ನವದೆಹಲಿ:ರಾಷ್ಟ್ರೀಯ ಭದ್ರತೆಗೆ ಮಾರಕ ಅನಿಸಿರುವ ಚೀನಾದ 54 ಆ್ಯಪ್​ಗಳನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ (ಫೆ.14) ಬ್ಯಾನ್​ ಮಾಡಿದೆ.
ಬ್ಯೂಟಿ ಕ್ಯಾಮೆರಾ: ಸ್ವೀಟ್​ ಸೆಲ್ಫಿ ಎಚ್​ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್​ ಮತ್ತು ಬಾಸ್​ ಬೂಸ್ಟರ್​, ಕ್ಯಾಕ್​ಕಾರ್ಡ್​ ಫಾರ್​ ಸೇಲ್ಸ್​ಫೋರ್ಸ್​ ಇಎನ್​ಟಿ, ಐಸೋಲ್ಯಾಂಡ್​ 2: ಆ್ಯಶಸ್​ ಆಫ್​ ಟೈಮ್​ ಲೈಟ್​, ವಿವಾ ವಿಡಿಯೋ ಎಡಿಟರ್​, ಟೆನ್ಸೆಂಟ್​ ರಿವರ್​, ಆನ್​ಮ್ಯೊಜಿ ಚೆನ್​, ಆನ್​ಮ್ಯೊಜಿ ಅರೇನಾ, ಆ್ಯಪ್​ಲಾಕ್​ ಮತ್ತು ಡ್ಯುಯಲ್​ ಸ್ಪೇಸ್​ ಲೈಟ್​ ಸೇರಿದಂತೆ ಒಟ್ಟು 54 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ.
ಜೂನ್​ 2020ರಿಂದ ಪ್ರಖ್ಯಾತ ಆ್ಯಪ್​ಗಳಾದ ಟಿಕ್​ಟಾಕ್​, ಶೇರ್​ಇಟ್​, ವೀಚಾಟ್​, ಹೆಲೋ, ಲೈಕೀ, ಯುಸಿ ನ್ಯೂಸ್​, ಬಿಗೋ ಲೈವ್​​​, ಯುಸಿ ಬ್ರೌಸರ್​, ಇಎಸ್​ ಫೈಲ್​ ಎಕ್ಸ್​ಪ್ಲೋರರ್​ ಮತ್ತು ಎಂಐ ಕಮ್ಯೂನಿಟಿ ಸೇರಿದಂತೆ ಚೀನಾದ 224 ಚೀನಾ ಆ್ಯಪ್​ಗಳನ್ನು ಸರ್ಕಾರ ಬ್ಯಾನ್​ ಮಾಡಿದೆ.
ತಂತ್ರಜ್ಞಾನ ಸಚಿವಾಲಯ ಪ್ರಕಾರ ಈಗ ಬ್ಯಾನ್​ ಮಾಡಲು ಮುಂದಾಗಿರುವ 54 ಆ್ಯಪ್​ಗಳಲ್ಲಿ ಈ ಹಿಂದೆ ಬ್ಯಾನ್​ ಆಗಿದ್ದ ಆ್ಯಪ್​ಗಳು ಸೇರಿವೆ. ಏಕೆಂದರೆ, ಈ ಹಿಂದೆ ಬ್ಯಾನ್​ ಮಾಡಲಾಗಿದ್ದ ಆ್ಯಪ್​ಗಳನ್ನು ಹೊಸ ಹೆಸರಿನಲ್ಲಿ ಮತ್ತೆ ಲಾಂಚ್​ ಮಾಡಲಾಗಿದೆ. ಹೀಗಾಗಿ ಅಂತಹ ಆ್ಯಪ್​ಗಳು ಸೇರಿದಂತೆ ಒಟ್ಟು 54 ಆ್ಯಪ್​ಗಳನ್ನು ಸರ್ಕಾರ ಬ್ಯಾನ್ ಮಾಡಲಿದೆ.(ಏಜೆನ್ಸೀಸ್​)
ಬಿಜೆಪಿ ಶಾಸಕ ಅನಿಲ್​ ಬೆನಕೆ ಕಚೇರಿ ಮೇಲೆ ಪಾನಮತ್ತ ಯುವಕನಿಂದ ಕಲ್ಲು ತೂರಾಟ

ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ರಜನಿಕಾಂತ್ ಸಿನಿಮಾ ಶುರು: ತಲೈವಾ ಚಿತ್ರಕ್ಕೆ ನೆಲ್ಸನ್​ ನಿರ್ದೇಶನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
