ನಲ್ಲಕುಂಟ:ಮದುವೆಯಾದ ಮೂರೇ ವಾರದಲ್ಲಿ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ನಲ್ಲಕುಂಟದಲ್ಲಿ ನಡೆದಿದೆ.
ಅದಿಕ್ಮೆಟ್​ ಬಾಲಾಜಿನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಾಯಿಕುಮಾರ್​ ಮೇ 30ರಂದು ಸಿದ್ದಿಪೇಟೆಯ ತೌಗುಟಾ ಗ್ರಾಮದ ನಾಗ್ರಾಣಿ (20) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಮಂಗಳವಾರ ಬೆಳಗ್ಗೆ ಎಂದಿನಂತೆ ಸಾಯಿಕುಮಾರ್​ ಕೆಲಸಕ್ಕೆಂದು ಮನೆಬಿಟ್ಟಿದ್ದಾನೆ. ಈ ವೇಳೆ ಮನೆಯಲ್ಲಿದ್ದ ನಾಗ್ರಾಣಿ, ಯಾರಿಗೂ ಹೇಳದೆ ಬಟ್ಟೆ, ಚಿನ್ನಾಭರಣದೊಂದಿಗೆ ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ.
ನಾಗ್ರಾಣಿ ಮನೆ ಬಿಟ್ಟು ಹೋಗುವುದನ್ನು ನೋಡಿದ ಸ್ಥಳೀಯರೊಬ್ಬರು ಸಾಯಿಕುಮಾರ್​ಗೆ ಫೋನ್​ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಆತ ಮನೆಗೆ ಮರಳಿದ್ದಾನೆ. ಆದರೆ, ಪತ್ನಿ ಮನೆಯಲ್ಲಿರಲಿಲ್ಲ. ಬದಲಾಗಿ ಆಕೆಯ ಫೋನ್​ ಅಲ್ಲಿಯೇ ಬಿದ್ದಿತ್ತು. ಸ್ವಿಚ್​ ಆಫ್​ ಆಗಿದ್ದ ಫೋನ್​ ಅನ್ನು ಆನ್​ ಮಾಡಿದಾಗ ಆತನಿಗೆ ಶಾಕ್​ ಆಗಿದೆ.
ನಾಗ್ರಾಣಿಗೆ ಆಕೆ ಬಾಯ್​ಫ್ರೆಂಡ್​ ಮಾಡಿದ್ದ ಮಸೇಜ್​ಗಳು ಫೋನ್​ನಲ್ಲಿತ್ತು. ಇದರಿಂದ ಆತಂಕಕ್ಕೀಡಾದ ಸಾಯಿಕುಮಾರ್​ ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾನೆ. ಮದುವೆಗೂ ಮುನ್ನ ಪರಿಚಯವಿದ್ದ ಯುವಕನೊಂದಿಗೆ ನಾಗ್ರಾಣಿ ಮನೆಬಿಟ್ಟು ಹೋಗಿದ್ದಾಳೆಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
ಗಂಡನ ಕಿರುಕುಳಕ್ಕೆ ಯುವ ವೈದ್ಯೆ ಸಾವು: 2 ವರ್ಷದ ಹಿಂದೆ ನಟನಿಗೆ ಲವ್​ ಲೆಟರ್​ ಬರೆದಿದ್ದ ವಿಸ್ಮಯ!

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಹತ್ಯೆ!

28 ಬಾರಿ ಚಿನ್ನ ಗೆದ್ದೆ, ನನ್ನ ಈ ಸ್ಥಿತಿ ಬರಬಾರದು… ದೇಶದ ಮೊದಲ ಪ್ಯಾರಾಶೂಟರ್‌ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 9 =
Remember me
