ವಿಜಯವಾಡ:ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿತೇಜ್ ಕೂಡ ಒಬ್ಬರು. ಇಂದು ಸಾಯಿತೇಜ್​ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು.
ಅಂತ್ಯಕ್ರಿಯೆಗೂ ಮುನ್ನ ಸಾಯಿತೇಜ್​ ಪಾರ್ಥೀವ ಶರೀರ ಸೇನಾ ಹೆಲಿಕಾಪ್ಟರ್​ ಮೂಲಕ ಬೆಂಗಳೂರಿನಿಂದ ಆಂಧ್ರದ ಚಿತ್ತೂರಿಗೆ ಆಗಮಿಸಿತು. ಬಳಿಕ ಪಾರ್ಥೀವ ಶರೀರವನ್ನು ಪುಂಗನೂರು ರಸ್ತೆ ಮಾರ್ಗವಾಗಿ ಸಾಯಿತೇಜ್​ ಅವರ ಸ್ವಗ್ರಾಮ ಎಗುವರೆಗಡಕ್ಕೆ ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಬಹುಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ವೀರಪುತ್ರನಿಗೆ ಅಂತಿಮ ನಮನವನ್ನು ಸಲ್ಲಿಸಿ, ಕಣ್ಣೀರಿನ ವಿದಾಯ ಹೇಳಿದರು.
ಘಟನೆ ನಡೆದ ಐದು ದಿನಗಳ ನಂತರ ಸಾಯಿತೇಜ್​ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತರಲಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಸೇನಾ ಗೌರವಗಳೊಂದಿಗೆ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಇದಕ್ಕೂ ಮುನ್ನ ಮೆರವಣಿಗೆಯ ವೇಳೆ ಮನಕಲಕುವ ದೃಶ್ಯವೊಂದು ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು. ಹುತಾತ್ಮ ಸಾಯಿತೇಜ್ ಅವರ​ 5 ವರ್ಷದ ಪುತ್ರ ಮೋಕ್ಷಜ್ಞ ತಂದೆಯ ಫೋಟೋಗೆ ಮುತ್ತಿಕ್ಕಿದ್ದು ಮನಕರಗುವಂತಿತ್ತು. ಇಡೀ ಗ್ರಾಮವೇ ಸಾಯಿತೇಜ್​​ಗಾಗಿ ಕಣ್ಣೀರು ಸುರಿಸಿದರು. ಮೆರವಣಿಗೆಯ ವಾಹನಕ್ಕೆ ಹೂವಿನ ಮಳೆಗೆರೆದು, ಕಂಬನಿ ಮಿಡಿದರು.
ಡಿ. 8ರ ಬುಧವಾರದಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರಿನ ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್ ಜತೆ ತೆರಳುವಾಗ ಹೆಲಿಕಾಪ್ಟರ್​ ಪತನವಾಗಿ ಮೃತಪಟ್ಟ 13 ಮಂದಿಯಲ್ಲಿ ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​ ಕೂಡ ಒಬ್ಬರು. ಡಿಎನ್​ಎ ಪರೀಕ್ಷೆ ಮೂಲಕ ಶನಿವಾರ ಬೆಳಗ್ಗೆ ಸಾಯಿತೇಜ್​ ಅವರ ಮೃತದೇಹವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.(ಏಜೆನ್ಸೀಸ್​)
ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

ಸಂಕ್ರಾಂತಿಗೆ ಬರುವೆ ಎಂದಿದ್ದರು! ಏನೂ ಅರಿಯದ ನನ್ನ ಪುಟ್ಟ ಕಂದಮ್ಮಗಳಿಗೆ ಏನೆಂದು ಹೇಳಲಿ… ಯುವ ಯೋಧನ ಪತ್ನಿಯ ಕಣ್ಣೀರು

ಹುತಾತ್ಮ ಯೋಧ ಸಾಯಿತೇಜ್​ ಕುಟುಂಬಕ್ಕೆ ಆಂಧ್ರ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
