ನವದೆಹಲಿ:ಖಾಲಿಯಾಗಿದ್ದ ಆಕ್ಸಿಜನ್​ ಸಿಲಿಂಡರ್​ ಅನ್ನು ಮರುಭರ್ತಿ ಮಾಡಿಸಿಕೊಳ್ಳಲು ಸಾಕಷ್ಟು ಅಲೆದಾಡಿದ ಮಹಿಳೆಯೊಬ್ಬರು ಸಿಕ್ಕ ಸಿಕ್ಕವರನ್ನು ಬೇಡಿಕೊಂಡರು ತನ್ನ ಪ್ರಯತ್ನ ಮಾತ್ರ ಫಲ ಕಾಣಲೇ ಇಲ್ಲ. ಆಕ್ಸಿಜನ್​ ಹುಡುಕಾಟದ ನಡುವೆಯೇ ಆಕೆಯ ತಾಯಿ ಕೋವಿಡ್​ನಿಂದ ಮೃತಪಟ್ಟಿದ್ದು, ಮನಕಲಕುವಂತಿತ್ತು.
ಮಹಾಮಾರಿ ಕರೊನಾ ಎರಡನೇ ಅಲೆ ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಆಕ್ಸಿಜನ್​ ಕೊರತೆಯು ಸಾಕಷ್ಟು ಸಾವುಗಳಿಗೆ ಕಾರಣವಾಗುತ್ತಿದೆ. ತಮ್ಮ ಕುಟುಂಬಸ್ಥರನ್ನು ಉಳಿಸಿಕೊಳ್ಳುವ ಜನರು ಪ್ರಯತ್ನವು ಕೊನೆಗೆ ಆಕ್ಸಿಜನ್​ ಕೊರತೆಯಿಂದ ವಿಫಲವಾಗುತ್ತಿದೆ.
ಶ್ರುತಿ ಸಹಾ ಎಂಬುವರು ರಾಜಧಾನಿಯ ಕೈಗಾರಿಕಾ ಎಸ್ಟೇಟ್​ನಲ್ಲಿರುವ ಆಕ್ಸಿಜನ್​ ಮರುಭರ್ತಿ ಘಟಕದ ಹೊರಗೆ ಕಾಯುತ್ತಿದ್ದಾಗ, ತಡವಾಗುತ್ತಿದ್ದಂತೆ ಕಂಗಾಲಾದ ಸಹಾ, ಘಟಕವನ್ನು ತೆರೆಯುವಂತೆ ಕಾಲಿಗೆ ಬಿದ್ದು ಕೇಳಿಕೊಂಡಳು. ಆದರೆ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕಾಯುವಂತೆ ಹೇಳಿದರು.
ಆದರೆ, ಸಮಯ ಮಾತ್ರ ಆಗುತ್ತಲೇ ಇತ್ತು. ಆದರೂ, ಸಹಾ ಕ್ಯೂನಲ್ಲಿ ಕಾಯುತ್ತಲೇ ನಿಂತಿದ್ದರು. ಈ ಮಧ್ಯೆ ಮನೆಯಿಂದ ಫೋನ್​ ಕರೆ ಒಂದು ಬಂದಿತು. ಫೋನ್​ ಕಾಲ್​ ರಿಸೀವ್​ ಮಾಡಿ ಮಾತನಾಡಿದ ಸಹಾಗೆ ಶಾಕ್​ ಆಯಿತು. ಆಕ್ಸಿಜನ್​ ಇಲ್ಲದೆ, ಆಕೆಯ ತಾಯಿ ಒದ್ದಾಡಿ ಅಷ್ಟರಲ್ಲಾಗಲೇ ಪ್ರಾಣವನ್ನು ಬಿಟ್ಟಿದ್ದರು.
ಈ ಸುದ್ದಿ ಕೇಳಿದ ಸಹಾ ತಕ್ಷಣ ಅಲ್ಲಿಯೇ ಕುಸಿದುಬಿದ್ದಳು. ಸುತ್ತಮುತ್ತಲಿದ್ದ ಮಂದಿ ಆಕೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದರು. ಎಚ್ಚರಗೊಂಡ ಸಹಾ ಖಾಲಿ ಆಕ್ಸಿಜನ್​ ಸಿಲಿಂಡರ್​ ಅಲ್ಲಿಯೇ ಬಿಟ್ಟು, ಮನೆಗೆ ಓಡಿದಳು.
ಈ ಬಗ್ಗೆ ಮಾತನಾಡಿರುವ ಸಹಾ, ಬೆಳಗ್ಗೆ 2 ಗಂಟೆಯಿಂದ ಆಕ್ಸಿಜನ್​ಗಾಗಿ ಹೊರಗಡೆಯೇ ಹುಡುಕಾಡುತ್ತಿದ್ದೇನೆ. ದೆಹಲಿಯ ಯಾವ ಭಾಗದಲ್ಲೂ ಆಕ್ಸಿಜನ್​ ಇಲ್ಲ. ಕೊನೆಗೆ ಕೈಗಾರಿಕಾ ಎಸ್ಟೇಟ್​ನಲ್ಲಿರುವ ಆಕ್ಸಿಜನ್​ ಮರುಭರ್ತಿ ಘಟಕದ ಬಳಿ ಹೋದೆವು. ನನ್ನ ತಾಯಿ ಸ್ಥಿತಿ ಗಂಭೀರವಾಗಿದೆ. ದಯವಿಟ್ಟು ಆಕ್ಸಿಜನ್​ ತುಂಬಿಕೊಡಿ ಎಂದು ಕೇಳಿಕೊಂಡರು ಅವರ ಮನಸ್ಸು ಕರಗಲಿಲ್ಲ ಎಂದು ಹೇಳುತ್ತಾ ಸಹಾ ಕಣ್ಣೀರಾಕಿದರು.(ಏಜೆನ್ಸೀಸ್​)
ಕರೊನಾ ಲಸಿಕೆ ನೀಡುವುದಾಗಿ ನಂಬಿಸಿ ಹುಡುಗಿಯನ್ನು ಕರೆದೊಯ್ದ ಯುವಕರಿಂದ ಗ್ಯಾಂಗ್​ರೇಪ್​
ತುರ್ತು ಕರೊನಾ ಪರಿಹಾರ ಸಾಮಗ್ರಿಗಳ ಮೊದಲನೆ ಕಂತನ್ನು ಭಾರತಕ್ಕೆ ರವಾನಿಸಿದ ಅಮೆರಿಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
