ನವದೆಹಲಿ:ಆಸ್ಟ್ರೇಲಿಯಾದ ಆಲ್​ರೌಂಡರ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಆಟಗಾರ ಗ್ಲೇನ್​ ಮ್ಯಾಕ್ಸ್​ವೆಲ್​ ಅವರು ಭಾರತೀಯ ಮೂಲದ ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಶುಕ್ರವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮದುವೆ ಆಗಿದ್ದಾರೆ.
ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಮ್ಯಾಕ್ಸ್​ವೆಲ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ದಂಪತಿ ಪರಸ್ಪರ ಕೈಹಿಡಿದು ರಿಂಗ್​ಗಳನ್ನು ಪ್ರದರ್ಶಿಸಿದ್ದಾರೆ. ಪ್ರೀತಿ ಎಂಬುದು ಪರಿಪೂರ್ಣತೆಯ ಹುಡುಕಾಟ ಮತ್ತು ನಿನ್ನ ಜತೆ ನಾನು ಪರಿಪೂರ್ಣ ಎಂಬ ಭಾವ ವ್ಯಕ್ತವಾಗುತ್ತಿದೆ ಎಂದು ಬರೆದುಕೊಂಡಿರುವ ಮ್ಯಾಕ್ಸ್​ವೆಲ್​ 18/3/22 ಮದುವೆ ದಿನಾಂಕವನ್ನು ಉಲ್ಲೇಖಿಸಿದ್ದಾರೆ.

ಇದಲ್ಲದೆ, ದಂಪತಿ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಇಬ್ಬರು ತುಟಿಗೆ ಚುಂಬಿಸುತ್ತಿರುವ ದೃಶ್ಯವಿದ್ದು, ಮಿಸ್ಟರ್​ ಆ್ಯಂಡ್​ ಮಿಸೆಸ್​ ಮ್ಯಾಕ್ಸ್​ವೆಲ್​ ಎಂದು ಬರೆಯಲಾಗಿದೆ. ಗರ್ಲ್​ಫ್ರೆಂಡ್​ ವಿನಿ ರಾಮನ್​ರೊಂದಿಗೆ ಎಂಗೇಜ್​ಮೆಂಟ್​ ಮಾಡಿಕೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ, ಇಬ್ಬರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇತ್ತು. ಕೊನೆಗೂ ಉತ್ತರ ಸಿಕ್ಕಿದ್ದು, ಅಭಿಮಾನಿಗಳು ನೂತನ ದಂಪತಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈಗಾಗಲೇ ಫೋಟೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿದೆ.
2017ರಿಂದಲೂ ಡೇಟಿಂಗ್​ ನಡೆಸುತ್ತಿದ್ದ ಜೋಡಿ 2020ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಭಾವಿ ಪತ್ನಿಯೊಂದಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋವನ್ನು ಮ್ಯಾಕ್ಸ್​ವೆಲ್ ಇನ್​ಸ್ಟಾಗ್ರಾಂನಲ್ಲಿ ರಿಂಗ್​ ಎಮೋಜಿಯೊಂದಿಗೆ ಪೋಸ್ಟ್​ ಮಾಡಿಕೊಂಡಿದ್ದರು. ಫೋಟೋದಲ್ಲಿ ವಿನಿ ರಾಮನ್​ ಮ್ಯಾಕ್ಸ್​ವೆಲ್​ ತೊಡಿಸಿರುವ ರಿಂಗ್​ ಅನ್ನು ಪ್ರದರ್ಶಿಸಿದ್ದರು. ಇದಾದ ಬಳಿಕ ಇಬ್ಬರ ನಿಶ್ಚಿತಾರ್ಥ ಸುದ್ದಿ ಹರಿದಾಡಿತ್ತು. ನಂತರ 2020ರ ಮಾರ್ಚ್​ ತಿಂಗಳಲ್ಲಿ ಮೆಲ್ಬೋರ್ನ್​ನ ಉಪನಗರ ತೋರಕ್​ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು. ಅಂದಿನಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಅಂದಹಾಗೆ ವಿನಿ ರಾಮನ್​ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್​ ಸೈನ್ಸ್​ ವಿಭಾಗದಲ್ಲಿ ಮೆಂಟನ್​​ ಗರ್ಲ್ಸ್​ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್​ನಲ್ಲಿ ಫಾರ್ಮಸಿಸ್ಟ್​ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್​ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.
ಇನ್ನು ಮ್ಯಾಕ್ಸ್​ವೆಲ್​ 2022ರ ಐಪಿಎಲ್​ ಹರಾಜಿನಲ್ಲಿ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದು, ಈ ಬಾರಿಯು ಅವರನ್ನು ಆರ್​ಸಿಬಿ ಉಳಿಸಿಕೊಂಡಿದೆ. ಕಳೆದ ಬಾರಿ ಆರ್​ಸಿಬಿ ತಂಡದಲ್ಲಿ ಮ್ಯಾಕ್ಸಿ ಉತ್ತ ಪ್ರದರ್ಶನ ನೀಡಿದ್ದರು.(ಏಜೆನ್ಸೀಸ್​)

A post shared by VINI (@vini.raman)

ಭೀಕರ ರಸ್ತೆ ಅಪಘಾತದಲ್ಲಿ ಇಂಟರ್ನೆಟ್​ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್​ ದುರಂತ ಸಾವು

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಕುರಿತು ಶಾಕಿಂಗ್​ ಕಾಮೆಂಟ್: ವೈರಲ್​ ಆಗ್ತಿದೆ ಪ್ರಕಾಶ್​ ರಾಜ್ ಟ್ವೀಟ್​​

ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
