ನ್ಯೂಯಾರ್ಕ್​:ಹೈದರಾಬಾದ್​ ಮೂಲದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪ್ತಿಗೆ ಕ್ಯಾಂಪಸ್​ ಇಂಟರ್ವ್ಯೂವ್​ನಲ್ಲಿ ಜಾಕ್​ಪಾಟ್​ ಹೊಡೆದಿದೆ. ಗೌರವಾನ್ವಿತ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿಯ ಭಾರೀ ಸಂಬಳದ ಕೆಲಸವನ್ನು ದೀಪ್ತಿ ಗಿಟ್ಟಿಸಿಕೊಂಡಿದ್ದಾರೆ.‘
ಹೌದು, ದೀಪ್ತಿ ಅವರು ಅಮೆರಿಕದ ಸೀಟಲ್​ನಲ್ಲಿರುವ ಮೈಕ್ರೋಸಾಫ್ಟ್​ ಮುಖ್ಯಕಚೇರಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಆಯ್ಕೆಯಾಗಿದ್ದಾರೆ. ವಾರ್ಷಿಕವಾಗಿ ಅವರಿಗೆ 2 ಕೋಟಿ ರೂ. ಸಂಬಳ ನಿಗಧಿಯಾಗಿದೆ. ಫ್ಲೊರಿಡಾ ವಿಶ್ವವಿದ್ಯಾಲಯದಲ್ಲಿ ಎಂಎಸ್​ (ಕಂಪ್ಯೂಟರ್ಸ್​) ಪೂರ್ಣಗೊಳಿಸಿರುವ ದೀಪ್ತಿ, ಮೇ 2ರಂದು ನಡೆದ ಕ್ಯಾಂಪಸ್​ ಇಂಟರ್ವ್ಯೂವ್​ನಲ್ಲಿ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 17ರಿಂದ ದೀಪ್ತಿ ತನ್ನ ಕೆಲಸ ಆರಂಭಿಸಲಿದ್ದಾರೆ. ದೀಪ್ತಿ ಅವರ ತಂದೆ ಡಾ. ವೆಂಕಣ್ಣ ಅವರು ಹೈದರಾಬಾದ್​ ಪೊಲೀಸ್​ ಆಯುಕ್ತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಟೆಕ್​ ಮುಗಿದ ಬಳಿಕ ಜೆಪಿ ಮೊರ್ಗಾನ್​ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸಿದ ದೀಪ್ತಿ, ಆ ಬಳಿಕ ಎಂಎಸ್​ ಮಾಡಲು ಅಮೆರಿಕಗೆ ತೆರಳಿದರು.
ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಆಯ್ಕೆಯಾದ 300ರಲ್ಲಿ ದೀಪ್ತಿ ಅವರು ಅತಿ ಹೆಚ್ಚು ವಾರ್ಷಿಕ ವೇತನವನ್ನು ಪಡೆದಿದ್ದಾರೆ.(ಏಜೆನ್ಸೀಸ್​)
ಸರ್ಕಾರ ಮತ್ತು ಜನರ ನಿರ್ಲಕ್ಷ್ಯವೇ ಇಂದಿನ ಆರೋಗ್ಯ ಬಿಕ್ಕಟ್ಟಿಗೆ ಕಾರಣ: ಮೋಹನ್​ ಭಾಗವತ್​

ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

ಲಸಿಕೆ ಪಡೆಯಲು ನಿರಾಕರಿಸಿದ್ದ ಕ್ರಿಕೆಟಿಗರು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty + 18 =
Remember me
