ನವದೆಹಲಿ:ಭಾರತೀಯ ವಾಯುಸೇನೆಯ ಮಿಗ್​-21 ಫೈಟರ್​ ಜೆಟ್​ ಪತನಗೊಂಡು ಪೈಲಟ್​ ವಿಂಗ್​ ಕಮಾಂಡರ್​ ಹರ್ಷಿತ್​ ಸಿನ್ಹಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಬಳಿ ಶುಕ್ರವಾರ (ಡಿ.24) ರಾತ್ರಿ ನಡೆದಿದೆ.
ಈ ಮಾಹಿತಿಯನ್ನು ವಾಯುಸೇನೆಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಖಚಿತಪಡಿಸಿದೆ. ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಮಿಗ್​-21 ಫೈಟರ್​ ಜೆಟ್ ತರಬೇತಿ ವಿಹಾರದ ಸಮಯದಲ್ಲಿ ಪಶ್ಚಿಮ ವಲಯದಲ್ಲಿ ಪತನಗೊಂಡಿದೆ. ಮತ್ತಷ್ಟು ಮಾಹಿತಿ ಬರಬೇಕಿದ್ದು, ತನಿಖೆ ಆದೇಶಿಸಲಾಗಿದೆ ಎಂದು ತಿಳಿಸಿದೆ.
This evening, around 8:30 pm, a MiG-21 aircraft of IAF met with a flying accident in the western sector during a training sortie. Further details are awaited.An inquiry is being ordered.
— Indian Air Force (@IAF_MCC)December 24, 2021

ರಾಜಸ್ಥಾನದ ಸ್ಯಾಮ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಡೆಸೆರ್ಟ್​ ನ್ಯಾಷನಲ್​ ಪಾರ್ಕ್​ ಏರಿಯಾದಲ್ಲಿ ಜೆಟ್​ ಪತನಗೊಂಡಿದೆ ಎಂದು ಜೈಸಲ್ಮೇರ್ ಪೊಲೀಸ್​ ವರಿಷ್ಠಾಧಿಕಾರಿ ಅಜಯ್​ ಸಿಂಗ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲವು ಗಂಟೆಗಳ ಬಳಿಕ ಮತ್ತೊಂದು ಟ್ವೀಟ್​ ಮಾಡಿರುವ ವಾಯುಸೇನೆ, ಜೆಟ್​ ಪತನದಲ್ಲಿ ಪೈಲಟ್​ ವಿಂಗ್​ ಕಮಾಂಡರ್​ ಹರ್ಷಿತ್​ ಸಿನ್ಹಾ ಹುತಾತ್ಮರಾಗಿದ್ದಾರೆ ಎಂದು ಹೇಳಲು ಅತೀವ ದುಃಖವಾಗುತ್ತಿದೆ. ಈ ಸಂದರ್ಭದಲ್ಲಿ ದಿಟ್ಟ ಯೋಧನ ಕುಟುಂಬದ ಜತೆ ನಾವೆಲ್ಲರು ನಿಲ್ಲುತ್ತೇವೆ ಎಂದಿದೆ.(ಏಜೆನ್ಸೀಸ್​)
With deep sorrow, IAF conveys the sad demise of Wing Commander Harshit Sinha in the flying accident this evening and stands firmly with the family of the braveheart.
— Indian Air Force (@IAF_MCC)December 24, 2021

ದುಡ್ಡು ಇಲ್ಲ, ಮನೆಯೂ ಸಿಗಲಿಲ್ಲ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ನಟ, ನಿರ್ದೇಶಕ ನಾಗಶೇಖರ್​

ಸಾರ್ವಜನಿಕರ ಕ್ಷಮೆಯಾಚಿಸದಿದ್ರೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ: ಸನ್ನಿ ಲಿಯೋನ್​ಗೆ ಅರ್ಚಕರ ಎಚ್ಚರಿಕೆ

ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
