ನವದೆಹಲಿ:ಮಹಾಮಾರಿ ಕರೊನಾ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಜೆಯಲ್ಲಿರುವ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಏಮ್ಸ್​ ಸಿಬ್ಬಂದಿ ತಕ್ಷಣ ಕೆಲಸಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಲಾಗಿದೆ.
ಏಮ್ಸ್​ ಸಿಬ್ಬಂದಿಗೆ ಚಳಿಗಾಲದ ರಜೆ ಸೌಲಭ್ಯವನ್ನು ರದ್ದುಪಡಿಸಲಾಗಿದೆ. ಸದ್ಯ ಕಳೆದ ಮೂರು ದಿನಗಳಿಂದ ಏಮ್ಸ್​ಗೆ 50ಕ್ಕೂ ಹೆಚ್ಚು ಕರೊನಾ ರೋಗಿಗಳು ದಾಖಲಾಗಿದ್ದು, ಇದು ಒಳ್ಳೆಯ ಸಂಕೇತವಲ್ಲ. ದೇಶವೂ ಮೂರನೇ ಅಲೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಒಮಿಕ್ರಾನ್​ ಜತೆಯಲ್ಲಿ ಡೆಲ್ಟಾ ರೂಪಾಂತರಿ ಕೂಡ ಹರಡುತ್ತಿದ್ದು, ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಏಮ್ಸ್​ನ ಉನ್ನತ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಜೆಯಲ್ಲಿರುವ ಸಿಬ್ಬಂದಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಏಮ್ಸ್​ ಸೂಚನೆ ನೀಡಿದೆ. ಇತ್ತ ದೆಹಲಿ ಸರ್ಕಾರ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಿದೆ. ಸರ್ಕಾರಿ ನೌಕರರಿಗೆ ವರ್ಕ್​ ಫ್ರಮ್​ ಹೋಮ್​ ನೀಡಲಾಗಿದೆ. ಖಾಸಗಿ ಕಂಪನಿಗಳಿಗೆ ಶೇ. 50 ರಷ್ಟು ಉದ್ಯೋಗಿಗಳಿಗೆ ಅನುಮತಿ ನೀಡಲಾಗಿದೆ.
ದೆಹಲಿಯಲ್ಲಿ ಸೋಮವಾರ 4,099 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ ಮತ್ತು ಪಾಸಿಟಿವ್​ ದರ ಶೇ. 6.46 ಕ್ಕೆ ಏರಿದೆ. ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರಿಗೆ ಕರೊನಾ ಪಾಸಿಟಿವ್​ ಆಗಿದ್ದು, ರೋಗ ಲಕ್ಷಣಗಳು ಲಘುವಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಶಾಲೆ-ಕಾಲೇಜುಗಳನ್ನು ಬಂದ್​ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.(ಏಜೆನ್ಸೀಸ್​)
ಗ್ರಾಮೀಣ ಭಾಗದ ಪತ್ರಕರ್ತರಿಗೆ ಹೆಲ್ತ್​ ಕಾರ್ಡ್​, ಬಸ್ ಪಾಸ್ ಸೌಲಭ್ಯ: ಪತ್ರಕರ್ತರ ಸಮ್ಮೇಳನದಲ್ಲಿ ಸಿಎಂ ಭರವಸೆ

ನೀನೇನ್​ ದೊಡ್ಡ ಡಾನಾ​? ನಾನಾ-ನೀನಾ ನೋಡೇ ಬಿಡೋಣ್ವಾ? ರಾಜ್ ಬಿ ಶೆಟ್ಟಿಗೆ ಚಮಕ್ ಕೊಟ್ಟ ಶಿವಣ್ಣ

ಇದು ಆರ್​ಆರ್​ಆರ್​ ಚಿತ್ರದ ಅತ್ಯಂತ ಕಳಪೆ ಸಾಧನೆಯಂತೆ! ಜಕ್ಕಣನ ಮೇಲೆ ಅಸಮಾಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
