ಮುಂಬೈ:ಸೂಪರ್​ ಹೀರೋ ಶಕ್ತಿಮಾನ್ ಹಾಗೂ ಮಹಾಭಾರತದ ಭೀಷ್ಮ ಪಿತಾಮಹ​ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿರುವ ನಟ ಮುಕೇಶ್​ ಖನ್ನಾ, ಇದೀಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಯುವತಿಯರ ಬಗ್ಗೆ ಮುಕೇಶ್​ ಅವರು ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಕೇಶ್​ ಅವರು “ಭೀಷ್ಮ್​ ಇಂಟರ್​ನ್ಯಾಷನಲ್​” ಹೆಸರಿನಲ್ಲಿ ಯೂಟ್ಯೂಬ್​​ ಚಾನೆಲ್​ ಒಂದನ್ನು ನಡೆಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈನ್​? (ಅಂತಹ ಹುಡುಗಿಯರು ನಿಮಗೆ ಆಮಿಷ ಒಡ್ಡುತ್ತಾರೆ) ಎಂಬ ಟೈಟಲ್​ ನೀಡಿ ಒಂದು ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದಾರೆ. ಅದರಲ್ಲಿ ಮುಕೇಶ್​ ಅವರು ಹುಡುಗಿಯರ ಬಗ್ಗೆ ಕಳಪೆಯಾಗಿ ಮಾತನಾಡಿದ್ದಾರೆ.
ವಿಡಿಯೋದಲ್ಲಿ ಏನು ಹೇಳಿದ್ದಾರೆ ಅಂದರೆ, ನಾನು ನಿನ್ನೊಂದಿಗೆ ಲೈಂಗಿಕ ಸಂಪರ್ಕ ಬಯಸಿದ್ದೇನೆ ಎಂದು ಯಾವುದೇ ಹುಡುಗಿ, ಹುಡುಗನನ್ನು ಕೇಳಿದರೆ, ಆ ಹುಡುಗಿ ಹುಡುಗಿಯಲ್ಲ, ವ್ಯಾಪಾರ ಮಾಡುತ್ತಿದ್ದಾಳೆ ಎಂದರ್ಥ. ಲೈಂಗಿಕ ಸುಖ ಬಯಸುವ ಮತ್ತು ಅದನ್ನು ಕೇಳುವ ಹುಡುಗಿಯರು ಲೈಂಗಿಕ ಕಾರ್ಯಕರ್ತರು. ಏಕೆಂದರೆ ಸುಸಂಸ್ಕೃತ ಸಮಾಜದ ಯಾವ ಹುಡುಗಿಯೂ ಇಂತಹ ನಾಚಿಕೆಯಿಲ್ಲದ ಕೆಲಸಗಳನ್ನು ಮಾಡುವುದಿಲ್ಲ ಎಂದು ಮುಕೇಶ್​ ವಿಡಿಯೋದಲ್ಲಿ ಹೇಳಿದ್ದಾರೆ.

ಮುಕೇಶ್​ ಹೇಳಿರುವ ಈ ನಿರ್ದಿಷ್ಟ ಕಾಮೆಂಟ್​ ಅನ್ನು ಉಲ್ಲೇಖಿಸಿ ನೆಟ್ಟಿಗರು ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮುಕೇಶ್​ ಅವರನ್ನು ಲಿಂಗ ತಾರತಮ್ಯದ ವ್ಯಕ್ತಿ ಎಂದು ಕರೆಯುತ್ತಿದ್ದಾರೆ. ಶಕ್ತಿ ಮತ್ತು ಮಾನ್​ (ಗೌರವ) ಎರಡು ಕೂಡ ನಿಮ್ಮನ್ನು ಬಿಟ್ಟು ಹೋಯಿತು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿ, ಟೀಕಿಸಿದ್ದಾರೆ. ಇದೊಂದು ಅದ್ಭುತ ತರ್ಕವಾದರೂ ಯಾವ ಹುಡುಗಿಯೂ ಸಹ ಮುಕೇಶ್​ ಬಳಿಕ ಹೀಗೆ ಹೇಳಿರಲಿಕ್ಕಿಲ್ಲ ಎಂದು ನನಗೆ ಅರ್ಥವಾಯಿತು. ಆದುದರಿಂದ ಮುಕೇಶ್​ ಅವರು ಈ ಭ್ರಮೆಯಲ್ಲಿ ಜೀವನಪೂರ್ತಿ ಇರುವುದೇ ಶ್ರೇಷ್ಠ ಎಂದು ಇನ್ನೊಬ್ಬ ನೆಟ್ಟಿಗ ಟೀಕಾ ಪ್ರಹಾರ ನಡೆಸಿದ್ದಾರೆ.
ಕ್ಷಮಿಸಿ ಶಕ್ತಿಮಾನ್, ಈ ಬಾರಿ ತಪ್ಪು ಮಾಡಿರುವುದು ನೀವೇ ಎಂದು ಮತ್ತೋರ್ವ ನೆಟ್ಟಿಗ ಹೇಳಿದರೆ, ಅನಕ್ಷರಸ್ಥರು ಸಹ ಮುಕೇಶ್​ ಅವರ ತರ್ಕದಿಂದ ಅವರನ್ನು ನೋಡಿ ನಗುತ್ತಾರೆ ಎಂದು ಮಗದೊಬ್ಬ ನೆಟ್ಟಿಗ ಮುಕೇಶ್​ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
90 ರ ದಶಕದಲ್ಲಿ ಇಡೀ ಪೀಳಿಗೆಯ ಮಕ್ಕಳು ಮುಕೇಶ್​ ಖನ್ನಾ ಅವರನ್ನು ತುಂಬಾ ಆರಾಧಿಸಿದ್ದರು. ಏಕೆಂದರೆ, ಶಕ್ತಿಮಾನ್​ ಪಾತ್ರ ಅವರಿಗೆ ಆ ಗೌರವವನ್ನು ತಂದುಕೊಟ್ಟಿದೆ. 1997 ರಿಂದ 2005ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ಶಕ್ತಿಮಾನ್​, ಭಾರತದ ಮೊಟ್ಟ ಮೊದಲ ಸೂಪರ್​ ಹೀರೋ ಶೋ ಆಗಿದೆ.(ಏಜೆನ್ಸೀಸ್​)
VIDEO| ಟಾಲಿವುಡ್​ ಐಟಂ ಸಾಂಗ್​​ಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ ಚಾಹಲ್​ ಪತ್ನಿ ಧನಶ್ರೀ: ವಿಡಿಯೋ ವೈರಲ್​

ಶೋಕಿಗಾಗಿ ಬೈಕ್​ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ

ರಜನಿ ಜತೆಗೆ ರಮ್ಯಾ: 23 ವರ್ಷಗಳ ನಂತರ ಜೈಲರ್​ನಲ್ಲಿ ನಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
