ಚೈತನ್ಯಪುರಿ:ಆನ್​ಲೈನ್​ ಡೇಟಿಂಗ್​ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಉಗಾಂಡ ಮೂಲದ ಐವರು ಯುವತಿಯರನ್ನು ಹೈದರಾಬಾದ್​ನ ಚೈತನ್ಯಪುರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇನ್ಸ್​ಪೆಕ್ಟರ್​ ರವಿಕುಮಾರ್​, ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಯುವತಿಯರನ್ನು ಬಂಧಿಸಿದ್ದೇವೆ. ಆರೋಪಿಗಳು ಲೊಕ್ಯಾಂಟೋ ಹೆಸರಿನ ಆನ್​ಲೈಟ್​ ಡೇಟಿಂಗ್​ ಆ್ಯಪ್​ನಲ್ಲಿ ಫೋಟೋಗಳನ್ನು ಹರಿಬಿಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದರು. ಶೋಧ ಕಾರ್ಯಾಚರಣೆ ನಡೆಸಿ ಅವರ ದಂಧೆಯನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸರು ಗ್ರಾಹಕರ ವೇಷದಲ್ಲಿ ಆ್ಯಪ್​ನಲ್ಲಿರುವ ನಂಬರ್​ ಪಡೆದು ಜಾಲ ನಡೆಸುತ್ತಿದ್ದ ಓರ್ವನನ್ನು ಸಂಪರ್ಕಿಸಿದ್ದಾರೆ. ಇದಾದ ಬಳಿಕ ಆರೋಪಿ ದಿಲ್ಶುಕ್​ನಗರದ ರಾಜಧಾನಿ ಚಿತ್ರಮಂದಿರದ ವಿಳಾಸ ನೀಡಿ ಅಲ್ಲಿ ಮೂವರು ಯುವತಿಯರು ಇಬ್ಬರು ಮ್ಯಾನೇಜರ್​ ಜತೆಯಲ್ಲಿ ನಿಂತಿರುತ್ತಾರೆಂದು ಹೇಳಿದ್ದಾನೆ. ಸ್ಥಳಕ್ಕೆ ಹೋದ ಪೊಲೀಸರು ಗುರುವಾರ ಸಂಜೆ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಆರೋಪಿಗಳ ಬಳಿಕ ಅಕ್ರಮ ಡ್ರಗ್ಸ್​ ಸಹ ಪತ್ತೆಯಾಗಿದೆ. ಅವರಿಂದ ಸೆಲ್​ಫೋನ್​ 5,500 ರೂ. ನಗದು ಹಣ, 5 ಗ್ರಾಂ ಕೆಟಾಮೈನ್​ ಮತ್ತು 17 ಗ್ರಾಂ ಗುರುತಿಲ್ಲದ ಡ್ರಗ್ಸ್​ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳೆಲ್ಲರೂ ವಿಸಿಟಿಂಗ್​ ವೀಸಾ ಮೇಲೆ ಭಾರತಕ್ಕೆ ಬಂದು ಅಕ್ರಮವಾಗಿ ಇಲ್ಲಿಯೇ ಉಳಿದುಕೊಂಡಿದ್ದಾರೆ. ಆರೋಪಿಗಳು ತೊಲಿಚೌಕಿಯಲ್ಲಿ ವಾಸವಿದ್ದರು.(ಏಜೆನ್ಸೀಸ್​)
Floccinaucinihilipilification: ನೆಟ್ಟಿಗರ ತಲೆ ಚಿಟ್ಟು ಹಿಡಿಸಿದ ಸಂಸದ ಶಶಿ ತರೂರ್‌ ಟ್ವೀಟ್‌!
ಕೆಲವೇ ದಿನಗಳಲ್ಲಿ ಮದುವೆ ಮಾಡಿಬಿಡುತ್ತಾರೆಂಬ ನೋವಿನಿಂದ ಸಾವಿನ ಹಾದಿ ಹಿಡಿದ ಯುವತಿ!
ಧೋನಿ, ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ: ಫ್ಯಾನ್ಸ್​ ಪ್ರಶ್ನೆಗೆ ಸೂರ್ಯಕುಮಾರ್​ ಸೂಪರ್​ ಉತ್ತರ ಇಲ್ಲಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 5 =
Remember me
