ಹೈದರಾಬಾದ್​:ಹೈದರಾಬಾದ್​ ಒಂದರಲ್ಲೇ ವಾರ್ಷಿಕ 3,500 ಕೋಟಿ ರೂ. ಮೌಲ್ಯದ ಮಾಂಸ ಸೇವನೆ ಆಗುತ್ತದೆ. ದೇಶದಲ್ಲಿ ಅತಿಹೆಚ್ಚು ಮಾಂಸ ಸೇವನೆ ಮಾಡುವ ನಗರ ಎಂಬ ಹೆಸರಿಗೆ ಮುತ್ತಿನ ನಗರಿ ಪಾತ್ರವಾಗಿದೆ. ಹೈದರಾಬಾದ್​ ಒಂದರಲ್ಲೇ 4000 ಚಿಕನ್​, 2000 ಮಟನ್​ ಮತ್ತು 2000 ಮೀನು ಅಂಗಡಿಗಳಿವೆ. ನಗರ ಮೂಲದ ಫೈಜಿಟಲ್ (ಭೌತಿಕ ಮಳಿಗೆಗಳು ಮತ್ತು ಇ-ಕಾಮರ್ಸ್) ಸ್ಟಾರ್ಟ್ ಅಪ್ ಪ್ರೋಟೀನ್ ಹೈಜಿನಿಕ್ ನಾನ್-ವೆಜ್ ಮಾರ್ಟ್​, ಹೈದರಾಬಾದ್​ನ ಮಾಂಸದ ಮೇಲಿನ ಪ್ರೀತಿಯನ್ನು ನಗದೀಕರಿಸಲು ಮತ್ತು ಕಸಾಯಿ ಕೌಶಲ್ಯಗಳನ್ನು ಕಲಿಸುವ ಶಾಲೆಯನ್ನು ತೆರೆಯಲು ಯೋಜಿಸುತ್ತಿದೆ.
ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಹೈದರಾಬಾದ್​, ಕಸಾಯಿ ಶಾಲೆಯನ್ನು ಹೊಂದಿದ ಭಾರತದ ಮೊದಲ ನಗರವಾಗಲಿದೆ. ಇನ್ನು ಪ್ರೋಟೀನ್ ಹೈಜೆನಿಕ್​ ನಾನ್ ವೆಜ್ ಮಾರ್ಟ್​, ಹೈದರಾಬಾದ್​ ಮೂಲದ ಮೊದಲ ಆಧುನಿಕ ಮಾಂಸ ಚಿಲ್ಲರೆ ಸರಪಳಿಯಾಗಿದ್ದು, 22 ಕೋಟಿ ರೂ. ಹೂಡಿಕೆಯೊಂದಿಗೆ 2022ರ ಮಾರ್ಚ್​ ಅಂತ್ಯಕ್ಕೆ 11 ರಿಂದ 75 ಸ್ಟೋರ್​ಗಳಿಗೆ ತಮ್ಮ ಹೆಜ್ಜೆಗುರುತನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.
ಇನ್ನು ಹೈದರಾಬಾದ್​ನಲ್ಲಿ ತರಬೇತಿ ಪಡೆದ ಹಾಗೂ ಕೌಶಲ್ಯಯುಳ್ಳ ಮಾಂಸ ಕತ್ತರಿಸುವ ಕಟುಕರ ಕೊರತೆ ಭಾರೀ ಪ್ರಮಾಣದಲ್ಲಿದೆ. ಹೀಗಾಗಿ ಈ ಸಮಸ್ಯೆಯಿಂದ ಹೊರಬರಲು ಪ್ರೋಟಿನ್ ಪ್ರೋಟೀನ್ ಬುಚರ್ಸ್ (ಕಟುಕರ) ಅಕಾಡೆಮಿ​ ಉದ್ಘಾಟಿಸಲು ಹೈಜೆನಿಕ್​ ನಾನ್ ವೆಜ್ ಮಾರ್ಟ್​ ತಯಾರಿ ನಡೆಸಿದೆ. ಈ ಅಕಾಡೆಮಿ ಕಟುಕರಿಗೆ ತರಬೇತಿ ನೀಡಲಿದೆ. ಈ ಅಕಾಡೆಮಿಯನ್ನು ಶ್ರೀನಿವಾಸ್​ ರಾವ್​ ಪೊತಿನಿ ಮತ್ತು ವಿಜಯ್​​ ಚೌಧರಿ ತ್ರಿಪುರಾನೇನಿ ಸ್ಥಾಪಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದಾರೆ.
ನಾವು ಅಕಾಡೆಮಿಯನ್ನು ತೆರೆಯಲಿದ್ದೇವೆ. ಅದಕ್ಕಾಗಿ ವಿಶಾಲವಾದ ಸ್ಥಳಾವಕಾಶವನ್ನು ನೋಡುತ್ತಿದ್ದೇವೆ ಎಂದು ಬಿಟ್ಸ್ ಪಿಲಾನಿಯ ಹಳೆಯ ವಿದ್ಯಾರ್ಥಿ ಹಾಗೂ ಪ್ರೋಟೀನ್ ಹೈಜೆನಿಕ್​ ನಾನ್-ವೆಜ್ ಮಾರ್ಟ್‌ನ ನಿರ್ದೇಶಕರಾದ ಮಂಚಲಾ ವಂಶಿ ರೈ ಹೇಳಿದರು.
ಮುಂದಿನ 8 ತಿಂಗಳವರೆಗೆ 500 ಕಟುಕರಿಗೆ ತರಬೇತಿ ನೀಡಲು ಯೋಜನೆ ಹಾಕಿಕೊಂಡಿದ್ದಾರೆ. ಹತ್ತನೇ ತರಗತಿ ಪಾಸ್ ಆದವರು ತರಬೇತಿಗೆ ಅರ್ಹರಾಗಿರಲಿದ್ದಾರೆ. ಮೂರು ತಿಂಗಳ ತರಬೇತಿ ಮುಗಿದ ಬಳಿಕ 8000 ಸಾವಿರ ರೂ. ಸಂಬಳವನ್ನು ಸಹ ನೀಡಲಾಗುತ್ತದೆ.
ಶಾಲೆಯಲ್ಲಿ ತರಬೇತಿ ಪಡೆಯುವವರಿಗೆ ವಿವಿಧ ರೀತಿಯ ಮಾಂಸವನ್ನು ಕತ್ತರಿಸಲು ಮತ್ತು ಪುಡಿಮಾಡಲು ಮಾತ್ರವಲ್ಲದೆ, ಮಾಂಸವನ್ನು ಸರಿಯಾಗಿ ಕತ್ತರಿಸಲು, ವ್ಯರ್ಥವಾಗುವುದನ್ನು ತಪ್ಪಿಸಲು, ಉತ್ತಮ ಗುಣಮಟ್ಟದ ಮಾಂಸವನ್ನು ಗುರುತಿಸಲು ಮತ್ತು ಅದನ್ನು ಸರಿಯಾಗಿ ಸಂಗ್ರಹಿಸಲು ತರಬೇತಿ ನೀಡಲಾಗುತ್ತದೆ. ಉಪಕರಣಗಳನ್ನು ಹೇಗೆ ಸ್ವಚ್ಛಗೊಳಿಸುವುದು ಮತ್ತು ನಿರ್ವಹಿಸುವುದು ಮತ್ತು ಬಡಿಸಿದ ಮಾಂಸ ಸೇವನೆಗೆ ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಅವರಿಗೆ ಕಲಿಸಲಾಗುತ್ತದೆ.
ಹೈದರಾಬಾದ್​ ಹಲವಾರು ಮಾಂಸದ ಅಂಗಡಿಗಳನ್ನು ಹೊಂದಿದ್ದರೂ ಅವುಗಳಲ್ಲಿ ಹೆಚ್ಚಿನವು ಅಶುದ್ಧ ಮತ್ತು ನೈರ್ಮಲ್ಯವಿಲ್ಲ ಎಂದು ಶ್ರೀ ತ್ರಿಪೆರನೇನಿ ಹೇಳಿದರು. ಶೇ 95% ಮಾಂಸ ಉದ್ಯಮವು ಅಸಂಘಟಿತವಾಗಿದೆ, ಕಳಪೆ ಮೂಲಸೌಕರ್ಯ, ಅನೈರ್ಮಲ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಗುಣಮಟ್ಟ ಮತ್ತು ಲಭ್ಯತೆಗೆ ವಿಶ್ವಾಸಾರ್ಹವಲ್ಲ ಎಂದು ಅವರು ಹೇಳಿದರು.
ಭಾರತದ ಮಾಂಸ ಮಾರುಕಟ್ಟೆಯು 4 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿದೆ ಮತ್ತು ಆಧುನಿಕ ಮಾಂಸದ ಚಿಲ್ಲರೆ ಸರಪಳಿಗಳ ಬೆಳವಣಿಗೆಗೆ ದೊಡ್ಡ ಸಾಮರ್ಥ್ಯವಿದೆ. ನಮ್ಮ ದೃಷ್ಟಿ ಮಾಂಸ ಖರೀದಿದಾರರಿಗೆ ಅತ್ಯುತ್ತಮ ವೃತ್ತಿಪರ ಶಾಪಿಂಗ್ ಅನುಭವವನ್ನು ನೀಡುವುದು. ಸಾಮಾನ್ಯ ಜನರಿಗೆ ಅತ್ಯಂತ ನೈರ್ಮಲ್ಯ, ತಾಜಾ ಮತ್ತು ಗುಣಮಟ್ಟದ ಮಾಂಸವನ್ನು ಕೈಗೆಟುಕುವ ದರದಲ್ಲಿ ಸಾಧ್ಯವಾದಷ್ಟು ವೃತ್ತಿಪರ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕು” ಎಂದು ಶ್ರೀ ವಂಶಿ ಹೇಳಿದರು.(ಏಜೆನ್ಸೀಸ್​)
ವಿಸ್ಮಯ ದುರಂತ ಸಾವು ಪ್ರಕರಣ: ಸರ್ಕಾರಿ ಕೆಲಸ ಕಳೆದುಕೊಂಡ ಹಣದಾಹಿ ಗಂಡ..!

ಮೊದಲ ಚೆಂಡಿನಲ್ಲೇ ಬೌಂಡರಿ ಬಾರಿಸಿದ ಸಿಎಂ ಬೊಮ್ಮಾಯಿ: ಸಂಪುಟ ರಚನೆಯ ಇನ್​ಸೈಡ್​ ಸ್ಟೋರಿ ಇದು..!

#BBK8: ಒಂದು ವೇಳೆ ಅರವಿಂದ್​-ಮಂಜು ನಡುವೆ ಟೈ ಆದ್ರೆ ಏನಾಗಲಿದೆ? 3ನೇ ವ್ಯಕ್ತಿಗೂ ಹೊಡೆಯುತ್ತಾ ಬಂಪರ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
