ಮುಂಬೈ:ಮನೆಯ ಸೂರಿನ ಒಳಗಿದ್ದ ಇಲಿಗಳ ಬಾಯಿಂದ ಸುಮಾರು 5 ಲಕ್ಷ ರೂ. ಮೌಲ್ಯದ 10 ತೊಲ ಬಂಗಾರವನ್ನು ವಶಕ್ಕೆ ಪಡೆದಿರುವ ವಿಚಿತ್ರ ಘಟನೆ ಮುಂಬೈನ ಗೊಕುಲಧಾಮ್​ ಕಾಲನಿಯಲ್ಲಿ ನಡೆದಿರುವುದಾಗಿ ಸಬ್​ ಇನ್ಸ್​ಪೆಕ್ಟರ್​ ಜಿ ಘಾರ್ಗೆ ಗುರುವಾರ ತಿಳಿಸಿದ್ದಾರೆ.
ಕೆಲವು ಇಲಿಗಳು ಕಸದ ರಾಶಿಯಿಂದ ಚಿನ್ನದ ಚೀಲವನ್ನು ಸೂರಿನ ಕೆಳಗೆ ತೆಗೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್​ಐ ಹೇಳಿದ್ದಾರೆ.
ಎಸ್​ಐ ಪ್ರಕಾರ, ಮಹಿಳೆಯೊಬ್ಬರು ಚಿನ್ನಾಭರಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಹೋಗುತ್ತಿದ್ದಾಗ ಅದನ್ನು ವಡಾ ಪಾವ್ ಎಂದು ತಪ್ಪಾಗಿ ಭಾವಿಸಿ ಬೀದಿಯಲ್ಲಿ ಮಕ್ಕಳಿಗೆ ನೀಡಿದ್ದರು. ಬಳಿಕ ಮಕ್ಕಳು ಬ್ಯಾಗ್​ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು.
ಇದಾದ ಬಳಿಕ ಬ್ಯಾಗ್ ಕಳೆದುಕೊಂಡಿರುವುದನ್ನು ಅರಿತು ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಲಿಗಳು ಬ್ಯಾಗ್​ ತೆಗೆದುಕೊಂಡು ಹೋಗಿ ಸೂರಿನ ಕೆಳಗೆ ಇಟ್ಟಿದ್ದನ್ನು ನೋಡಿ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.(ಏಜೆನ್ಸೀಸ್​)
ಪುರುಷರ ಜತೆ ಡೇಟಿಂಗ್​ ಮಾಡುವಂತೆ ಮಗಳಿಂದಲೇ ಬಲವಂತ! ಸಂಬಂಧದ ಗುಟ್ಟು ಬಿಚ್ಚಿಟ್ಟ ನಟಿ ಸುಚಿತ್ರಾ

ದೆಹಲಿ ಪೊಲೀಸರು ನನ್ನ ಬಟ್ಟೆ ಹರಿದು ಹಲ್ಲೆ ಮಾಡಿದ್ರು: ಸಂಸದೆಯ ವಿಡಿಯೋ ಶೇರ್​ ಮಾಡಿದ ಶಶಿ ತರೂರ್​

ದೇಶ ದಿವಾಳಿಯಾದ್ರೂ ಹಾಲಿ, ಮಾಜಿ ಪ್ರಧಾನಿಯರಿಗಿಂತ ಪತ್ನಿಯರೇ ಶ್ರೀಮಂತರು- ವರದಿ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
