ಹೈದರಾಬಾದ್​:ಸಿನಿಮಾ ಇಂಡಸ್ಟ್ರಿಯಲ್ಲಿ ಪರಿಚಯವಿದ್ದ ಜೂನಿಯರ್​ ಆರ್ಟಿಸ್ಟ್ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿನಿಮಾ ಪ್ರೊಡಕ್ಷನ್​ ಮ್ಯಾನೇಜರ್​ನನ್ನು ಹೈದರಾಬಾದ್​ನ ಸರೋರ್​ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಧೀರ್​ (31) ಎಂದು ಗುರುತಿಸಲಾಗಿದೆ. ಈತ ಕರೊನಾ ಲಾಕ್​ಡೌನ್​ ಸಮಯದಲ್ಲಿ ರಹಸ್ಯವಾಗಿ ದಂಧೆ ನಡೆಸುತ್ತಿದ್ದ. ಯುವಕರನ್ನು ಸೆಳೆಯಲು ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಫೋಟೋ ಹಾಕುತ್ತಿದ್ದ ಎಂದು ತಿಳಿದುಬಂದಿದೆ.
ಖಮ್ಮಮ್​ ಜಿಲ್ಲೆಯ ಸತ್ತುಪಲ್ಲಿ ಮೂಲದ ಸುಧೀರ್​, 10 ವರ್ಷಗಳ ಹಿಂದೆ ಹೈದರಾಬಾದ್​ಗೆ ಬಂದು ಮಧಪುರ್​ನಲ್ಲಿ ನೆಲೆಸಿದರು. ಸಿನಿಮಾ ಪ್ರೊಡಕ್ಷನ್​ನಲ್ಲಿ ಮ್ಯಾನೇಜರ್​ ಕಾರ್ಯನಿರ್ವಹಿಸುತ್ತಿರುವ ಸುಧೀರ್​, ತನಗೆ ಪರಿಚಯವಿದ್ದ ಕಿರಿಯ ಕಲಾವಿದರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲು ಶುರು ಮಾಡಿದನು.
ಇದನ್ನೂ ಓದಿರಿ:ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಕಾಳಿ ನದಿ ನೀರಲ್ಲಿ ಕೊಚ್ಚಿಹೋಗಿದ್ದ ವೃದ್ಧ 3 ದಿನ ಹೋರಾಡಿ ಸಾವನ್ನೇ ಗೆದ್ದ!
ದಂಧೆ ನಡೆಸಲೆಂದೇ ಮಧಪುರ್​ನ ಅಯ್ಯಪ್ಪ ಸೊಸೈಟಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದ. ಯುವಕರನ್ನು ಸೆಳೆಯಲೆಂದೇ ಲೊಕೆಂಟೋ ಡೇಟಿಂಗ್​ ವೆಬ್​ಸೈಟ್​ನಲ್ಲಿ ಹುಡುಗಿಯರ ಅರೆಬೆತ್ತಲೇ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದ. ಫೋನ್​ ಮೂಲಕ ಸಂಪರ್ಕಿಸಿ ವ್ಯವಹಾರ ನಡೆಸುತ್ತಿದ್ದ.
ಈ ಬಗ್ಗೆ ಮಾಹಿತಿ ಪಡೆದುಕೊಂಡ ರಾಚಕೊಂಡ ಮಾನವ ಕಳ್ಳಸಾಗಾಣೆ ವಿರೋಧಿ ಘಟಕ (ಎಎಚ್​ಟಿಯು)ದ ಪೊಲೀಸರು ಸರೋರ್​ ನಗರ ಠಾಣೆಗೆ ಮಾಹಿತಿ ನೀಡಿ ಸುಧೀರ್​ನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
ಪತಿಯ ಆತ್ಮಹತ್ಯೆ ಬಳಿಕ ಯುವಕನನ್ನು ಮದ್ವೆಯಾದ ಲೇಡಿ ಕಾನ್ಸ್​ಟೇಬಲ್​ಗೆ ಕಾದಿತ್ತು ಬಿಗ್​ ಶಾಕ್​!

ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ವಿಜಯಕಾಂತ್‌: ಆರೋಗ್ಯ ಸ್ಥಿತಿ ಗಂಭೀರ

ನಮ್ಮಲ್ಲಿರುವುದು ಸಹ ನಿಮ್ಮಲ್ಲಿರುವುದೇ! ಸಿಎಂ ಕೇಜ್ರಿವಾಲ್​ ಟ್ವೀಟ್​ಗೆ ಸಿಂಗಾಪೂರ್​ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
