ಶ್ರೀನಗರ:ಭಾರತೀಯ ಸೇನಾ ನೆಲೆ ಮೇಲೆ ಉಗ್ರರಿಬ್ಬರು ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಉಗ್ರರಿಬ್ಬರು ಹತರಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದರ್ಹಾಲ್​ ಏರಿಯಾದಲ್ಲಿರುವ ಪರ್ಗಾಲ್​ನಲ್ಲಿ ಗುರುವಾರ ನಡೆದಿದೆ.
ಈ ಬಗ್ಗೆ ಸೇನಾಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ರಜೌರಿಯಿಂದ 25 ಕಿ.ಮೀ ದೂರದಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ. ಸೇನಾ ಕಂಪನಿ ಆಪರೇಟಿಂಗ್​ ಬೇಸ್​ ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ನಮ್ಮ ಮೂವರು ಯೋಧರು ಹುತಾತ್ಮರಾಗಿದ್ದು, ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ನಡೆಯುತ್ತಿದೆ.
J&K | Two terrorists, who carried out a suicide attack on an Army company operating base 25 kms from Rajouri, killed; three soldiers lost their lives. Operations in progress.
(Visuals deferred by unspecified time)pic.twitter.com/QspNSFhfX6
— ANI (@ANI)August 11, 2022

ಇಂದು ಬೆಳಗ್ಗೆ ದರ್ಹಾಲ್​ ಏರಿಯಾದ ಬುದ್ಧ ಕನಾದಿ ಸಮೀಪ ಇರುವ ಪರ್ಗಾಲ್​ನ ಸೇನಾ ಶಿಬಿರದ ಬೇಲಿಯನ್ನು ದಾಟಿ ಬರಲು ಉಗ್ರರು ಯತ್ನಿಸಿದಾಗ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಉಗ್ರರು ಆತ್ಮಾಹುತಿ ದಾಳಿ ಮಾಡಿದ್ದಾರೆ. ಕಾವಲು ಕರ್ತವ್ಯದಲ್ಲಿ ಯೋಧರ ಮುಂಜಾಗ್ರತ ಕ್ರಮದಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಘಟನೆಯಲ್ಲಿ ಐವರು ಯೋಧರಿಗೆ ಗಾಯಗಳಾಗಿದ್ದು, ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಬುದ್ಗಾಮ್‌ನಲ್ಲಿ ಮೂವರು ಎಲ್‌ಇಟಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಓರ್ವ, ನಾಗರಿಕರಾದ ರಾಹುಲ್ ಭಟ್ ಮತ್ತು ಅಮರೀನ್ ಭಟ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
VIDEO| ಟಾಲಿವುಡ್​ ಐಟಂ ಸಾಂಗ್​​ಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ ಚಾಹಲ್​ ಪತ್ನಿ ಧನಶ್ರೀ: ವಿಡಿಯೋ ವೈರಲ್​

ಹುಡುಗಿಯರು ಲೈಂಗಿಕ ಸುಖ ಬಯಸಿದರೆ… ಶಕ್ತಿಮಾನ್​ ಖ್ಯಾತಿಯ ಮುಕೇಶ್​ ಖನ್ನಾ ಹೇಳಿಕೆಗೆ ಭಾರಿ ಆಕ್ರೋಶ!

ಶೋಕಿಗಾಗಿ ಬೈಕ್​ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
