ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ರೈತನ ಪುತ್ರ ತನ್ವೀರ್ ಅಹ್ಮದ್ ಖಾನ್, ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್​ಸಿ) ನಡೆಸಿದ ಪ್ರತಿಷ್ಠಿತ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ 2ನೇ ರ‍್ಯಾಂಕ್​ ಪಡೆಯುವ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕೆ ಗೌರವ ಹೊತ್ತು ತಂದಿದ್ದಾರೆ.
ಅಹ್ಮದ್​ ಖಾನ್​, ದಕ್ಷಿಣ ಕಾಶ್ಮೀರದ ಶ್ರೀನಗರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಅತ್ಯಂತ ಹಿಂದುಳಿದ ನಿಗೀನ್​ಪೊರ ಕುಂದ್​ ಗ್ರಾಮದ ಮೂಲದವನು. ತನ್ನ ಗ್ರಾಮದಲ್ಲೇ ಪ್ರಾಥಮಿಕ ಶಾಲೆ ಪೂರೈಸಿದ ಖಾನ್​ ವಾಲ್ಟೆಂಗೋದಲ್ಲಿ ಪ್ರೌಢಶಾಲೆಯನ್ನು ಮುಗಿಸಿದರು. ರಜ್ಲೂ ಕುಂದ್​ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಪಿಯುಸಿಯಲ್ಲಿ ಉತ್ತೀರ್ಣರಾದರು ಮತ್ತು 2016 ರಲ್ಲಿ ಅನಂತನಾಗ್ ಸರ್ಕಾರಿ ಪದವಿ ಕಾಲೇಜಿನಿಂದ ಕಲಾ ಪದವಿ ಪಡೆದಿದ್ದಾಗಿ ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಆಗಿರುವ ಖಾನ್​, ಕಾಶ್ಮೀರ ಯೂನಿವರ್ಸಿಟಿ ಪ್ರವೇಶ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್​ ಪಡೆದು, ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಆರಂಭಿಸಿದರು. ಅಂತಿಮ ವರ್ಷದಲ್ಲಿರುವಾಗಲೇ ತಮ್ಮ ಬುದ್ಧಿವಂತಿಕೆಯಿಂದ ಖಾನ್​ ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್​ಎಫ್​) ಪಡೆದರು.
ಜೆಆರ್​ಎಫ್​ ಪಡೆದುಕೊಂಡ ಖಾನ್​, ಮಾಸ್ಟರ್ಸ್​ ಇನ್ ಫಿಲಾಸಫಿ (ಎಂ.ಫಿಲ್) ಇನ್​ ಡೆವೆಲಪ್ಮೆಂಟ್​ ಸ್ಟಡೀಸ್​ಗಾಗಿ ಕೋಲ್ಕತ್ತದ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ಗೆ ಸೇರಿಕೊಂಡರು. ಬಳಿಕ ಏಪ್ರಿಲ್ 2021ರಲ್ಲಿ ಅಧ್ಯಯನವನ್ನು ಪೂರ್ಣಗೊಳಸಿದರು. ಶಿಕ್ಷಣದಲ್ಲಿ ಇಷ್ಟೆಲ್ಲ ಹಂತ ಪೂರೈಸಿರುವ ಖಾನ್​ ಅವರ ಹಿನ್ನೆಲೆ ತುಂಬಾ ಬಡತನದಿಂದ ಕೂಡಿದೆ. ಅಧ್ಯಯನ ಜತೆಯಲ್ಲೇ ಖಾನ್​ ಆಟೋ ಸಹ ಓಡಿಸುತ್ತಿದ್ದರು. ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ಖಾನ್​ ಅವರ ಬಲವಾದ ನಂಬಿಕೆ ಆಗಿತ್ತು.
ಕೋವಿಡ್​ ಸಮಯದಲ್ಲಿ ನಾಲ್ಕ ಗೋಡೆಗಳ ಮಧ್ಯೆ ತಮ್ಮನ್ನು ತಾವು ನಿರ್ಬಂಧಿಸಿಕೊಂಡ ಖಾನ್, ಎಂಫಿಲ್​ ಜತೆಗೆ​ ಐಇಎಸ್​ ಪರೀಕ್ಷೆಗೆ ತಯಾರಿ ನಡೆಸಿದರು. ಕೋವಿಡ್​ ಎಂದಿಗೂ ನನ್ನ ಅಧ್ಯಯನಕ್ಕೆ ಅಡ್ಡಗಾಲಾಗಲಿಲ್ಲ ಎಂದು ಖಾನ್​ ಹೇಳಿಕೊಂಡಿದ್ದಾರೆ. ತನ್ನ ಮೊದಲ ಪ್ರಯತ್ನದಲ್ಲೇ ಐಇಎಸ್​ ಸಾಧನೆ ಮಾಡಿರುವ ಖಾನ್, ಇದು ನನ್ನ ಕಠಿಣ ಹೋರಾಟದ ಫಲ ಎಂದು ಹೇಳಿದ್ದಾರೆ. ಹೋರಾಟದ ನಡುವೆಯೂ ನಾನೆಂದಿಗೂ ಭರವಸೆವನ್ನು ಕಳೆದುಕೊಳ್ಳಲಿಲ್ಲ ಎಂದಿದ್ದಾರೆ.
ಹಲವಾರು ಶೈಕ್ಷಣಿಕ ಸುಧಾರಣೆಗಳನ್ನು ಆರಂಭಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಪ್ರಶಂಸಿಸುತ್ತಾ, ಮೂಲಭೂತ ಶಿಕ್ಷಣ ವ್ಯವಸ್ಥೆಯನ್ನು ಪರಿಷ್ಕರಿಸುವ ಅವಶ್ಯಕತೆಯಿದೆ ಎಂದು ಖಾನ್​ ಸೂಚಿಸಿದರು. ಅಲ್ಲದೆ, ಜಮ್ಮು-ಕಾಶ್ಮೀರ ಯುವಕರು ಹೆಚ್ಚಾಗಿ ಶಿಕ್ಷಣ ಕಡೆ ಚಿಂತಿಸಬೇಕೆಂಬ ಸಂದೇಶವನ್ನು ಸಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಐಇಎಸ್ 2020 ಪರೀಕ್ಷೆಯಲ್ಲಿ ಎರಡನೇ ಶ್ರೇಣಿಯನ್ನು ಗಳಿಸಿದ್ದಕ್ಕಾಗಿ ಖಾನ್ ಅವರನ್ನು ಅಭಿನಂದಿಸಿದ್ದಾರೆ.(ಏಜೆನ್ಸೀಸ್​)
ಚಿಕನ್​, ಮಟನ್​ಗಿಂತಲೂ ಗೋಮಾಂಸವನ್ನೇ ಹೆಚ್ಚು ತಿನ್ನಿ- ಬಿಜೆಪಿಗೆ ಶಾಕ್​ ಕೊಟ್ಟ ಸಂಸದ
ಒಂದೇ ಒಲಿಂಪಿಕ್ಸ್‌ನಲ್ಲಿ 7 ಪದಕ.. ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ ಈಜುಗಾರ್ತಿ
ಯುವತಿಯರನ್ನು ನಂಬಿಸಿ, ಬೆದರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ: ಪೊಲೀಸ್ ಬಲೆಗೆ ಬಿದ್ದ ನಟಿ ನಂದಿತಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
