ಮುಂಬೈ:ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದ್ರಕಾಂತ್​ ಪಾಟೀಲ್ ಅವರು ನೀಡಿರುವ ಮಹಿಳಾ ವಿರೋಧಿ ಹೇಳಿಕೆ ವಿವಾದ ಸೃಷ್ಟಿಸಿದೆ. ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ, ಮನೆಗೆ ಹೋಗಿ ಅಡುಗೆ ಮಾಡು ಎಂದು ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ)ಯ ಸಂಸದೆ ಸುಪ್ರಿಯಾ ವಿರುದ್ಧ ಕಾಮೆಂಟ್​ ಮಾಡಿರುವುದು ಮಹಿಳಾ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.
ಸುಪ್ರಿಯಾ ಅವರು ಪಕ್ಷದ ಸಭೆಯಲ್ಲಿ ಒಬಿಸಿ ಮೀಸಲಾತಿಯ ಬಗ್ಗೆ ಮಾತನಾಡಿದ್ದರು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶವು ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಅದು ಹೇಗೆ ಪರಿಹಾರವನ್ನು ಪಡೆದುಕೊಂಡಿತು ಎಂಬ ಪ್ರಶ್ನೆಗಳನ್ನು ಎತ್ತಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ದೆಹಲಿಗೆ ಬಂದು ಯಾರನ್ನೋ ಭೇಟಿಯಾದರು. ಇದಾದ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ, ಅವರು ಒಬಿಸಿ ಮೀಸಲಾತಿಗೆ ಮುಂದಾದರು ಎಂದು ಅನುಮಾನ ವ್ಯಕ್ತಪಡಿಸಿದರು.
ಸುಪ್ರಿಯಾ ಹೇಳಿಕೆಯಿಂದ ರೊಚ್ಚಿಗೆದ್ದ ಚಂದ್ರಕಾಂತ್ ಪಾಟೀಲ್, ನೀವೇಕೆ ರಾಜಕೀಯದಲ್ಲಿದ್ದೀರಿ? ಮನೆಗೆ ಹೋಗಿ ಅಡುಗೆ ಮಾಡಿ. ನೀವು ರಾಜಕೀಯದಲ್ಲಿದ್ದು ಸಿಎಂ ಭೇಟಿ ಮಾಡುವುದು ಹೇಗೆಂದು ಅರ್ಥವಾಗುತ್ತಿಲ್ಲವೇ? ನೀವು ದೆಹಲಿಗಾದರೂ ಹೋಗಿ ಅಥವಾ ನರಕಕ್ಕಾದರೂ ಹೋಗಿ ಅಥವಾ ಎಲ್ಲಿಗಾದರೂ ಹೋಗಿ, ಆದರೆ ಮೀಸಲಾತಿ ನೀಡಿ ಎಂದರು.
ಪ್ರಸ್ತುತ ರಾಜಕೀಯದಿಂದ ದೂರ ಉಳಿದಿರುವ ಸುಪ್ರಿಯಾ ಪತಿ, ಚಂದ್ರಕಾಂತ್​ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಸ್ತ್ರೀದ್ವೇಷಿಗಳು ಮತ್ತು ಸಾಧ್ಯವಾದಾಗಲೆಲ್ಲಾ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ ಎಂದು ನಾನು ಹಿಂದೆಯೇ ಹೇಳಿದ್ದೆ. ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿಯಾಗಿರುವ ನನ್ನ ಹೆಂಡತಿಯ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಭಾರತದ ಇತರ ಅನೇಕ ಶ್ರಮಶೀಲ ಮತ್ತು ಪ್ರತಿಭಾವಂತ ಮಹಿಳೆಯರಲ್ಲಿ ನನ್ನ ಪತ್ನಿಯು ಒಬ್ಬರು. ನನ್ನ ಪತ್ನಿಗೆ ಮಾಡಿದ ಅವಮಾನ ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
https://www.vijayavani.net/a-a-dk-suresh-about-ed-filed-a-chargesheet-against-kpcc-president-dks/
ಬೇಬಿ ಬಂಪ್ ಹಿಡಿದು ನಟಿ ತಾರಾ ಪ್ರತ್ಯಕ್ಷ: ವೈರಲ್​ ಆಗ್ತಿವೆ ಫೋಟೋಗಳು…

ಪ್ರೇಮಲೋಕ ಹಾಡಿನ ಮರುಸೃಷ್ಟಿಗೆ ಜೂಹಿ ಚಾವ್ಲಾ ಫಿದಾ: ಹರ್ಷಿಕಾ ಪೂಣಚ್ಚ ಖುಷಿಗೆ ಪಾರವೇ ಇಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 4 =
Remember me
