ಮಲ್ಕಜ್​ಗಿರಿ:ಹೈದರಾಬಾದ್​ನಲ್ಲಿ ಪದೇಪದೆ ಯುವತಿಯರ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದ್ದು, ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಇದೀಗ ಮತ್ತೆ ಇಬ್ಬರು ಯುವತಿಯರು ದಿಢೀರ್​ ಕಾಣೆಯಾಗಿರುವುದಾಗಿ ವರದಿಯಾಗಿದೆ.
ಮಲ್ಕಜ್​ಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯ ಹನುಮನ್​ಪೇಟೆ ನಿವಾಸಿ ಅಶ್ವಿನಿ (19) ಎಂಬಾಕೆ ಇದೀಗ ಕಾಣೆಯಾಗಿರುವುದಾಗಿ ಪ್ರಕರಣ ದಾಖಲಾಗಿದೆ. ಅಶ್ವಿನಿ ಡಿಗ್ರಿ ಓದುತ್ತಿದ್ದಳು. ಕಳೆದ ಕೆಲವು ದಿನಗಳಿಂದ ಹೆಚ್ಚು ಮೊಬೈಲ್​ನಲ್ಲೇ ಬಿಜಿಯಾಗಿರುವುದನ್ನು ತಾಯಿ ಬಾಲಾಮಣಿ ಗಮನಿಸಿದ್ದರು.
ಇದೇ ತಿಂಗಳ 4ರಂದು ಮೂವರು ಅಪರಿಚಿತ ಯುವತಿಯರು ಬಂದು ಯುವಕನೊಬ್ಬನ್ನು ಅಶ್ವಿನಿ ಪ್ರೀತಿಸುತ್ತಿದ್ದಾಳೆ. ಅವನನ್ನೇ ಮದುವೆ ಆಗಬೇಕೆಂದುಕೊಂಡಿದ್ದಾಳೆಂದು ಹೇಳಿದ್ದರು. ಇದರಿಂದ ಕುಪಿತಗೊಂಡ ತಾಯಿ, ಅಶ್ವಿನಿಗೆ ಬೈದು ಬುದ್ಧಿವಾದ ಹೇಳಿದ್ದಳು. ಅದೇ ದಿನ ಸೂಪರ್ ಬಜಾರ್​ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಅಶ್ವಿನಿ ಮರಳಿ ಬರಲೇ ಇಲ್ಲ. ಈ ಬಗ್ಗೆ ಭಾನುವಾರ ಅಶ್ವಿನಿ ತಾಯಿ ದೂರು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಿಶಿದಾ (21) ಎಂಬಾಕೆ ಪೆಟ್ಬಶಿರಾಬಾದ್​ನಿಂದ ನಾಪತ್ತೆಯಾಗಿದ್ದಾಳೆ. ಶ್ರೀಕೃಷ್ಣನಗರದ ಕಾಲೇಜು ವಿದ್ಯಾರ್ಥಿನಿಯಾಗಿದ್ದ ರಿಶಿದಾ ಜೂನ್​ 5ರಂದು ಬೆಳಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದಾಳೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರು ಮತ್ತು ಸ್ನೇಹಿತರನ್ನೆಲ್ಲ ವಿಚಾರಿಸಿದ್ದಾರೆ. ಆದರೆ, ಏನು ಪ್ರಯೋಜನವಾಗದಿದ್ದಾಗ ಅಂದೇ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ಎರಡು ಪ್ರಕರಣಗಳ ಸಂಬಂಧ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)
VIDEO| ಬೋಲ್ಡ್​ ಸೀನ್​ ಮೂಲಕ ಎಲ್ಲರ ಹುಬ್ಬೇರಿಸಿದ ಸಮಂತಾ: ಮಾದಕ ದೃಶ್ಯಗಳು ವೈರಲ್​!

ಮ್ಯಾಟ್ರಿಮೋನಿ ಸೈಟ್​ನಲ್ಲಿ ಪರಿಚಯ, ಪಬ್​ನಲ್ಲಿ ಭೇಟಿ: 12 ಮಹಿಳೆಯರ ಮೇಲೆ ಕಾಮುಕನ ಅಟ್ಟಹಾಸ!

ಒಂದೇ ದಿನದಲ್ಲಿ ಮೂವರು ಯುವತಿಯರ ದಿಢೀರ್​ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
