ಹೈದರಾಬಾದ್​:ಬಿಸಿನೆಸ್​ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಗೆ ಬಲೆ ಬೀಸಿದ ಮಾಯಾಂಗನೆ ಆತನಿಂದ ಬರೋಬ್ಬರಿ 1.20 ಕೋಟಿ ರೂಪಾಯಿ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅಂಬರಪೇಟ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅರ್ಚನಾ (24) ಎಂಬಾಕೆ ಅಂಬರ್​ಪೇಟೆಯ ದೀದೀ ಕಾಲನಿಯ ನಿವಾಸಿ. ಈಕೆಯ ತಂದೆ ಶ್ರೀನಿವಾಸ್​ ಪ್ರಿಂಟಿಂಗ್​ ಪ್ರೆಸ್​ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ಯೂಟಿಷಿಯನ್​ ಕೊರ್ಸ್​ ಮುಗಿಸಿರುವ ಅರ್ಚನಾ, ಕುಕಟಪಲ್ಲಿ ಮತ್ತು ದಿಲ್ಶುಕ್​ನಗರದಲ್ಲಿ ಪ್ರತ್ಯೇಕ ಬ್ಯೂಟಿ ಪಾರ್ಲರ್​ಗಳನ್ನು ನಡೆಸುತ್ತಿದ್ದಳು. ಈ ಸಮಯದಲ್ಲಿ ಆನ್​ಲೈನ್​ ಮೂಲಕ ಆಂಧ್ರ ಪ್ರದೇಶದ ಗುಂಟೂರು ಮೂಲದ ಸುಬ್ಬಾರೆಡ್ಡಿ (35) ಎಂಬಾತನ ಪರಿಚಯ ಆಗಿದೆ.
ಇಬ್ಬರ ಪರಿಚಯ ಸಲುಗೆಗೆ ತಿರುಗಿದಾಗ ತನ್ನ ಉದ್ಯಮದಲ್ಲಿ ಹಣ ಹೂಡುವಂತೆ ಅರ್ಚನಾ ಸುಬ್ಬಾರೆಡ್ಡಿ ಬಳಿ ಕೇಳಿಕೊಂಡಿದ್ದಾಳೆ. ಅಲ್ಲದೆ, ಹೆಚ್ಚಿನ ಹಣ ಕೊಡುವುದಾಗಿಯೂ ಹೇಳಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಮಾಯಾಂಗನೆಯ ಫೋಟೋ ನೋಡಿ ಬಲೆ ಬಿದ್ದಿದ್ದ ಸುಬ್ಬಾರೆಡ್ಡಿ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್​ ಮಾಡುವುದನ್ನು ಮುಂದುವರಿಸಿದ್ದ. ಆಕೆಯ ಬಣ್ಣ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಸುಬ್ಬಾರೆಡ್ಡಿ ಹಂತ ಹಂತವಾಗಿ ಆನ್​ಲೈನ್​ ಮೂಲಕ ಕಳೆದ ಡಿಸೆಂಬರ್​ನಿಂದ ಆಗಸ್ಟ್​ವರೆಗೆ 1.20 ಕೋಟಿ ರೂಪಾಯಿ ಹಣವನ್ನು ಅರ್ಚನಾ ಖಾತೆಗೆ ಜಮಾ ಮಾಡಿದ್ದ.
ಹಣ ಬಂದು ಖಾತೆಗೆ ಜಮೆಯಾದ ಕೂಡಲೇ ತನ್ನ ವರಸೆ ಬದಲಿಸಿದ ಅರ್ಚನಾ ಅಂದಿನಿಂದ ಸುಬ್ಬಾರೆಡ್ಡಿಗೆ ಕೈಗೆ ಸಿಕ್ಕದೇ ನುಣುಚಿಕೊಳ್ಳುತ್ತಿದ್ದಳು. ನೇರವಾಗಿ ಮಾತನಾಡೋಣ ಅಂದ್ರೆ ಆಕೆಯ ಸುಳಿವು ಆತನಿಗೆ ಸಿಕ್ಕಿರಲಿಲ್ಲ. ಇನ್ನು ಅರ್ಚನಾಗೆ ಬಾಯ್​ಫ್ರೆಂಡ್​ ಅನಿಲ್​ ಕುಮಾರ್​ ಜತೆ ಸಂಬಂಧ ಇತ್ತು. ಸುಬ್ಬಾರೆಡ್ಡಿಯಿಂದ ಪೀಕಿದ್ದ ಹಣದಿಂದ ಭಾರೀ ಪ್ರಮಾಣ ಚಿನ್ನಾಭರಣ ಮತ್ತು ಕಾರನ್ನು ಖರೀದಿಸಿದ್ದಳು. ಇತ್ತ ಫೋನ್​ ಮೂಲಕ ಸುಬ್ಬಾರೆಡ್ಡಿ ಅರ್ಚನಾಳ ಸಂಪರ್ಕಿಸಿ ತನ್ನ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದ. ಆರಂಭದಿಂದ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬರ್ತಿದ್ದ ಅರ್ಚನಾ ಕೊನೆಗೆ ತನ್ನ ಕರಾಳ ಮುಖವನ್ನು ತೋರಿಸಿ, ಬಾಯ್​ಫ್ರೆಂಡ್​ ಜತೆ ಸೇರಿಕೊಂಡು ಸುಬ್ಬಾರೆಡ್ಡಿ ಕೊಲೆ ಬೆದರಿಕೆ ಹಾಕಿದ್ದಳು.
ಕೊನೆಗೆ ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ಸುಬ್ಬಾರೆಡ್ಡಿ, ಅರ್ಚನಾ ವಿಳಾಸವನ್ನು ಹೇಗೋ ಪತ್ತೆ ಮಾಡಿದ. ಆಕೆ ಹೈದರಾಬಾದಿನಲ್ಲಿ ವಾಸವಿರುವುದು ತಿಳಿಯಿತು. ಬಳಿಕ ಇದೇ ತಿಂಗಳ 1ನೇ ತಾರೀಖಿನಂದು ಹೈದರಾಬಾದ್​ಗೆ ಆಗಮಿಸಿದ ಸುಬ್ಬಾರೆಡ್ಡಿ ಅಂಬರಪೇಟೆ ಪೊಲೀಸ್​ ಠಾಣೆಯಲ್ಲಿ ಅರ್ಚನಾ ವಿರುದ್ಧ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅರ್ಚನಾ, ಸಾಯಿರಾಮ್​ ಮತ್ತು ಅನಿಲ್​ ಕುಮಾರ್​ನನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.(ಏಜೆನ್ಸೀಸ್​)
ಬಿಎಸ್​ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…

ಶೂಟಿಂಗ್​ ಸೆಟ್​ನಲ್ಲಿ ಗಳಗಳನೇ ಅತ್ತ ಸಮಂತಾ! ಸ್ಯಾಮ್​ ಕಣ್ಣೀರು ನೋಡಿ ಚಿತ್ರತಂಡ ಹೇಳಿದ್ದು ಹೀಗೆ…

ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ, ಕುರ್ಚಿಗೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್​: ರೇಣುಕಾಚಾರ್ಯ

ಸಮಂತಾ ಡಿವೋರ್ಸ್​ ಹಿಂದಿರುವ ವ್ಯಕ್ತಿ ಈತನೇನಾ? ಅನುಮಾನ ಹುಟ್ಟುಹಾಕಿದೆ ಈ ವೈರಲ್​ ಫೋಟೋ..!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − eight =
Remember me
