ನವದೆಹಲಿ:ಪ್ರಧಾನಿ ಮೋದಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯಾ ಮೊಬೈಲ್​ ಕಾಂಗ್ರೆಸ್​ (ಐಎಂಸಿ) ಕಾರ್ಯಕ್ರಮದಲ್ಲಿ 5ಜಿ ಸೇವೆಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ರಿಲಯನ್ಸ್​ ಇಂಡಸ್ಟ್ರಿ ಲಿಮಿಟೆಡ್​ನ ಚೇರ್ಮನ್,​ ಮುಕೇಶ್​ ಅಂಬಾನಿ, 2023ರ ಡಿಸೆಂಬರ್​ ಹೊತ್ತಿಗೆ ದೇಶದ ಎಲ್ಲ ಭಾಗಗಳನ್ನೂ ಜಿಯೋ 5ಜಿ ಸೇವೆ ತಲುಪಲಿದೆ ಎಂದು ಹೇಳಿದರು.
ಸದ್ಯ ಜಿಯೋ 5ಜಿ ಸೇವೆಗಳನ್ನು ಕೋಲ್ಕತ, ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು. ಅಂಬಾನಿ ಅವರು ಈ ಹಿಂದೆಯೇ ಹೇಳಿದಂತೆ ದೀಪಾವಳಿ ಸಂದರ್ಭದಲ್ಲಿ ಈ ನಾಲ್ಕು ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಾನಿ, ನಾವು ಈಗ ಯಾವುದನ್ನು ಪ್ರದರ್ಶಿಸಿದೆವು ಅದರ ಬಗ್ಗೆ ನಮಗೆ ಹೆಮ್ಮೆ ಇದೆ. 5ಜಿಯು ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನಕ್ಕಿಂತ ಹೆಚ್ಚು. ಇದು ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬ್ಲಾಕ್‌ಚೈನ್ ಮತ್ತು ಮೆಟಾವರ್ಸ್‌ನಂತಹ 21 ನೇ ಶತಮಾನದ ಇತರ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ತೆರೆದಿಡುವ ಅಡಿಪಾಯದ ತಂತ್ರಜ್ಞಾನವಾಗಿದೆ ಎಂದರು.
5ಜಿ ಮತ್ತು 5ಜಿ ಸಕ್ರೀಯ ಡಿಜಿಟಲ್ ಪರಿಹಾರಗಳು, ಕೈಗೆಟುಕುವಂತಹ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಯನ್ನು ಸಾಮಾನ್ಯ ಜನರ ವ್ಯಾಪ್ತಿಯೊಳಗೆ ತರಬಲ್ಲದು. ಅಲ್ಲದೆ, ವಿಶ್ವ ದರ್ಜೆಯ ಸಾಮರ್ಥ್ಯಗಳು ಮತ್ತು ದಕ್ಷತೆಯೊಂದಿಗೆ ಯುವ ಭಾರತೀಯರನ್ನು ಸಜ್ಜುಗೊಳಿಸುವ ಮೂಲಕ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ. ಈ ಮೂಲಕ ಯುವಕರು ಹೆಚ್ಚಿನ ಗಳಿಕೆಯೊಂದಿಗೆ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಬಹುದು ಎಂದು ಅಂಬಾನಿ ಅಭಿಪ್ರಾಯಪಟ್ಟರು.
5ಜಿ ಆರೋಗ್ಯ ಕ್ರಾಂತಿಯ ಬಗ್ಗೆ ಮಾತನಾಡಿದ ಅಂಬಾನಿ, ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ಹೆಚ್ಚುವರಿ ಹೂಡಿಕೆಯಿಲ್ಲದೆ ಸ್ಮಾರ್ಟ್ ಆಸ್ಪತ್ರೆಗಳಾಗಿ ಪರಿವರ್ತಿಸುವ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ 5G ಉತ್ತಮ ಗುಣಮಟ್ಟದ ಆರೋಗ್ಯವನ್ನು ಕೈಗೆಟುಕುವ ದರದಲ್ಲಿ ತಲುಪಿಸಬಹುದು ಎಂದರು. ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ಉತ್ತಮ ವೈದ್ಯರ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ 5ಜಿ ಮಾಡುತ್ತದೆ ಎಂದು ಹೇಳಿದರು.
ಕೃಷಿ, ಸೇವೆಗಳು, ವ್ಯಾಪಾರ, ಕೈಗಾರಿಕೆ, ಅನೌಪಚಾರಿಕ ವಲಯ, ಸಾರಿಗೆ ಮತ್ತು ಇಂಧನ ಮೂಲಸೌಕರ್ಯಗಳ ಡಿಜಿಟಲೀಕರಣ ಮತ್ತು ಬೌದ್ಧಿಕ ಡೇಟಾ ನಿರ್ವಹಣೆಗೆ ವೇಗ ನೀಡುವ ಮೂಲಕ 5ಜಿಯು ನಗರ ಮತ್ತು ಗ್ರಾಮೀಣ ಭಾರತದ ನಡುವಿನ ಅಂತರವನ್ನು ಕಡಿಮೆ ಮಾಡಬಹುದು. ಅಲ್ಲದೆ, ಎಲ್ಲಾ ಆರ್ಥಿಕ ಚಟುವಟಿಕೆಗಳಲ್ಲಿ ಭಾರಿ ದಕ್ಷತೆಯನ್ನು 5ಜಿ ಸೃಷ್ಟಿಸುತ್ತದೆ. ಈ ಮೂಲಕ ಭಾರತವನ್ನು ನಾವೀನ್ಯತೆಗಳ ಕೇಂದ್ರವನ್ನಾಗಿ ಮಾಡುತ್ತದೆ ಮತ್ತು ಹವಾಮಾನ ಬಿಕ್ಕಟ್ಟನ್ನು ತಗ್ಗಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅಂಬಾನಿ ಹೇಳಿದರು.(ಏಜೆನ್ಸೀಸ್​)
ನಟಿ ಆಶಾ ಪಾರೆಖ್​ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: 80ರ ಹುಟ್ಟುಹಬ್ಬಕ್ಕೆ ಸಿಕ್ಕಿತು ಅತ್ಯುನ್ನತ ಗಿಫ್ಟ್​

ಸೋನಿಯಾಗೆ ಕೈಬರಹದ ಪತ್ರ ಕೊಟ್ಟ ಗೆಹ್ಲೋಟ್​! ಕ್ಯಾಮೆರಾದಲ್ಲಿ ರಹಸ್ಯ ಬಯಲು: ಕಾಂಗ್ರೆಸ್​ ಪಾಳಯದಲ್ಲಿ ಕೋಲಾಹಲ

ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ತನ್ನೊಂದಿಗೆ ಮಲಗಲು ಒತ್ತಾಯ: ಮಂಜು ಪಾವಗಡ ಸಹೋದರನಿಗೆ ಬಿತ್ತು ಗೂಸಾ

Sign in to your account
Please enter an answer in digits:thirteen + 9 =
Remember me
