ವಿಜಯವಾಡ:ನಟ ಸೂರ್ಯ ಅಭಿನಯದ ವಿಶ್ವ ಮನ್ನಣೆ ಪಡೆದ ಜೈ ಭೀಮ್​ ಚಿತ್ರದ ಮಾದರಿಯಲ್ಲೇ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಘಟನೆಯೊಂದು ನಡೆದಿದೆ. ಜೈಭೀಮ್​ ಚಿತ್ರದಲ್ಲಿ ಮಾಡದ ಕಳ್ಳತನವನ್ನು ದಲಿತ ವ್ಯಕ್ತಿಯ ಹಣೆಗೆ ಕಟ್ಟಿ ಪೊಲೀಸರು ಚಿತ್ರಹಿಂಸೆ ನೀಡಿದ್ದರು. ಅದೇ ರೀತಿಯ ಘಟನೆ ಚಿತ್ತೂರಿನಲ್ಲಿ ನಡೆದಿದೆ. ಇಲ್ಲಿ ವ್ಯತ್ಯಾಸವೇನೆಂದರೆ ಚಿತ್ರದಲ್ಲಿ ಹಿಂಸೆ ಅನುಭವಿಸುವುದು ಪುರುಷನಾದರೆ, ಇಲ್ಲಿ ಮಹಿಳೆಯೊಬ್ಬಳು ಪೊಲೀಸರಿಂದ ಚಿತ್ರ ಹಿಂಸೆ ಅನುಭವಿಸಿದ್ದಾಳೆ.
ಚಿತ್ತೂರು ಜಿಲ್ಲೆಯ ಲಕ್ಷ್ಮೀ ನಗರ ಕಾಲನಿಯ ನಿವಾಸಿ ಉಮಾ ಮಹೇಶ್ವರಿ ಜಿಲ್ಲೆಯ ಜೈಲು ಸೂಪರಿಂಟೆಂಡೆಂಟ್​ ವೇಣು ಗೋಪಾಲ್​ ರೆಡ್ಡಿ ಎಂಬುವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಹಣ ಕಾಣೆಯಾಗಿದೆ. ಈ ಬಗ್ಗೆ ಸರಿಯಾದ ವಿಚಾರಣೆ ನಡೆಸದೇ ವೇಣು ಗೋಪಾಲ್​ ರೆಡ್ಡಿ ಉಮಾ ಮಹೇಶ್ವರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಮಾ ಮಹೇಶ್ವರಿ ಇದೇ ತಿಂಗಳ 18ರಂದು ಚಿತ್ತೂರು ಠಾಣೆಯ ಪೊಲೀಸರು ನನ್ನನ್ನು ಠಾಣೆಗೆ ಕರೆದರು. ಬಳಿಕ ನನ್ನ ಬೆರಳಚ್ಚು ಪಡೆದರು. ನಂತರ 19ರಂದು ನನ್ನನ್ನು ಠಾಣೆಗೆ ಮತ್ತೊಮ್ಮೆ ಕರೆಸಿ ಮನಬಂದತೆ ಥಳಿಸಿದ್ದಾರೆ. ನಾನು ಪ್ರಜ್ಞೆ ತಪ್ಪುವವರೆಗೂ ನನಗೆ ಥಳಿಸಲಾಯಿತು. ಆನಂತರ ನನ್ನನ್ನು ಮನೆಗೆ ಡ್ರಾಪ್​ ಮಾಡಿದರು. ಗಂಭೀರವಾಗಿ ಗಾಯಗೊಂಡಿದ್ದ ನನ್ನನ್ನು ನನ್ನ ಅತ್ತೆ ಆಸ್ಪತ್ರೆಗೆ ದಾಖಲಿಸಿದರು ಎಂದು ಹೇಳಿದ್ದಾರೆ.
ಜಾತಿಯ ಹೆಸರಿನಲ್ಲಿ ನನ್ನ ಮೇಲೆ ಪದೇಪದೆ ಆರೋಪ ಮಾಡಲಾಯಿತು. ಕೊನೆಗೆ ನನ್ನ ವಿರುದ್ಧ ಯಾವುದೇ ಸಾಕ್ಷಿಗಳು ಸಿಗದಿದ್ದಾಗ ಮತ್ತು ಕಳ್ಳತನ ಮಾಡಿಲ್ಲ ಎಂದು ಗೊತ್ತಾದಾಗ ನನ್ನನ್ನು ಬಿಟ್ಟರು. ಆದರೂ, ಅವರಲ್ಲಿ ಪಾಪ ಪ್ರಜ್ಞೆ ಇರಲಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಯಿತು. ಆಸ್ಪತ್ರೆ ಖರ್ಚನ್ನು ಒದಗಿಸುತ್ತೇವೆ. ಇಲ್ಲಿ ನಡೆದಿದ್ದನ್ನು ಯಾರಿಗೂ ಹೇಳಬೇಡ. ಹೇಳಿದರೆ ಸುಳ್ಳು ಕೇಸ್​ ಹಾಕುವುದಾಗಿ ಬೆದರಿಕೆ ಹಾಕಿದರು ಎಂದು ಉಮಾ ಮಹೇಶ್ವರಿ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರು ಆಕೆಗೆ ಕಿರುಕುಳ ನೀಡುತ್ತಿದ್ದಾರೆ. ಓರ್ವ ಮಹಿಳೆಯನ್ನು ಲೇಡಿ ಕಾನ್ಸ್​ಟೇಬಲ್​ ಯಾಕೆ ವಿಚಾರಣೆ ನಡೆಸಲಿಲ್ಲ? ಎರಡು ಲಕ್ಷ ರೂ. ಏನಾಯಿತು? ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಸಂತ್ರಸ್ತೆಯನ್ನು ಸಿಲುಕಿಸುವ ಯತ್ನ ನಡೆಯಿತೇ? ಎಂಬಿತ್ಯಾದಿ ಚರ್ಚೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.
ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಉಮಾ ಮಹೇಶ್ವರಿ ಸಿಎಂ ಜಗನ್​ ಬಳಿ ಮನವಿ ಮಾಡಿದ್ದಾರೆ. ಇದೀಗ ಪ್ರಕರಣ ಮಾಧ್ಯಮ ಮೂಲಕ ಸಿಎಂ ಜಗನ್​ ಗಮನಕ್ಕೂ ಬಂದಿದ್ದು, ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಸಂತ್ರಸ್ತೆಗೆ ಯಾವ ರೀತಿಯಲ್ಲಿ ನ್ಯಾಯ ಸಿಗುತ್ತದೆ ಎಂದು ಕಾದು ನೋಡಬೇಕಿದೆ.(ಏಜೆನ್ಸೀಸ್​)
2 ಸಾವಿರ ರೂ. ನೋಟು ಕೊಟ್ಟ ಗ್ರಾಹಕ: ಚಿಲ್ಲರೆ ತರಲು ಹೋದ ಅಂಗಡಿ ಮಾಲೀಕನಿಗೆ ಕಾದಿತ್ತು ಬಿಗ್​ ಶಾಕ್​!

1 ನಿಮಿಷಕ್ಕೆ 146 ತೆಂಗಿನಕಾಯಿ ಬ್ರೇಕ್​, ಹಲ್ಲಿನಲ್ಲಿ ಬಸ್​ ಎಳೆಯುವ ನಿಜ ಜೀವನದ ಸೂಪರ್​ ಹೀರೋ ಈತ!

ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − six =
Remember me
