ಕದ್ದು ಪರಾರಿಯಾಗಿದ್ದರು.
ಇದಾದ ಬಳಿಕ ಟಾಯ್ಲೆಟ್​ ಅನ್ನು 45 ಸಾವಿರಕ್ಕೆ ಮುಶೀರಾಬಾದ್​ನಲ್ಲಿರುವ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದರು. ಹಣವನ್ನು ತನ್ನ ವೈಯಕ್ತಿಕ ಖರ್ಚಿಗಾಗಿ ಜೋಗಯ್ಯ ಇಟ್ಟುಕೊಂಡಿದ್ದ. ಸ್ಥಳೀಯರ ದೂರಿನ ಆಧಾರದ ಮೇಲೆ ಜಿಎಂಎಚ್​ಸಿ ಉಪ ಪೊಲೀಸ್​ ಆಯುಕ್ತ ಜಿ. ರಾಜು ಅವರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ನೆರವಿನಿಂದ ಜೋಗಯ್ಯನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಹಣವನ್ನು ವಶಕ್ಕೆ ಪಡೆದು, ಆಟೋ ಟ್ರಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೀಗ ತಲೆಮರೆಸಿಕೊಂಡಿರುವ ಆರೋಪಿ ಜೋಗಯ್ಯನ ಮತ್ತಿಬ್ಬರು ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಬೇಕು ಅನಿಸಿದ್ರೆ ಮಂಚಕ್ಕೆ ಕರಿತೀನಿ.. ಸಹನಟನ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ನವ್ಯಾ ನಾಯರ್​!

1 ರೂ. ನಾಣ್ಯಗಳನ್ನೇ ನೀಡಿ ಡ್ರೀಮ್​ ಬೈಕ್​ ಖರೀದಿಸಿದ ಯುವಕ! ಹಣ ಎಣಿಸಲು ತೆಗೆದುಕೊಂಡ ಸಮಯವೆಷ್ಟು?

ಬುರ್ಖಾ ಹಾಕೊಂಡು SSLC ಎಕ್ಸಾಂಗೆ ಬಂದಾಕೆಗೆ ತಡೆ: ವಾಪಸ್​ ಮನೆಗೆ ತೆರಳಿ ಸಮವಸ್ತ್ರ ಧರಿಸಿ ಮತ್ತೆ ಹಾಜರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
