ಹರಿಪಾದ:ಯೋಧನೊಬ್ಬ ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಪ್ರಕರಣವನ್ನು ಇಂಟಿಲಿಜೆನ್ಸ್​ ಬ್ಯೂರೋ (ಐಬಿ) ತನಿಖೆ ನಡೆಸಲಿದೆ. ಸದ್ಯ ಯೋಧನನ್ನು ಕೇರಳ ಪೊಲೀಸರು ಬಂಧಿಸಿದ್ದು, ಹರಿಪಾದದ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ವಶಕ್ಕೆ ನೀಡಲಾಗಿದೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಬಂಧಿತ ಯೋಧನನ್ನು ಅಲಕೊಟ್ಟಿಲ್​ ಸುಬೋಧ್​ (37) ಎಂದು ಗುರುತಿಸಲಾಗಿದೆ. ಕರೀಲಾಕುಲಂಗರ ಪೊಲೀಸ್​ ಠಾಣೆಯಿಂದ ಐಬಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಫ್​ಐಆರ್​ ಅನ್ನು ಶೀಘ್ರದಲ್ಲೇ ಆರ್ಮಿಗೆ ಹಸ್ತಾಂತರ ಮಾಡಲಾವುದು ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಮಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸುಬೋಧ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಆರೋಪಿ ಸುಬೋಧ್​ ತನ್ನ 69 ವರ್ಷದ ತಾಯಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ತಾಯಿಯನ್ನು ಎಳೆದಾಡಿ, ಆಕೆಯನ್ನು ಕೆಳಕ್ಕೆ ನೂಕಿ, ಕಾಲಿನಿಂದು ಒದ್ದು ಕೆಟ್ಟ ಬೈಗುಳಗಳಿಂದ ನಿಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ಸಹಾಯಕ್ಕಾಗಿ ತನ್ನ ಹಿರಿಯ ಮಗನ ಹೆಸರನ್ನು ಕೂಗಿದರೆ, ಅದನ್ನು ವ್ಯಂಗ್ಯವಾಡಿಕೊಂಡು ತಾಯಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಈ ಘಟನೆ ಬುಧವಾರ (ಜ.12) ನಡೆದಿದೆ. ಆರೋಪಿ ಸುಬೋಧ್​ ಮದ್ಯದ ಅಮಲಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ಪೊಲೀಸರು ಮನೆಗೆ ಬಂದಾಗಲೂ ತಾಯಿಯು ತನ್ನ ತಾಯ್ತನವನ್ನು ಪ್ರದರ್ಶಿಸಿದ್ದಾಳೆ. ಮಗನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ದೂರು ನೀಡಲು ಹಿಂಜರಿದಿದ್ದಾಳೆ. ಮಗನನ್ನು ಕರೆದುಕೊಂಡು ಹೋದರೆ ನಾನು ಕೂಡ ಜೊತೆಯಾಗುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಆರೋಪಿಯನ್ನು ಪೊಲೀಸರು ಬಂಧಿಸಿ ಎಳೆದೊಯ್ದಾಗಲು ಆತ ಮದ್ಯದ ಅಮಲಿನಲ್ಲೇ ಇದ್ದ. ಬೆಂಗಳೂರಿನಲ್ಲಿ ಟ್ರೇಡ್‌ಮ್ಯಾನ್ ಆಗಿರುವ ಸುಬೋಧ್ ಮೂರು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು. ಒಂದು ವರ್ಷದ ಹಿಂದಷ್ಟೇ ಕಾರ್ತಿಕಪಲ್ಲಿ ಜಂಕ್ಷನ್‌ನಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.(ಏಜೆನ್ಸೀಸ್​)
ಹೆತ್ತ ತಾಯಿ ಮೇಲೆ ಯೋಧನಿಂದ ಹಲ್ಲೆ: ಬಂಧಿಸಲು ಬಂದ ಪೊಲೀಸರ ಬಳಿ ತಾಯಿ ಹೇಳಿದ್ದು ಕೇಳಿದ್ರೆ ಮನಕಲಕುತ್ತೆ

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

ಚಂದನ್​ ಶೆಟ್ಟಿ ಮರ್ಯಾದೆಯಾದ್ರೂ ಉಳಿಸು… ಪ್ರ್ಯಾಂಕ್​​ ವಿಡಿಯೋ ಹರಿಬಿಟ್ಟ ನಿವೇದಿತಾಗೆ ನೆಟ್ಟಿಗರ ಪಾಠ!

ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 1 =
Remember me
