ಇಂದೋರ್​:ಟಿಕ್​ಟಾಕ್​ನಂತಹ ವಿಡಿಯೋ ಕ್ರೇಜ್​ ಹುಟ್ಟಿಕೊಂಡಾಗಿನಿಂದ ಯುವಕರಿಂದಿಡಿದು ವಯಸ್ಸಾದ ವ್ಯಕ್ತಿಯವರೆಗೂ ಎಲ್ಲರೂ ಸ್ವಯಂ ವಿಡಿಯೋ ಮಾಡುವ ಗೀಳಿಗೆ ಬಿದ್ದಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳ ಭರಾಟೆ ಭಾರೀ ಜೋರಾಗಿದೆ. ಆದರೆ, ಕೆಲವೊಮ್ಮೆ ಅತಿರೇಕದ ವಿಡಿಯೋಗಳು ನಮ್ಮ ಕಣ್ಣ ಮುಂದೆ ಬಂದು ಹೋಗಿವೆ.
ಮಧ್ಯಪ್ರದೇಶದ ಇಂದೋರ್​ನಲ್ಲಿ ಯುವತಿಯೊಬ್ಬಳು ಟ್ರಾಫಿಕ್​ ಸಿಗ್ನಲ್​ನಲ್ಲಿ ಡ್ಯಾನ್ಸ್​ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆ ಕೇಳಿಬರುತ್ತಿದೆ. ಇಂದೋರ್​ನ ವಾಹನನಿಬಿಡ ರಸ್ತೆ ರಾಸೊಮಾ ಸ್ಕ್ವೇರ್​ನ ಟ್ರಾಫಿಕ್​ ಸಿಗ್ನಲ್​ ಬಳಿ ಯುವತಿ ಸೊಂಟ ಬಳುಕಿಸಿದ್ದಾಳೆ.


A post shared by Shreya Kalra (@shreyakalraa)

ರಸ್ತೆಯ ಮಧ್ಯೆ ಯುವತಿ ಡ್ಯಾನ್ಸ್​ ಮಾಡುವುದನ್ನು ನೋಡಿದ ಸವಾರರು ಇದು ಪೊಲೀಸ್​ ಇಲಾಖೆಯ ಅಭಿಯಾನ ಇರಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡರು. 30 ಸೆಕೆಂಡ್​ ವಿಡಿಯೋದಲ್ಲಿ ರೆಡ್​ ಸಿಗ್ನಲ್​ ಬೀಳುತ್ತಿದ್ದಂತೆ ಝೀಬ್ರಾ ಕ್ರಾಸಿಂಗ್​ ಬಳಿ ಬರುವ ಯುವತಿ ಶ್ರೇಯಾ ಕಾರ್ಲಾ ಗ್ರೀನ್​ ಸಿಗ್ನಲ್​ ಬೀಳುವವರೆಗೂ ಹಾಡೊಂದಕ್ಕೆ ಡ್ಯಾನ್ಸ್​ ಮಾಡಿದ್ದಾಳೆ. ಆಕೆ ಮಾಡೆಲ್​ ಎಂದು ತಿಳಿದುಬಂದಿದೆ. ಇನ್ನು ವಿಡಿಯೋದಲ್ಲಿ ಸರಿಯಾಗಿ ಮಾಸ್ಕ್​ ಧರಿಸುವಂತಲೂ ಯುವತಿ ಮನವಿ ಮಾಡಿದ್ದಾಳೆ.
A post shared by Shreya Kalra (@shreyakalraa)

ವಿಡಿಯೋ ನೋಡಿರುವ ಪೊಲೀಸ್​ ಅಧಿಕಾರಿಗಳು ಯುವತಿಯ ನಡೆಯಿಂದ ಅಸಮಾಧಾನಗೊಂಡಿದ್ದು ಇದು ಸಂಚಾರಿ ನಿಯಮ ಉಲ್ಲಂಘನೆ ಎಂದು ನೋಟಿಸ್​ ಕಳುಹಿಸಿದ್ದಾರೆ. ಈ ರೀತಿಯಾಗಿ ವರ್ತಿಸಬೇಡಿ ಎಂದು ಸಂಚಾರ ವಿಭಾಗ ಕೂಡ ಯುವ ಜನಾಂಗದಲ್ಲಿ ಮನವಿ ಮಾಡಿಕೊಂಡಿದೆ. ನಿಮ್ಮ ಮನರಂಜನೆ ಬೇರೆಯವರಿಗೆ ಹಾನಿ ಉಂಟು ಮಾಡಬಹುದು ಎಂದಿದೆ.


A post shared by Shreya Kalra (@shreyakalraa)

ನೋಟಿಸ್​ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವತಿ ಶ್ರೇಯಾ, ನಾನು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದಿದ್ದಾಳೆ. ವಿಡಿಯೋ ಹಿಂದೆ ರೆಡ್​ ಸಿಗ್ನಲ್​ ಬಿದ್ದಾಗ ವಾಹನಗಳನ್ನು ನಿಲ್ಲಿಸಬೇಕು ಮತ್ತು ಮಾಸ್ಕ್​ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿದೆಯೋ ಹೊರತು ಬೇರೇನೂ ಇಲ್ಲ. ನನ್ನ ಹಾಗೇ ಮಾಡುವಂತೆ ನಾನು ಯಾರಿಗೂ ಪ್ರಭಾವ ಬೀರಿಲ್ಲ ಎಂದು ಸಮಜಾಯಿಷಿ ನೀಡಿದ್ದಾಳೆ.(ಏಜೆನ್ಸೀಸ್​)


A post shared by Shreya Kalra (@shreyakalraa)

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:five × one =
Remember me
