ಹೈದರಾಬಾದ್​:ಹೈದರಾಬಾದ್​ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ಶಾಸಕನ ಮಗನ ವಿರುದ್ಧ ಸಾಕ್ಷಿ ನೀಡುವ ಭರದಲ್ಲಿ ಸಂತ್ರಸ್ತೆಯ ಫೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದ ಬಿಜೆಪಿ ಶಾಸಕನ ವಿರುದ್ಧ ಹೈದರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಶಾಸಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 228ಎ (ಲೈಂಗಿಕ ಅಪರಾಧದ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತನ್ನು ತಡೆಯುವುದು) ಅಡಿಯಲ್ಲಿ ಅಬಿಡ್ಸ್​ ಠಾಣೆಯ ಪೊಲೀಸರು ದೂರು ದಾಖಲಿಸಿದ್ದಾರೆ.
ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿ ಅಪ್ರಾಪ್ತೆಯ ಮೇಲೆ ಕಾರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಫೋಟೋ ಮತ್ತು ವಿಡಿಯೋಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಲ್ಲದೆ, ಸಂತ್ರಸ್ತೆಯ ಗುರುತನ್ನು ಸಹ ಬಹಿರಂಗಪಡಿಸುವ ಮೂಲಕ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಆದರೆ, ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ಬಿಜೆಪಿ ನಾಯಕ ವಿಡಿಯೋ ಮತ್ತು ಫೋಟೋಗಳಲ್ಲಿ ಆರೋಪಿಯ ಮುಖಗಳು ಗೋಚರಿಸುತ್ತಿದ್ದರೂ ಸಂತ್ರಸ್ತೆಯ ಮುಖವನ್ನು ತೋರಿಸದೆ ಅಥವಾ ಆಕೆಯ ಗುರುತನ್ನು ಬಹಿರಂಗಪಡಿಸದೆ ಪೊಲೀಸರು ಮತ್ತು ಸಾರ್ವಜನಿಕರ ಮುಂದೆ ಅಪರಾಧದ “ಸಾಕ್ಷ್ಯ” ವನ್ನು ಬಹಿರಂಗಪಡಿಸಿದ್ದೇನೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಎಐಎಂಐಎಂ ಶಾಸಕರ ಪುತ್ರನನ್ನು ಪೊಲೀಸರು ಏಕೆ ಆರೋಪಿ ಎಂದು ಹೆಸರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಆದರೆ, ಉಳಿದ ಓರ್ವ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ. ಜೂನ್​ 3ರಿಂದಲೂ ಆತ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ಮೂವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಾಜಕೀಯವಾಗಿ ಪ್ರಭಾವಿ ವ್ಯಕ್ತಿಗಳ ಸಂಬಂಧಿಗಳ ಕೈವಾಡವಿರುವುದರಿಂದ, ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ತನಿಖೆಯನ್ನು ಸಿಬಿಐಗೆ ವಹಿಸುವಂತೆ ಟಿಆರ್‌ಎಸ್ ಸರ್ಕಾರವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಒತ್ತಾಯಿಸಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆಯೂ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಈ ಘಟನೆ ಮೇ 28ರಂದು ನಡೆದಿದೆ. ಸಂತ್ರಸ್ತ ಹುಡುಗಿ ಜುಬಿಲಿ ಹಿಲ್ಸ್​ನಲ್ಲಿರುವ ಪಬ್​ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಪಬ್​ಗೆ ತೆರಳಿದ್ದಳು. ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್​ ಮಾಡುವುದಾಗಿ ಆರೋಪಿಗಳು ಆಕೆ ಆಫರ್​ ಮಾಡಿದ್ದಾರೆ. ಅವರನ್ನು ನಂಬಿದ ಹುಡುಗಿ ಕಾರನ್ನೇರಿದ್ದಾಳೆ. ಬಳಿಕ ಒಂದು ಕಡೆ ಕಾರನ್ನು ಪಾರ್ಕ್​ ಮಾಡಿ ಆರೋಪಿಗಳು ಹುಡುಗಿಯ ಮೇಲೆ ಕಾರಿನ ಒಳಗೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ನಡೆದ ಒಂದು ವಾರದ ಬಳಿಕ ಸಂತ್ರಸ್ತೆಯ ತಂದೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಅತ್ಯಾಚಾರ ಎಸಗಲು ಬಳಸಿದ ಕಾರು ಶಾಸಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಶಾಸಕರ ಪುತ್ರನು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ತೆಲಂಗಾಣದ ಗೃಹಸಚಿವ ಮಹ್ಮೂದ್​ ಅಲಿ ಅವರ ಮೊಮ್ಮಗನ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ, ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಆರೋಪಿಗಳ ಅಪ್ರಾಪ್ತರು ಆಗಿರುವುದರಿಂದ ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಸೆಲೆಬ್ರಿಟಿಯೊಬ್ಬರ ಅಪ್ರಾಪ್ತ ಪುತ್ರನು ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಅವರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿಸಿಪಿ ಹೇಳಿದ್ದಾರೆ. ಇನ್ನೊಬ್ಬ ಆರೋಪಿಯ ತಂದೆ ತೆಲಂಗಾಣ ವಕ್ಫ್​ ಬೋರ್ಡ್​ ಚೇರ್ಮನ್​ ಆಗಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಈಗಾಗಲೇ ಬಂಧನವಾಗಿರುವ ಇಬ್ಬರು ವಯಸ್ಕರನ್ನು ಮಜೀದ್​ ಮತ್ತು ಫಾರೂಕ್​ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್​ 354, 376 (ಗ್ಯಾಂಗ್​ರೇಪ್​) ಮತ್ತು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಹೈದರಾಬಾದ್​ನಲ್ಲಿ MLAಗೆ ಸೇರಿದ ಕಾರಿನೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್​ರೇಪ್: ಗೃಹಸಚಿವರ ಮೊಮ್ಮಗನ ವಿರುದ್ಧವೂ ಆರೋಪ

ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

ಸ್ಥಳೀಯ ರಾಜಕಾರಣಿಗಳಿಗೆ ನಾಚಿಕೆಯಾಗ್ಬೇಕು: ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ಕಿರಣ್​ ಮಜುಂದಾರ್​ ಶಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 3 =
Remember me
