ಹೈದರಾಬಾದ್​:ಕಡಿಮೆ ಅವಧಿಯವರೆಗೆ ಕೆಲಸ ಮಾಡಿ, ಉದ್ಯೋಗವನ್ನು ಬಿಟ್ಟ ಮಹಿಳೆಯೊಬ್ಬಳ ಅಧಿಕೃತ ಶಾಲಾ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿಫಲವಾದ ಐಸಿಐಸಿಐ ಬ್ಯಾಂಕ್​ ಮಹಿಳೆಗೆ ಪರಿಹಾರವಾಗಿ 1.15 ಲಕ್ಷ ರೂಪಾಯಿಗಳನ್ನು ನೀಡಿದೆ.
ಶ್ರೀನಿಜಾ ಎಂಬುವರು ಹೈದರಾಬಾದ್​ನ ಐಸಿಐಸಿಐ ಬ್ಯಾಂಕ್​​ ಒಂದರಲ್ಲಿ ಕಡಿಮೆ ಅವಧಿಗೆ ಕೆಲಸ ಮಾಡಿ ಕೆಲ ಕಾರಣಗಳಿಂದಾಗಿ ಉದ್ಯೋಗ ಬಿಟ್ಟಿದ್ದರು. ಬಳಿಕ ತನ್ನ ಅಧಿಕೃತ ಶಾಲಾ ಪ್ರಮಾಣ ಪತ್ರಗಳು ಬೇಕೆಂದು ಬ್ಯಾಂಕ್​ನಲ್ಲಿ ಕೇಳಿದ್ದರು. ಆದರೆ, ಕಳೆದುಹೋಗಿವೆ ಎಂದು ಬ್ಯಾಂಕ್​ ಸಿಬ್ಬಂದಿ ಉಡಾಫೆ ಉತ್ತರ ನೀಡಿದ ಬೆನ್ನಲ್ಲೇ ಶ್ರೀನಿಜಾ ಲೋಕ್​ ಅದಾಲತ್​ ಮೆಟ್ಟಿಲು ಏರಿದ್ದರು.
ಪ್ರಕರಣ ಸಂಬಂಧ ಶನಿವಾರ ಲೋಕ್​ ಅದಾಲತ್​ ವಿಚಾರಣೆ ನಡೆಸಿ ಶ್ರೀನಿಜಾ ಅವರಿಗೆ 1.15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಅದರಂತೆ ಬ್ಯಾಂಕ್​ ಕೂಡ ಪರಿಹಾರವನ್ನು ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.
ಮತ್ತೊಂದು ಪ್ರಕರಣದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್​ನಿಂದ ಅಪಘಾತಕ್ಕೆ ಒಳಗಾದ ಮಹಿಳೆ ಗಾಯಗೊಂಡು ಪರಿಹಾರಕ್ಕಾಗಿ ಸಿಕಂದರಾಬಾದ್ ಸಿವಿಲ್ ಕೋರ್ಟ್​ಗೆ ಅರ್ಜಿ ಹಾಕಿದ್ದಳು. ನ್ಯಾಯಾಲಯವು 30,000 ರೂ. ಪಾವತಿಸುವಂತೆ ಆದೇಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಲಿವರಿ ಬಾಯ್​, ನನ್ನ ಆರ್ಥಿಕ ಪರಿಸ್ಥಿತಿಯು ದೊಡ್ಡ ಮೊತ್ತವನ್ನು ಪಾವತಿಸುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಕಂತುಗಳಲ್ಲಿ ಪಾವತಿಸುಸುತ್ತೇನೆಂದು ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಪದವೀಧರರಿಗೆ ಗುಡ್‌ನ್ಯೂಸ್‌- 6100 ಮಂದಿ ಅಪ್ರೆಂಟಿಸ್‌ಗೆ ಆಹ್ವಾನಿಸಿದ ಎಸ್‌ಬಿಐ

ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

ತಮ್ಮನ ಸ್ಕೂಟರ್ ರಗಳೆ ಕೇಳಲಾಗದೆ ಅಣ್ಣ ಮಾಡಿದ ಕೆಲಸಕ್ಕೆ ಪೂರ್ತಿ ದೇಶದ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
