ಕಾಮರೆಡ್ಡಿ:ಹೊಸ ಹೊಸ ಮೋಸದ ದಾರಿ ಕಂಡುಕೊಂಡು ಅಮಾಯಕರನ್ನು ಯಾಮಾರಿಸುವುದೇ ನಯವಂಚಕರ ಕೆಲಸ. ತೆಲಂಗಾಣದ ಕಾಮರೆಡ್ಡಿಯಲ್ಲಿ ವಂಚಕರು ಹಣ ಪೀಕಲು ಕಂಡುಕೊಂಡಿರುವ ತಪ್ಪು ದಾರಿಯ ಬಗ್ಗೆ ತಿಳಿದ್ರೆ ನೀವು ನಿಜಕ್ಕೂ ಶಾಕ್​ ಆಗ್ತೀರಾ…
ಹೌದು, ಹಳೆಯ 5 ರೂಪಾಯಿ ನೋಟಿದ್ದರೆ 5 ಲಕ್ಷ ರೂ. ನೀಡುತ್ತವೆಂದು ನರ್ಸ್​ ಒಬ್ಬರಿಗೆ ಯಾಮಾರಿಸಿರುವ ಘಟನೆ ಕಾಮರೆಡ್ಡಿ ವಲಯದ ಚಿನ್ನಮಲ್ಲರೆಡ್ಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ.
ಕಸ್ತೂರಿ ಹೆಸರಿನ ನರ್ಸ್​ ಇದೇ ತಿಂಗಳ ಒಂದನೇ ತಾರೀಖಿನಂದು ಒಂದು ದೂರವಾಣಿ ಕರೆಯನ್ನು ಸ್ವೀಕರಿಸುತ್ತಾರೆ. ಫೋನ್​ನಲ್ಲಿ ಮಾತನಾಡಿದ ವ್ಯಕ್ತಿ ನಿಮ್ಮ ಬಳಿ ಟ್ರ್ಯಾಕ್ಟರ್​ನಿಂದ ರೈತ ಉಳುಮೆ ಮಾಡುತ್ತಿರುವ ಚಿತ್ರವುಳ್ಳ 5 ರೂಪಾಯಿ ನೋಟಿದ್ದರೆ 11.74 ಲಕ್ಷ ರೂಪಾಯಿ ನೀಡುವುದಾಗಿ ಹೇಳುತ್ತಾರೆ. ಸದ್ಯ ಅಪರೂಪವಾಗಿರುವ ಈ ನೋಟಿಗೆ ಬಹಳ ಬೇಡಿಕೆ ಇದೆ. ಹೀಗಾಗಿ ಅದನ್ನು ಕೊಟ್ಟರೆ ನಿಮಗೆ ಲಕ್ಷ…ಲಕ್ಷ ಹಣ ಸಿಗಲಿದೆ ಎಂದು ನಂಬಿಸುತ್ತಾರೆ.
ಫೋನ್​ನಲ್ಲಿ ಹೇಳಿದ ಮಾತನ್ನು ಕೇಳಿದ ನರ್ಸ್​ ಹಿಂದೆ-ಮುಂದೆ ವಿಚಾರಿಸದೇ ಅದನ್ನು ನಂಬುತ್ತಾಳೆ. ತನ್ನ ಬಳಿ ಆ ನೋಟು ಇರುವುದಾಗಿಯು ಹೇಳುತ್ತಾಳೆ. ಬಳಿಕ ವಂಚಕರು ತಮ್ಮ ಅಸಲಿ ಮುಖವಾಡವನ್ನು ಕಳಚುತ್ತಾರೆ. ಮೊದಲು ಖಾತೆಯೊಂದನ್ನು ತೆರೆಯಲು ಹೇಳುತ್ತಾರೆ. ಅನೇಕ ಇನ್​ಸ್ಟಾಲ್​ಮೆಂಟ್​ನಲ್ಲಿ ಹಣ ನಿಮ್ಮ ಖಾತೆಗೆ ದಾಖಲಾಗುತ್ತದೆ. ಅದಕ್ಕೂ ಮುನ್ನ ಐಟಿ ಕ್ಲಿಯರೆನ್ಸ್​ ಮಾಡಬೇಕೆಂದು ಹೇಳಿ ಆಕೆಯಿಂದ 8.35 ಲಕ್ಷ ರೂ. ಕೀಳುತ್ತಾರೆ. ಇದಾದ ಬಳಿಕ ಇನ್ನು ಹೆಚ್ಚಿನ ಹಣಕ್ಕೆ ಅವರ ಬೇಡಿಕೆ ಇಟ್ಟಾಗ ಅನುಮಾನ ಬಂದು ನರ್ಸ್​ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಫೋನ್​ ಕಾಲ್​ ಪಶ್ಚಿಮ ಬಂಗಾಳದಿಂದ ಬಂದಿರುವುದಾಗಿ ಹೇಳಿದ್ದಾರೆ. ಉಡುಗೊರೆ ಹೆಸರಿನಲ್ಲಿ ಯಾವುದೇ ಬಂಪರ್​ ಕರೆಗಳಿಗೆ ಮರುಳಾಗಬೇಡಿ. ಇದಕ್ಕೆ ಸಂಬಂಧಿಸಿದ ಬಹುದೊಡ್ಡ ವಂಚಕರ ಜಾಲವಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.(ಏಜೆನ್ಸೀಸ್​)
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​, ಎಲ್ಲಾ ಗ್ರಾಮಗಳಿಗೆ ಅನ್​ಲಿಮಿಟೆಡ್​ ಇಂಟರ್ನೆಟ್​ ಪೂರೈಸಲು ಸಿಎಂ ಜಗನ್​ ಆದೇಶ

ಜೂ. ಚಿರುಗೆ 6 ತಿಂಗಳು; ಪುಟಾಣಿಯ ಫೋಟೋ ಹಂಚಿಕೊಂಡ ಮೇಘನಾ

Web Exclusive | ಮೂರು ಪಟ್ಟು ದರದಲ್ಲಿ ರೆಮ್​ಡಿ​ಸಿವಿರ್ ಬಿಕ್ರಿ; ಕರೊನಾ ಕ್ರೌರ್ಯದಲ್ಲೂ ಅಮಾನವೀಯ ನಡೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:16 + ten =
Remember me
