ಹೈದರಾಬಾದ್​:ಸ್ನೇಹಿತನ ಸಾಲಕ್ಕೆ ಶ್ಯೂರಿಟಿಯಾಗಿ ಸಹಿ ಮಾಡಿದ್ದ ಹೈದರಾಬಾದ್​ ಕಾನ್ಸ್​ಟೇಬಲ್​ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ನಡೆದಿದೆ.
ಅಭಿಲಾಶ್​ ನಾಯಕ್​ (33) ಮೃತ ದುರ್ದೈವಿ. ಅಭಿಲಾಶ್​ 2014ರಲ್ಲಿ ಪೊಲೀಸ್​ ಇಲಾಖೆಯ ಸೇವೆಗೆ ಸೇರಿದ್ದ. ತನ್ನ ಪತ್ನಿ ಮತ್ತು ಪಾಲಕರೊಂದಿಗೆ ಹೈದರಾಬಾದ್​ನ ಸರ್ಕಾರಿ ಕ್ವಾಟ್ರಸ್​ನಲ್ಲಿ ಉಳಿದುಕೊಂಡಿದ್ದ.
ಅಭಿಲಾಶ್​ ಪತ್ನಿಯ ಹೆಸರು ಇಂದ್ರಜ್ಯೋತಿ. ದಂಪತಿಗೆ ಧೀರಜ್​ ಮತ್ತು ಹೇಮಂತ್​ ಹೆಸರಿನ ಇಬ್ಬರು ಗಂಡುಮಕ್ಕಳಿದ್ದಾರೆ. ಮದನ್ನಪೇಟಾ ಪೊಲೀಸ್​ ಠಾಣೆಯಲ್ಲಿ ಕಳೆದ ಆರು ವರ್ಷದಿಂದ ಅಭಿಲಾಶ್​ ಸೇವೆ ಸಲ್ಲಿಸುತ್ತಿದ್ದರು.
ಅಭಿಲಾಶ್​ ಸಹೋದರ ಪ್ರಭುನಾಯಕ್​ ಜಿಎಚ್​ಎಂಸಿ ವಿಪತ್ತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಶುಕ್ರವಾರ ಅಭಿಲಾಶ್​ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಕೊಡಾಡ ಪ್ರದೇಶಕ್ಕೆ ತೆರಳಿ ಅವರನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದರು.
ಸೋಮವಾರ ಕೆಲಸಕ್ಕೂ ಹೋಗಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದರು. ಊಟ ಮಾಡಿದ ಮೇಲೆ ಸ್ವಲ್ಪ ಮಲಗುವುದಾಗಿ ಹೇಳಿ ಕೋಣೆ ಸೇರಿದ ಅಭಿಲಾಶ್​, ಸಂಜೆಯಾದರೂ ಹಿಂದಿರುಗಲೇ ಇಲ್ಲ. ಆದರೂ ಗಾಢ ನಿದ್ರೆಗೆ ಜಾರಿರಬಹುದು ಎಂದು ಪಾಲಕರು ಸುಮ್ಮನಾಗಿದ್ದರು.
ಈ ನಡುವೆ ಸಹೋದರ ಪ್ರಭುನಾಯಕ್​ ಸುಮಾರು 10 ಗಂಟೆಗೆ ಮನೆಗೆ ಬಂದಿದ್ದಾನೆ. ಅಭಿಲಾಶ್​ನನ್ನು ಅನೇಕ ಬಾರಿ ಕರೆದಿದ್ದಾನೆ. ಮಧ್ಯಾಹ್ನ ನಿದ್ರೆಗೆ ಜಾರಿದವರು ಇಷ್ಟೋತ್ತಾದರೂ ಬರಲಿಲ್ಲ ಮತ್ತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲವಲ್ಲ ಎಂಬ ಅನುಮಾನದಿಂದ ಬಾಗಿಲು ಒಡೆದು ನೋಡಿದಾಗ ಅಭಿಲಾಶ್​ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಇಡೀ ಕುಟುಂಬ ಆಘಾತಕ್ಕೆ ಒಳಗಾಯಿತು.
ತಕ್ಷಣ ಪಾಲಕರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸುವಷ್ಟರಲ್ಲಿ ಅಭಿಲಾಶ್​ ಮೃತಪಟ್ಟಿದ್ದ. ಕೈ ಕುಯ್ದುಕೊಂಡಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಭಿಲಾಶ್​ ಪ್ರಾಣ ಬಿಟ್ಟಿದ್ದಾನೆ. ಇದೀಗ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಅಭಿಲಾಶ್​ ತನ್ನ ಸ್ನೇಹಿತನ ಸಾಲಕ್ಕೆ ಶ್ಯೂರಿಟಿ ಸಹಿ ಹಾಕಿದ್ದ ಎನ್ನಲಾಗಿದೆ. ಕೊಟ್ಟ ಸಾಲವನ್ನು ಸ್ನೇಹಿತ ಹಿಂದಿರುಗಿಸದಿದ್ದಾಗ ಸಾಲ ಕೊಟ್ಟವನು ಅಭಿಲಾಶ್​ ಸಂಬಳದಿಂದ ಹಣ ಪಡೆದುಕೊಳ್ಳುತ್ತಿದ್ದ. ಇದರಿಂದಾಗಿ ಅಭಿಲಾಶ್​ಗೆ ಸಂಬಳ ಇಲ್ಲದಂತಾಗಿತ್ತು. ಈ ವಿಚಾರವನ್ನು ಮನೆಯವರಿಗೆ ತಿಳಿಸದೇ ರಹಸ್ಯವಾಗಿ ಇಟ್ಟಿದ್ದ. ಇದರಿಂದ ಖಿನ್ನತೆಗೆ ಜಾರಿ ಅಭಿಲಾಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.(ಏಜೆನ್ಸೀಸ್​)
ಕರೊನಾ ವೈರಸ್ ಚೀನಾದ ಜೈವಿಕಾಸ್ತ್ರ!: ಶುರುವಾಯ್ತೇ 3ನೇ ವಿಶ್ವಯುದ್ಧ? ಆರು ವರ್ಷದ ಹಿಂದಿನ ದಾಖಲೆ ಸೋರಿಕೆ

ಎಡವಟ್ಟು ಮಾರ್ಗಸೂಚಿ ಫಜೀತಿ: ಪೊಲೀಸರಿಗೆ ಲಾಠಿ ಪ್ರಹಾರವಷ್ಟೇ ಪರಿಹಾರ, ಸ್ಪಷ್ಟತೆ ಸಿಗದ ವಿನಾಯಿತಿ

2ನೇ ಅಲೆಯಲ್ಲಿ ಮಹಿಳೆಯರಲ್ಲಿ ಸೋಂಕು ಹೆಚ್ಚಳ!; ಕಳೆದ ವರ್ಷಕ್ಕಿಂತ ಮಹಿಳಾ ಸೋಂಕಿತ ಪ್ರಮಾಣ ಶೇ. 4 ಏರಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 19 =
Remember me
