ದೀಸ್ಪುರ್​:ಜನರ ಸೇವೆ ಮಾಡುವ ಮಹತ್ವಾಕಾಂಕ್ಷೆಯಿಂದ ಐಎಎಸ್, ಐಪಿಎಸ್​ನಂತಹ ಉತ್ತನ ಸ್ಥಾನಕ್ಕೇರುವ ಬಹುತೇಕ ಅಧಿಕಾರಿಗಳು ಜನನಾಯಕರಾಗುವ ಬದಲು ಜನಪ್ರತಿನಿಧಿಗಳ ಸೇವಕರಾಗಿ ಬಿಡುತ್ತಾರೆ. ಆದರೆ, ಇಲ್ಲೊಬ್ಬ ಐಎಎಸ್​ ಅಧಿಕಾರಿಯನ್ನು ನೋಡಿದರೆ ಇದ್ದರೆ ಇಂತವರು ಇರಬೇಕು ಅನಿಸದೇ ಇರದು. ಸದಾ ಎಸಿ ರೂಮ್​ನಲ್ಲಿ ಕುಳಿತು ಕಾಲಹರಣ ಮಾಡುವ ಸರ್ಕಾರಿ ಅಧಿಕಾರಿಗಳ ನಡುವೆ ಜನರ ಮಧ್ಯೆ ಸಾಮಾನ್ಯರಂತೆ ಬಂದು ಸಂಕಷ್ಟ ಆಲಿಸುವ ಅಧಿಕಾರಿಗಳು ನಿಜವಾದ ಸೇವಕರು. ಅದಕ್ಕೆ ತಾಜಾ ಉದಾಹರಣೆಯೇ ಮಹಿಳಾ ಐಎಎಸ್​ ಅಧಿಕಾರಿ ಕೀರ್ತಿ ಜಲ್ಲಿ ಅವರು.
ಕಳೆದ ಕೆಲವು ದಿನಗಳಿಂದ ಭಾರೀ ಮಳೆಗೆ ಭೀಕರ ಪ್ರವಾಹ ಸೃಷ್ಟಿಯಾಗಿ ಅಸ್ಸಾಂ ಅಕ್ಷರಶಃ ತತ್ತರಿಸಿ ಹೋಗಿದೆ. ಅದರಲ್ಲೂ ಅಸ್ಸಾಂನ ಕ್ಯಾಚರ್​ ಜಿಲ್ಲೆ ಪ್ರವಾದ ಭಾರೀ ಹೊಡೆತಕ್ಕೆ ಸಿಲುಕಿ ನಲುಗಿಹೋಗಿದೆ. ಜನರು ತೀವ್ರ ಸಂಕಟ ಪಡುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೀರ್ತಿ ಅವರು ಪ್ರವಾಹ ಪೀಡಿತ ಸ್ಥಳಗಳಿಗೆ ಸಾಮಾನ್ಯ ಮಹಿಳೆಯಂತೆ ಬರಿಗಾಲಲ್ಲಿ ನಡೆದುಬಂದು, ಕೆಸರುಮಯ ದಾರಿಯಲ್ಲಿ ಜನರ ಜತೆ ನಡೆದು ಅವರ ಕಷ್ಟಗಳನ್ನು ಕೇಳಿದರು. ಪರಿಹಾರವನ್ನು ನೀಡುವ ಭರವಸೆ ನೀಡಿ, ಚಿಂತಕ್ರಾಂತರಾಗಿದ್ದ ಜನರಿಗೆ ಧೈರ್ಯ ತುಂಬಿ, ಅವರ ಮುಖದಲ್ಲಿ ನಗು ತರಿಸಿದರು.
ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಕೀರ್ತಿ ಅವರ ಫೋಟೋಗಳನ್ನು 2009ನೇ ಬ್ಯಾಚ್​ನ ಐಎಎಸ್​ ಅಧಿಕಾರಿ ಅವನಿಶ್​ ಶರಣ್​ ಅವರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅವರು ನಮಸ್ಕಾರದ ಎಮೋಜಿಯನ್ನು ಟ್ವೀಟ್ ಮಾಡುವ ಮೂಲಕ ಕೀರ್ತಿಯವರ ಪ್ರಯತ್ನವನ್ನು ಶ್ಲಾಘಿಸಿದರು. ಶರಣ್​ ಅವರು ಶೇರ್​ ಮಾಡಿರುವ ಫೋಟೋಗಳಲ್ಲಿ ಕೀರ್ತಿ ಅವರ ಕೆಸರುಮಯ ಪಾದಗಳನ್ನು ತೋರಿಸಿದೆ. ಕೀರ್ತಿ ಅವರು ಇನ್ನೊಬ್ಬ ಮಹಿಳೆಯೊಂದಿಗೆ ದೋಣಿಯಲ್ಲಿ ನಿಂತಿರುವುದು ಫೋಟೋದಲ್ಲಿದೆ.
Keerthi Jalli IAS, Deputy Commissioner Cachar.🙏pic.twitter.com/n5CsOoAFMu
— Awanish Sharan (@AwanishSharan)May 26, 2022

ಅನೇಕ ಟ್ವಿಟ್ಟಿಗರು ಐಎಎಸ್​ ಅಧಿಕಾರಿಯ ಸ್ಪಂದನೆಗೆ ಫಿದಾ ಆಗಿದ್ದಾರೆ. ಸಂಕಷ್ಟದಲ್ಲಿರುವ ಜನರ ಮಧ್ಯೆ ಹೋಗಿ ತಮ್ಮ ಸೇವಾ ಬದ್ಧತೆಯನ್ನು ತೋರಿದ ಕೀರ್ತಿ ಅವರಿಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಶರಣ್​ ಅವರ ಪೋಸ್ಟ್​ ಅನ್ನು ಲೈಕ್​ ಮಾಡಿದ್ದಾರೆ.
There are few more pics… She's a star 🌟pic.twitter.com/zSVeM1WP05
— kzc (@kzc940)May 27, 2022

ಅಸ್ಸಾಂನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಕ್ಯಾಚಾರ್ ಜಿಲ್ಲೆ ತೀವ್ರವಾಗಿ ಹಾನಿಗೊಳಗಾಗಿದೆ. ಜಿಲ್ಲೆಯಾದ್ಯಂತ ಇನ್ನೂ ಸಾವಿರಾರು ಜನರು ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಜಿಲ್ಲಾಧಿಕಾರಿಗಳು ಬುಧವಾರ ವಿವಿಧ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು.(ಏಜೆನ್ಸೀಸ್​)
pic.twitter.com/R7nArHDYk3
— Owlet🦉 (@owalson)May 26, 2022

ನೀವು ಒಂಟಿಯಾಗೇ ಸಾಯುತ್ತೀರಿ… ನೆಟ್ಟಿಗನ ಕಾಮೆಂಟ್​ಗೆ ಸಮಂತಾ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

ಸಂಕಷ್ಟ ನಡುವೆ ಪುನಶ್ಚೇತನ: ಅರ್ಥವ್ಯವಸ್ಥೆ ಬಗ್ಗೆ ಆರ್​ಬಿಐ ವಾರ್ಷಿಕವರದಿ ವಿಶ್ವಾಸ

ವಿವಿ ವಿಶೇಷ: ವರ್ಷಕ್ಕೊಬ್ಬರಿಗೆ ಶಿಕ್ಷೆ!  ವಿಚಾರಣೆ ಹಂತದಲ್ಲೇ ಕೊಳೆಯುವ ಇ.ಡಿ ಪ್ರಕರಣಗಳು- ದಾಳಿ ಭರ್ಜರಿ ಶಿಕ್ಷೆ ಡೋಂಟ್​ವರಿ!

Sign in to your account
Please enter an answer in digits:4 + 13 =
Remember me
