ಹೈದರಾಬಾದ್​:ಕೆಲವರು ಇನ್​​ಸ್ಟಾಗ್ರಾಂ ರೀಲ್ಸ್​ ಮಾಡಲು ತಮ್ಮ ಪ್ರಾಣವನ್ನು ಸಹ ಪಣಕ್ಕಿಡುತ್ತಾರೆ. ಲೈಕ್ಸ್​ ಮತ್ತು ಕಾಮೆಂಟ್​ ಗಿಟ್ಟಿಸಿಕೊಳ್ಳುವ ಸಲುವಾಗಿ ಹಿಂದೆ-ಮುಂದೆ ಯೋಚಿಸದೆ, ಅಪಾಯಕಾರಿ ಸ್ಥಳಗಳಲ್ಲಿಯೂ ವಿಡಿಯೋ ಮಾಡುತ್ತಾರೆ. ಈ ರೀತಿಯ ದುಸ್ಸಾಹಸಕ್ಕೆ ಕೈಹಾಕಿ ಪ್ರಾಣ ಬಿಟ್ಟ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಇನ್ನು ಕೆಲವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದನ್ನು ನೋಡಿದ್ದೇವೆ. ಇಂಥದ್ದೇ ಒಂದು ಘಟನೆ ಇದೀಗ ನಡೆದಿದೆ.
ತೆಲಂಗಾಣದ ವಾರಂಗಲ್​ ಮೂಲದ 11ನೇ ತರಗತಿ ವಿದ್ಯಾರ್ಥಿ ರೈಲು ಹಳಿಯ ಮೇಲೆ ನಿಂತು ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವಾಗ, ಹಿಂಬದಿಯಿಂದ ರೈಲು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ವಿದ್ಯಾರ್ಥಿಯ ಹೆಸರು ಅಜಯ್​.
ಅಜಯ್​​ಗೆ ಚಲಿಸುವ ರೈಲಿನ ಬ್ಯಾಕ್​ಗ್ರೌಂಡ್​ ಇರುವ ವಿಡಿಯೋ ಬೇಕಾಗಿತ್ತು. ಅದಕ್ಕಾಗಿ ಆತ ವಾರಂಗಲ್​ನ ಕಾಜೀಪೇಟ್​ ಬಳಿಯಿರುವ ವದ್ದೆಪಲ್ಲಿಯ ರೈಲು ಹಳಿಗಳ ಮೇಲೆ ನಿಂತು, ರೈಲು ಬರುವ ಸಮಯದಲ್ಲಿ ವಿಡಿಯೋ ಮಾಡುವಾಗ, ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸೆಕ್ಕೆ ಅಜಯ್​ ಹಾರಿ ಹೋಗಿಬಿದ್ದಿದ್ದಾನೆ.
ಗಂಭೀರ ಗಾಯಗೊಂಡಿದ್ದ ಅಜಯ್​ನನ್ನು ಆತನ ಪಕ್ಕದಲ್ಲೇ ವಿಡಿಯೋ ಮಾಡುತ್ತಿದ್ದ ಸ್ನೇಹಿತರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಜಯ್​ಗೆ ವಾರಂಗಲ್​ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಬಾಲಿವುಡ್​​ ಟಾರ್ಗೆಟ್​ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್​!

ರಸ್ತೆ ಅಪಘಾತ, ಪ್ರತಿ 60 ನಿಮಿಷಕ್ಕೆ 18 ಮಂದಿ ಬಲಿ: ಎನ್​ಸಿಆರ್​ಬಿ ವರದಿಯಲ್ಲಿ ಬಹಿರಂಗ

ಬಿಸಿಯೂಟ ತಯಾರಕರ ಬದುಕು ಮೂರಾಬಟ್ಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 9 =
Remember me
