ಕಾಬುಲ್​:ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ರಕ್ತ ಚರಿತ್ರೆ ಆರಂಭವಾಗಿದೆ. ಅಮೆರಿಕ ಸೇನಾ ಹಿಂತೆಗೆತ ಬಳಿಕ ಆಫ್ಘಾನ್​​ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್​ ಬಂಡುಕೋರರು ರಕ್ತದೋಕುಳಿ ಬರೆದು ಇಡೀ ಆಫ್ಘಾನ್​ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ದಿನೇದಿನೆ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ನಡುವೆ ಭಾರತ ಆಫ್ಘಾನ್​ನ ರಾಯಭಾರ ಕಚೇರಿಯಲ್ಲಿರುವ ತನ್ನ ಸಿಬ್ಬಂದಿಯನ್ನು ವಾಯುಪಡೆಯ ವಿಶೇಷ ವಿಮಾನದಿಂದ ಆಫ್ಘಾನ್​ ರಾಜಧಾನಿ ಕಾಬುಲ್​ನಿಂದ ವಾಪಸ್​ ತವರಿಗೆ ಕರೆಸಿಕೊಳ್ಳುತ್ತಿದೆ.
ಪ್ರಸ್ತುತ ಆಫ್ಘಾನ್​ನಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಕಾಬೂಲ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಭಾರತೀಯ ಸಿಬ್ಬಂದಿಯನ್ನು ತಕ್ಷಣವೇ ಭಾರತಕ್ಕೆ ಕರೆತರಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಏಷ್ಯಾದ ದೇಶದಿಂದ ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ತಿಂಗಳ ನಂತರ ಭಾನುವಾರ ಸಂಜೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ್ದು, ಆಫ್ಘಾನ್​ನಲ್ಲಿ ಸಾಕಷ್ಟು ಬಿಕ್ಕಟ್ಟು ಉಂಟಾಗಿದೆ. ಆಫ್ಘಾನ್​ನಲ್ಲಿ ಸದ್ಯ ಅರಾಜಕತೆ ಸೃಷ್ಟಿಯಾಗಿದೆ.(ಏಜೆನ್ಸೀಸ್​)
ಆಫ್ಘಾನ್​ನಲ್ಲಿ ತಾಲಿಬಾನ್​ ರಕ್ತಚರಿತ್ರೆ: ಕೊನೆಗೂ ಮೌನ ಮುರಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದು ಹೀಗೆ..

ಬಡವರಿಗೆ ಹಂಚಿ ಬಿಡಿ! ಆತ್ಮಹತ್ಯೆಗೂ ಮುನ್ನ ದಂಪತಿ ಆಡಿರುವ ಮಾತುಗಳು ಕಣ್ಣೀರುವ ತರಿಸುವಂತಿದೆ

ಮಿಷನ್ ಫ್ರಂಟ್​ಲೈನ್​: ಕಮಾಂಡೊ ಆಗಿ ಸಾರಾ ಅಲಿ ಖಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + nine =
Remember me
