ಹೈದರಾಬಾದ್​:ಎಷ್ಟೇ ವಿಡಿಯೋ ಪೋಸ್ಟ್​ ಮಾಡಿದರೂ ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಯೂಟ್ಯೂಬರ್​ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ದೀನಾ (24) ಮೃತ ಯೂಟ್ಯೂಬರ್​. ಈತ ಇಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದ. ಸೆಲ್ಫ್​ಪ್ಲೋ ಹೆಸರಿನಲ್ಲಿ ಗೇಮಿಂಗ್​ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದ. ಆದರೆ, ವ್ಯೂವ್ಸ್​ ಬರುತ್ತಿಲ್ಲ ಅಂತ ಮನನೊಂದು ಐದು ಅಂತಸ್ತಿನ ಅಪಾರ್ಟ್​ಮೆಂಟ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಹೈದರಾಬಾದ್​ನ ಸೈದಾಬಾದ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕ್ರಾಂತಿ ನಗರ ಕಾಲನಿಯಲ್ಲಿ ಗುರುವಾರ ನಡೆದಿದೆ. ಐಐಟಿ ಗ್ವಾಲಿಯರ್​ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಓದುತ್ತಿದ್ದ. ಲೈವ್​​ ಗೇಮ್​ಗೆ ಸಂಬಂಧಿಸಿದ ಯೂಟ್ಯೂಬ್​ ಚಾನೆಲ್​ ನಡೆಸುತ್ತಿದ್ದ. ಎಷ್ಟೇ ಪ್ರಯತ್ನ ಮಾಡಿದರೂ ವೀಕ್ಷಕರು ಹೆಚ್ಚಾಗುತ್ತಿಲ್ಲವಲ್ಲ ಎಂದು ಬೇಸರಗೊಂಡಿದ್ದ. ಅಲ್ಲದೆ, ಯೂಟ್ಯೂಬ್​ನಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದ.
ಇದಾದ ಸ್ವಲ್ಪದ ಸಮಯದ ನಂತರ ಕಟ್ಟಡದಿಂದ ಜಿಗಿದು ದೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಸೈದಾಬಾದ್​ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದ ಮರಣೋತ್ತರ ಪರೀಕ್ಷೆಗೆ ಒಸ್ಮಾನಿಯ ಶವಾಗಾರಕ್ಕೆ ರವಾನಿಸಿದ್ದಾರೆ.
ಘಟನಾ ಸ್ಥಳದಲ್ಲಿ ಡೆತ್​ನೋಟ್​ ಸಹ ಪತ್ತೆಯಾಗಿದೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
ನಮ್ಮಿಬ್ಬರನ್ನೂ ಒಂದು ಕೋಣೆಯಲ್ಲಿ ಇರಿಸಿದರೆ… ನಾಗಚೈತನ್ಯ ಬಗ್ಗೆ ಅಚ್ಚರಿಕೆ ಹೇಳಿಕೆ ನೀಡಿದ ಸಮಂತಾ!

ಇ.ಡಿ. ತೆಕ್ಕೆಯಲ್ಲಿ ಅತ್ತೆ: ರಾಜಕೀಯಕ್ಕೆ ಅಳಿಯನ ಎಂಟ್ರಿ? ಸೋನಿಯಾ ಕುಟುಂಬದಿಂದ ಬಂತೊಂದು ಸುದ್ದಿ…

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್ಸ್​​ ಜಾವಲಿನ್​ ಥ್ರೋ ಫೈನಲ್​ಗೆ ಅರ್ಹತೆ ಪಡೆದ​ ಚಿನ್ನದ ಹುಡುಗ ನೀರಜ್​ ಚೋಪ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
