ಹೈದರಾಬಾದ್​:ಇಡೀ ಹೈದರಾಬಾದ್​ನಲ್ಲಿ ಭಾರೀ ಸದ್ದು ಮಾಡಿದ ಆರ್ಕೆಸ್ಟ್ರಾ ಟ್ರೂಪ್​ ಡಾನ್ಸರ್​ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ.
ರೇಸ್​ ಕೋರ್ಸ್​ ಬುಕ್ಕಿ ನಹೀದ್​ ಮತ್ತು ಕ್ಯಾಬ್​ ಡ್ರೈವರ್​ ಮೊಹಮ್ಮದ್​ ಅಪ್ಸರ್​ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಸತ್ಯ ಬೆಳಕಿಗೆ ಬಂದಿದೆ. ತನಿಖೆಯ ಪ್ರಕಾರ ಕೊಲೆಯಾದ ಶರಿನಾ ಫಾತಿಮಾ, ಕ್ಯಾಬ್​ ಡ್ರೈವರ್​ ಅಪ್ಸರ್​ ಜತೆ ಫಾತಿಮಾಗೆ ವಿವಾಹೇತರ ಸಂಬಂಧ ಇತ್ತು. ಒಂದು ವರ್ಷದ ಹಿಂದಷ್ಟೇ ಫಾತಿಮಾ ಗಂಡ ಮೃತಪಟ್ಟಿದ್ದ. ಇದಾದ ಬಳಿಕ ಮದುವೆ ಆಗುವಂತೆ ಕ್ಯಾಬ್​ ಡ್ರೈವರ್​ಗೆ ಫಾತಿಮಾ ಒತ್ತಡ ಹಾಕಿದ್ದಳು.
ಆರ್ಕೆಸ್ಟ್ರಾದಲ್ಲಿ ಡಾನ್ಸ್​ ಮಾಡುವುದನ್ನು ನಿಲ್ಲಿಸಿದರೆ ಮದುವೆ ಆಗುವುದಾಗಿ ಕ್ಯಾಬ್​ ಡ್ರೈವರ್​ ಭರವಸೆ ನೀಡಿದ್ದ. ಆದರೆ, ಫಾತಿಮಾ ಡಾನ್ಸ್​ ಮಾಡುವುದನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಮದುವೆ ಆಗಲು ಕ್ಯಾಬ್​ ಡ್ರೈವರ್​ ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ತಾರಕಕ್ಕೇರಿ ನ. 9ರಂದು ಕ್ಯಾಬ್​ ಡ್ರೈವರ್​, ಫಾತಿಮಾಳಿಗೆ ಚೆನ್ನಾಗಿ ಕುಡಿಸಿ, ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇನ್ನು 30 ವರ್ಷದ ಫಾತಿಮಾಗೆ 7 ಮಕ್ಕಳಿದ್ದರು. ಒಂದು ವರ್ಷದ ಹಿಂದಷ್ಟೇ ಗಂಡ ಸತ್ತಿದ್ದ. ಆರ್ಕೆಸ್ಟ್ರಾದಲ್ಲಿ ಡಾನ್ಸ್​ ಮಾಡುತ್ತಾ ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದಳು. ಹೈದರಾಬಾದ್​ನ ಮುಸ್ತಾಫನಗರದಲ್ಲಿ ನೆಲೆಸಿದ್ದಳು. ಇದೀಗ ಫಾತಿಮಾ ಹತ್ಯೆಯಾಗಿದ್ದು, 7 ಮಕ್ಕಳು ಅನಾಥವಾಗಿವೆ. ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಕೇರಳ ಮಾಡೆಲ್​ಗಳಿಬ್ಬರ ದುರ್ಮರಣ: ಮಧ್ಯರಾತ್ರಿಯ ಡಿಜೆ ಪಾರ್ಟಿ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ!

ಭಾರೀ ಮಳೆಯ ನಡುವೆ ಸ್ಮಶಾನದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಗೆ ಹೆಗಲು ಕೊಟ್ಟು ರಕ್ಷಿಸಿದ ಮಹಿಳಾ ಪೊಲೀಸ್​!

ವಿಚಾರಣೆಗೆ ಕೋರ್ಟ್‌ಗೆ ಕರೆತರ್ತಿಲ್ಲವೆಂದು ಸಿಟ್ಟಿಗೆದ್ದು ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಆರೋಪಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
