ಜಾಜ್​ಪುರ್​:ಒಡಿಶಾದ ಜಾಜ್​ಪುರ್​ ಜಿಲ್ಲೆಯ ಕೌಖಿಯಾ ಪೊಲೀಸ್​ ಠಾಣಾ ವ್ಯಾಪ್ತಿಯ ಮುಲಪಲಾ ರಸ್ತೆ ಬದಿಯಲ್ಲಿ ಜನವರಿ 27ರಂದು ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವು ಸುಮಾರು ಮೂರು ತಿಂಗಳ ಬಳಿಕ ತಾರ್ಕಿಕ ಅಂತ್ಯ ಕಂಡಿದ್ದು, ಕೊಲೆ ಹಿಂದಿನ ಅಸಲಿ ಕಾರಣ ತಿಳಿದುಬಂದಿದೆ.
ಜರಾಫುಲ್ಲಾ ನಾಯಕ್​ ತನ್ನ ಪ್ರಿಯಕರ ರಾಕೇಶ್ ಸ್ವೈನ್​ನಿಂದಲೇ ಹತ್ಯೆಯಾಗಿದ್ದಾಳೆ. ಆರೋಪಿ ರಾಕೇಶ್​, ಬೈಕ್​ ತೆಗೆದುಕೊಳ್ಳಲು ಜರಾಫುಲ್ಲಾಳಿಂದ 30 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ. ಕೆಲವು ದಿನಗಳ ಬಳಿಕ ಹಣ ಮರಳಿಸುವಂತೆ ಆಕೆ ಒತ್ತಾಯಿಸಿದ್ದಳು. ಜನವರಿ 24ರಂದು ಜರಾಫುಲ್ಲಾ, ಬರ್ತಡೇ ಪಾರ್ಟಿಗೆಂದು ಭುವನೇಶ್ವರಕ್ಕೆ ಹೋದಾಗಲೂ ಹಣ ಹಿಂದಿರುಗಿಸುವಂತೆ ಒತ್ತಾಯ ಮಾಡಿದ್ದಳು. ಕೊಡದಿದ್ದರೆ ಮನೆಯವರಿಗೆ ಹೇಳಿಬಿಡುತ್ತೇನೆ ಎಂದು ಹೆದರಿಸಿದ್ದಳು ಎಂದು ಜಾಜ್​ಪುರ್​ ಎಸ್​ಪಿ ರಾಹುಲ್​ ಪಿಆರ್ ಮಾಹಿತಿ ನೀಡಿದರು.
ಇದನ್ನೂ ಓದಿರಿ:ಸೋದರನ ಶವವಿದ್ದ ಕಾರಲ್ಲೇ ನಟಿ ಶನಾಯ ಪ್ರಯಾಣ: ಹೈಸ್ಕೂಲ್​ನಲ್ಲೇ ಲವ್, ಪೊಲೀಸರಲ್ಲಿ ಮೂಡಿತು ಹೊಸ ಅನುಮಾನ
ಜನವರಿ 26ರಂದು ರಾಕೇಶ್​, ಹಣ ಹಿಂದಿರುಗಿಸುವ ನೆಪದಲ್ಲಿ ಜರಾಫುಲ್ಲಾಳನ್ನು ಕರೆದುಕೊಂಡು ಭುವನೇಶ್ವರದ ಹೋಟೆಲ್​ ಒಂದಕ್ಕೆ ತೆರಳಿದ. ಬಳಿಕ ಅವರು ಉಳಿದುಕೊಂಡಿದ್ದ ಕೊಠಡಿಯಲ್ಲಿ ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಬಳಿಕ ಆಕೆ ಪ್ರಜ್ಞೆ ತಪ್ಪಿದಾಗ ಉಸಿರುಗಟ್ಟಿಸಿ ಕೊಂದಿದ್ದಾನೆ. ಅದಕ್ಕೂ ಮುನ್ನ ಆಕೆಯೊಂದಿಗೆ ಆತ ದೈಹಿಕ ಸಂಪರ್ಕ ಸಹ ಮಾಡಿದ್ದಾನೆ ಎಂದು ರಾಹುಲ್​ ಹೇಳಿದರು.
ಜರಾಫುಲ್ಲಾಳನ್ನು ಕೊಲೆ ಮಾಡಿದ್ದಕ್ಕಾಗಿ ಆಕೆಯ ಪ್ರಿಯಕರ ರಾಕೇಶ್​ ಸ್ವೈನ್​ನನ್ನು ಬಂಧಿಸಲಾಗಿದೆ. ರಾಕೇಶ್​ನ ಸ್ನೇಹಿತರಾದ ಶಕ್ರಿ ಶೇಖರ್​ ಸ್ವೈನ್​ ಮತ್ತು ಅಮರೇಶ್​ ರೌತ್​ರನ್ನು ಸಹ ಕೊಲೆಗೆ ಸಂಚು ರೂಪಿಸಿ, ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಜನವರಿ 26ರಂದು ರಾಕೇಶ್​ ಮತ್ತು ಜರಾಫುಲ್ಲಾ ಧರ್ಮಾ ವಿಹಾರದಲ್ಲಿರುವ ಶಿವಸಾಯಿ ಗೆಸ್ಟ್​ಹೌಸ್​ನ ನಂ-201ನೇ ರೂಮ್​ನಲ್ಲಿ ತಂಗಿದ್ದರು. ಮಾರನೇ ದಿನ ಸ್ನೇಹಿತನ ಬೈಕ್​ನಲ್ಲಿ ಜರಾಫುಲ್ಲಾಳ ಶವ ಕೂರಿಸಿಕೊಂಡು ಹೋಗಿ ಮಾರ್ಗ ಮಧ್ಯೆ ಜಾಜ್​ಪುರದ ಕೌಖಿಯಾ ಏರಿಯಾದ ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದರು.(ಏಜೆನ್ಸೀಸ್​)
ಗೆಸ್ಟ್​ಹೌಸ್​ನಲ್ಲಿ ಲವರ್​ ಜತೆ ಒಂದು ರಾತ್ರಿ! ಯುವತಿಯ ನಿಗೂಢ ಸಾವು ಪ್ರಕರಣದ ಸತ್ಯಾಂಶ ಕೊನೆಗೂ ಬಯಲು

ಲವ್ವರ್​ ಜತೆ ರಾತ್ರಿ ಹೋಟೆಲ್​ನಲ್ಲಿದ್ದ ಯುವತಿ ಬೆಳಗ್ಗೆ ದುರಂತ ಸಾವು: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ!

ಪ್ರೇಯಸಿ ಶವ ತಂದು ರಸ್ತೆಬದಿ ಎಸೆದ ಪ್ರಕರಣ: ಜ.26ರ ರಾತ್ರಿ ಹೋಟೆಲ್​ ರೂಮ್ ಘಟನೆ ಬಿಚ್ಚಿಟ್ಟ ಪ್ರಿಯಕರ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
