ನವದೆಹಲಿ:2019ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದ ವಿದ್ಯಾರ್ಥಿ ಶಾರ್ಜಿಲ್​ ಇಮಾಮ್​ಗೆ ದೆಹಲಿ ಕೋರ್ಟ್​ ಶುಕ್ರವಾರ ಜಾಮೀನು ನೀಡಿದೆ.
ಶಾರ್ಜಿಲ್​ ನೀಡಿದ ಪ್ರಚೋದನಕಾರಿ ಭಾಷಣವೇ 2019 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದೀಗ ಶಾರ್ಜಿಲ್​ ಜಾಮೀನು ದೊರೆತಿದ್ದರೂ, ಅವರ ವಿರುದ್ಧ ಬಾಕಿ ಉಳಿದಿರುವ ಇತರ ಪ್ರಕರಣಗಳಲ್ಲಿ ಜಾಮೀನು ಪಡೆಯದ ಕಾರಣ ಬಂಧನದಲ್ಲಿಯೇ ಮುಂದುವರಿಯಲಿದ್ದಾರೆ. ಸದ್ಯ ಎನ್​ಎಫ್​ಸಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್​ಗೆ ದೆಹಲಿಯ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಅನುಜ್​ ಅಗರ್ವಾಲ್​ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಎಫ್‌ಐಆರ್‌ ದಾಖಲಾದ ಬಳಿಕ 31 ತಿಂಗಳ ಕಾಲ ಕಸ್ಟಡಿಯಲ್ಲಿ ಉಳಿದಿರುವ ಕಾರಣಕ್ಕಾಗಿ ಸೆಕ್ಷನ್ 436-ಎ ಸಿಆರ್‌ಪಿಸಿ ಅಡಿಯಲ್ಲಿ ಪರಿಹಾರ ಕೋರಿ ಇಮಾಮ್ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸುವಂತೆ ದೆಹಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯವನ್ನು ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ.
2019ರ ಡಿಸೆಂಬರ್ 15ರಂದು ಜಾಮಿಯಾ ನಗರದ ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಪೌರತ್ವ ತಿದ್ದುಪಡಿ ಮಸೂದೆಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಗುಂಪೊಂದು ಕಲ್ಲು, ಇಟ್ಟಿಗೆ, ದೊಣ್ಣೆಗಳಿಂದ ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿತ್ತು. ಅದೇ ವರ್ಷ ಡಿಸೆಂಬರ್ 13 ರಂದು ಶಾರ್ಜಿಲ್​ ಇಮಾಮ್ ಮಾಡಿದ ಭಾಷಣದಿಂದ ಗಲಭೆಕೋರರು ಪ್ರಚೋದಿಸಲ್ಪಟ್ಟರು ಮತ್ತು ನಂತರ ಹಿಂಸಾಚಾರ ನಡೆಯಿತು ಎಂಬ ಆರೋಪದ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿತ್ತು.(ಏಜೆನ್ಸೀಸ್​)
ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್​: ಹೈಕೋರ್ಟ್​ ನೀಡಿದೆ ಈ ಗಡುವು….

ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಶುರು: ಸಿದ್ದು- ಡಿಕೆಶಿ ಕೈ ಹಿಡಿದು ನಗಾರಿ ಬಾರಿಸಿದ ರಾಹುಲ್ ಗಾಂಧಿ

VIDEO: ಮಾತಿನ ಭರದಲ್ಲಿ ಪ್ರಧಾನಿ ಮೋದಿಗೇ ಸವಾಲ್​ ಹಾಕಿದ ಬಿಜೆಪಿ ನಾಯಕಿ! ರಾಜಕೀಯ ಸಂಚಲನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + three =
Remember me
