ಅನಂತಪುರ್​:ದ್ವಿಚಕ್ರ ವಾಹನ ಮತ್ತು ಸೆಲ್​ಫೋನ್​ ತೆಗೆದುಕೊಡಲಿಲ್ಲ ಎಂದು ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ್​ ಜಿಲ್ಲೆಯ ಗಂಡ್ಲಪೆಂಟಾದಲ್ಲಿ ಗುರುವಾರ ನಡೆದಿದೆ.
ರೆಡ್ಡಿ ಭಾಷಾ (18) ಆತ್ಮಹತ್ಯೆ ಮಾಡಿಕೊಂಡ ಪಿಯು ವಿದ್ಯಾರ್ಥಿ. ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ. ಮೃತ ಭಾಷಾ ಮಲಮೆದಪಲ್ಲಿ ಪಂಚಾಯಿತಿಯ ಅರಮದಕವಾರಿಪಲ್ಲಿ ಗ್ರಾಮದ ನಿವಾಸಿ. ಕದಿರಿಯ ಖಾಸಗಿ ಕಾಲೇಜು ಒಂದರಲ್ಲಿ ಪಿಯು ಓದುತ್ತಿದ್ದ.
ತನಗೆ ದ್ವಿಚಕ್ರ ವಾಹನ ಮತ್ತು ಸೆಲ್​ಫೋನ್​ ಬೇಕೆಂದು ತನ್ನ ತಂದೆ ನಬಿಯನ್ನು ಕೇಳಿದ್ದ. ಆದರೆ, ಆರ್ಥಿಕವಾಗಿ ಭಾಷಾ ಕುಟುಂಬ ಹಿಂದುಳಿದಿದ್ದರಿಂದ ತಂದೆ ನಿರಾಕರಿಸಿದರು. ಇದರಿಂದ ಮನನೊಂದ ಭಾಷಾ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ತಿಳಿದಕೂಡಲೇ ಆತನನ್ನು ಕದಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರ್​ಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
VIDEO: ಜಾಲತಾಣದಲ್ಲಿ ಸುದ್ದಿ ಮಾಡ್ತಿದೆ ‘ಪಾನೀಪುರಿ ಮದುವೆ’- ಮದುಮಗಳಿಗೆ ವಿಶೇಷ ಅಲಂಕಾರ

ಮಹಿಳೆಯ ಸೀರೆ ಎಳೆದ ಪ್ರಕರಣಕ್ಕೆ ಟ್ವಿಸ್ಟ್​: ಬಿಜೆಪಿ ಕಾರ್ಯಕರ್ತರ ವಿರುದ್ಧವೇ ದೂರು ದಾಖಲು

VIDEO: ‘ಅಯ್ಯೋ ನನ್‌ ಬೂಟ್‌ ಒದ್ದೆಯಾಗತ್ತೆ’ ಅಂತ ಚಡಪಡಿಸಿದ ಮೀನುಗಾರರ ಸಚಿವ! ಮುಂದೇನಾಯ್ತು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
