ನವದೆಹಲಿ:ಪ್ರತಿ ತಿಂಗಳ ಕೊನೆಯ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ನಡೆಸುವ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ನ 84ನೇ ಹಾಗೂ ಈ ವರ್ಷದ ಕೊನೆಯ ಕಂತಿನಲ್ಲಿ ಇಂದು ಪ್ರಧಾನಿಯವರು ಹಲವಾರು ವಿಷಯಗಳ ಕುರಿತು ಮಾತನಾಡಿದರು.ನನ್ನ ಆತ್ಮೀಯ ದೇಶವಾಸಿಗಳೆ ನಮಸ್ಕಾರ ಎಂದು ಮಾತು ಆರಂಭಿಸಿದ ಪ್ರಧಾನಿ ಮೋದಿ, ಸದ್ಯ ನೀವೆಲ್ಲ 2021ನೇ ವರ್ಷಕ್ಕೆ ಗುಡ್​ಬೈ ಹೇಳಿ, 2022ರ ನೂತನ ವರ್ಷವನ್ನು ಬರಮಾಡಿಕೊಳ್ಳಲು ತಯಾರಿಯಲ್ಲಿ ಬಿಜಿಯಾಗಿದ್ದೀರಿ ಎಂದು ತಿಳಿದಿದೆ. ಕಳೆದ ವರ್ಷಕ್ಕಿಂತ ಈ ಹೊಸ ವರ್ಷದಲ್ಲಿ ತಮ್ಮ ಜೀವನದಲ್ಲಿ ಮತ್ತಷ್ಟು ಸುಧಾರಣೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಿಯೊಬ್ಬರು ಹಾಗೂ ಪ್ರತಿ ಸಂಘಟನೆಗಳು ಪ್ರತಿಜ್ಞೆ ಮಾಡಬೇಕು ಎಂದರು.
ಕರೊನಾ ವೈರಸ್​ ಹೊಸ ರೂಪಾಂತರಿ ಒಮಿಕ್ರಾನ್​ ನಮ್ಮ ಬಾಗಿಲನ್ನು ತಟ್ಟಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ಜಾಗತಿಕ ಸಾಂಕ್ರಾಮಿಕವನ್ನು ಸೋಲಿಸಲು ನಾಗರಿಕರಾಗಿ ನಮ್ಮ ಪ್ರಯತ್ನವು ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ವ ಅರಿವು ಮತ್ತು ಸ್ವಯಂ ಶಿಸ್ತು ಕೂಡ ಅಗತ್ಯವಾಗಿದೆ. ಸಾಂಕ್ರಮಿಕವನ್ನು ಮಟ್ಟಹಾಕಲು ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಈ ತಿಂಗಳು ತಮಿಳುನಾಡಿನಲ್ಲಿ ಅಪಘಾತಕ್ಕೀಡಾದ ದುರದೃಷ್ಟಕರ ಹೆಲಿಕಾಪ್ಟರ್ ಅನ್ನು ಹಾರಿಸುತ್ತಿದ್ದರು. ಈ ಅಪಘಾತದಲ್ಲಿ ನಾವು ನಮ್ಮ ದೇಶದ ಮೊದಲ ಸೇನಾ ಮುಖ್ಯಸ್ಥರಾದ ಜನರಲ್ ರಾವತ್ ಅವರನ್ನು ಕಳೆದುಕೊಂಡಿದ್ದೇವೆ. ಅವರೊಂದಿಗೆ ಅವರ ಪತ್ನಿ ಮತ್ತು ಅನೇಕರು ನಮ್ಮನ್ನು ಬಿಟ್ಟು ಹುತಾತ್ಮರಾಗಿದ್ದಾರೆ. ವರುಣ್​ ಸಿಂಗ್​ ಸಾವು-ಬದುಕಿನೊಂದಿಗೆ ಹಲವು ದಿನಗಳವರೆಗೆ ಹೋರಾಡಿದರು ಆದರೆ, ದುರಾದೃಷ್ಟವಶಾತ್​ ನಮ್ಮನ್ನು ತೊರೆದು ಹುತಾತ್ಮರಾದರು ಎಂದು ಪ್ರಧಾನಿ ಭಾವುಕರಾದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆಸ್ಪತ್ರೆಯಲ್ಲಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ನನ್ನ ಹೃದಯವನ್ನು ಮುಟ್ಟಿದ ಸಂಗತಿಯೊಂದನ್ನು ನೋಡಿದೆ. ಈ ವರ್ಷ ಆಗಸ್ಟ್‌ನಲ್ಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಪ್ರಶಸ್ತಿಯ ನಂತರ ಅವರು ತಮ್ಮ ಶಾಲೆಯ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಓದಿದ ನಂತರ ನನ್ನ ಮನಸ್ಸಿನಲ್ಲಿ ಮೂಡಿದ ಮೊದಲ ಆಲೋಚನೆ ಏನೆಂದರೆ, ಯಶಸ್ಸಿನ ಉತ್ತುಂಗವನ್ನು ಮುಟ್ಟಿದರೂ ಅವರು ತಮ್ಮ ಬೇರುಗಳನ್ನು ಮರೆತಿರಲಿಲ್ಲ ಎಂದು ಪ್ರಧಾನಿ ಮೋದಿ ವರುಣ್​ ಸಿಂಗ್​ ಅವರನ್ನು ಸ್ಮರಿಸಿದರು.
ಪ್ರತಿ ವರ್ಷ ನಾನು ‘ಪರೀಕ್ಷಾ ಪೇ ಚರ್ಚಾ’ದಲ್ಲಿ ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುತ್ತೇನೆ. ಈ ವರ್ಷವೂ ನಾನು ಪರೀಕ್ಷೆಯ ಮೊದಲು ಚರ್ಚೆ ನಡೆಸುತ್ತೇನೆ. ಇದರ ಅಡಿಯಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸ್ಪರ್ಧೆಯನ್ನು ಸಹ ಆಯೋಜಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಈ ಒಂದು ವಿಷಯದಲ್ಲಿ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದ ತೆಲಂಗಾಣ!
ವೈಯಕ್ತಿಕ ದ್ವೇಷಕ್ಕಾಗಿ ಕೀಳುಮಟ್ಟಕ್ಕಿಳಿದ ಎಸ್​ಐ: ಅಪ್ರಾಪ್ತ ಮಗಳ ದುರ್ಬಳಕೆ, ತನಿಖೆಯಲ್ಲಿ ಕಟ್ಟುಕತೆ ಬಯಲು
ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ವಿಶ್ವದ ಟೆಕ್​ ದೈತ್ಯ ಗೂಗಲ್​ ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದ ಟಿಕ್​ಟಾಕ್​!

Sign in to your account
Please enter an answer in digits:7 + 16 =
Remember me
