ಹೈದರಾಬಾದ್​:ನನ್ನ ಮೇಲೆ ಪೊಲೀಸ್​ ಅಧಿಕಾರಿ ಹಲ್ಲೆ ಮಾಡಿದರು ಎಂದು ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ವ್ಯಕ್ತಿಯೊಬ್ಬ ಆರೋಪಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ತೋಳಲ್ಲಿ ತನ್ನ 8 ವರ್ಷದ ಮಗಳನ್ನು ಹೊತ್ತುಕೊಂಡು ಪೊಲೀಸ್​ ಅಧಿಕಾರಿಯ ಜತೆ ವಾಗ್ವಾದ ಮಾಡುತ್ತಿರುವ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ. ಹೆಲ್ಮೆಟ್​ ಧರಿಸಿಲ್ಲ ಎಂಬ ಕಾರಣಕ್ಕೆ ಸಬ್​ ಇನ್ಸ್​ಪೆಕ್ಟರ್​ ಒಬ್ಬರ ನನ್ನ ಕಪಾಳಕ್ಕೆ ಬಾರಿಸಿದರು ಎಂದು ಹಿರಿಯ ಪೊಲೀಸ್​ ಅಧಿಕಾರಿಯ ಮುಂದೆ ಸಂತ್ರಸ್ತ ವ್ಯಕ್ತಿ ಅಳಲು ತೋಡಿಕೊಂಡಿದ್ದಾನೆ. ಆದರೆ, ಹೊಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ವಿಡಿಯೋ ಆಧಾರವಿಲ್ಲ.
ಮಗಳೊಂದಿಗೆ ಶ್ರೀನಿವಾಸ್​ ಎಂಬುವರು ತರಕಾರಿ ತರಲು ಹೊರಗಡೆ ಹೋದಾಗ ಈ ಘಟನೆ ಸಂಭವಿಸಿದೆ. ಸಬ್​ ಇನ್ಸ್​ಪೆಕ್ಟರ್​ ಮುನಿರುಲ್ಲಾ ಮಧ್ಯ ಪ್ರವೇಶಿಸಿ ಹೆಲ್ಮೆಟ್​ ಧರಿಸಿಲ್ಲ ಅಂತಾ ಕಪಾಳಕ್ಕೆ ಬಾರಿಸಿದ್ದಾರೆ. ಬೇಕಾದರೆ ನೀವು ದಂಡ ವಿಧಿಸಿ ಆದರೆ, ನನ್ನ ಮೇಲೇಕೆ ನೀವು ಕೈ ಮಾಡುತ್ತೀರಾ ಎಂದು ಶ್ರೀನಿವಾಸ್​ ಎಸ್​ಐ ಮುನಿರುಲ್ಲಾರನ್ನು ಪ್ರಶ್ನಿಸಿರುವುದು ವಿಡಿಯೋದಲ್ಲಿದೆ. ತಂದೆಗೆ ಹೊಡೆದಿದ್ದನ್ನು ನೋಡಿ ಮಗು ಕೂಡ ವಿಚಲಿತಗೊಂಡಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ನಾವೇನು ತಪ್ಪು ಮಾಡಿಲ್ಲ, ಯೋಚನೆ ಮಾಡಬೇಡ ಮಗಳೇ ಎಂದು ಶ್ರೀನಿವಾಸ್​ ಹೇಳುತ್ತಿರುವುದು ಸಹ ವಿಡಿಯೋದಲ್ಲಿದೆ.
ಶ್ರೀನಿವಾಸ್​, ಮುನಿರುಲ್ಲಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ಉಸ್ತುವಾರಿ ಕೋಟಿ ರೆಡ್ಡಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತನ ಮಗಳ ಹೇಳಿಕೆಯು ಸಹ ವಿಡಿಯೋದಲ್ಲಿ ರೆಕಾರ್ಡ್​ ಆಗಿದ್ದು, ಹೆಲ್ಮೆಟ್​ ಹಾಕಿಲ್ಲ ಅಂತಾ ನಮ್ಮನ್ನು ತಡೆದು ನಿಂದಿಸಿದರು. ಅಲ್ಲದೆ, ಬೈಕ್​ ಕೀಯನ್ನು ಕಿತ್ತುಕೊಂಡರು. ಇದನ್ನು ಪ್ರಶ್ನಿಸಿ ಪ್ರತಿಭಟಿಸಿದಾಗ ನನ್ನ ತಂದೆಯ ಮೇಲೆ ಎಸ್​ಐ ಕೈ ಮಾಡಿದರು ಎಂದು ಬಾಲಕಿ ಹೇಳಿದ್ದಾಳೆ.
ವಿಡಿಯೋ ಕುರಿತ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಪೊಲೀಸರ ದುರಹಂಕಾರದ ಘಟನೆಗಳು ಮಿತಿಮೀರಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಕೆಲವರು ಇದನ್ನು ಕೋವಿಡ್-ಪ್ರೇರಿತ ಲಾಕ್‌ಡೌನ್‌ನ ಆರಂಭಿಕ ದಿನಗಳಿಗೆ ಹೋಲಿಸಿದ್ದು, ಪೊಲೀಸರು ನಿಯಮಗಳನ್ನು ಜಾರಿಗೊಳಿಸುವ ಉತ್ಸಾಹದಲ್ಲಿ ನಾಗರಿಕರ ವಿರುದ್ಧ ವಿವೇಚನಾರಹಿತವಾಗಿ, ಹಿಂಸಾತ್ಮಕವಾಗಿ ವರ್ತಿಸಿದ್ದಾರೆಂದು ದೂರಿದ್ದಾರೆ.(ಏಜೆನ್ಸೀಸ್​)
ಸಮವಸ್ತ್ರ ಧರಿಸಿ​ ಎಡವಟ್ಟು: ಮಹಿಳಾ ಪೊಲೀಸ್​ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

ಅಮ್ಮನ ಆಸ್ತಿ ಪಡೆಯಬೇಕಾದರೆ ಅಣ್ಣನ ಮಕ್ಕಳ ಸಹಿ ಬೇಕಾ? ಕಾನೂನು ಹೇಳುವುದೇನು? ಇಲ್ಲಿದೆ ಉತ್ತರ…

ಅಬ್ಬಬ್ಬಾ ಈ ಹುಡುಗನೇ! ಅಪ್ಪ ಬೈದರೆಂದು ಹೀಗೇ ಮಾಡೋದಾ? ಹೊಟ್ಟೆಯಲ್ಲಿ ಮೊಳೆಗಳನ್ನು ನೋಡಿ ಬೆಚ್ಚಿಬಿದ್ದ ವೈದ್ಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
