ಹೈದರಾಬಾದ್​:ಹೈದರಾಬಾದ್​ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಯೊಂದು ಬಹಿರಂಗವಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ. ಈ ವೇಳೆ ಆರೋಪಿಗಳು ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ.
ಸ್ಟ್ರೀಮಿಂಗ್​ ಪ್ಲಾಟ್​ಫಾರ್ಮ್​ ಅಥವಾ ಒಟಿಟಿಯಲ್ಲಿ ಸುಲಭವಾಗಿ ಲಭ್ಯವಿರುವ ಇಂಗ್ಲಿಷ್​ ಭಾಷೆಯ ವೆಬ್​ ಸರಣಿಯ ವಯಸ್ಕರ ವಿಡಿಯೋ ಅಥವಾ ನೆಗಿಟಿವ್​ ಕಂಟೆಂಟ್​ ಸಿನಿಮಾಗಳಿಂದ ಪ್ರೇರಿತರಾಗಿ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಒಟಿಟಿಯಲ್ಲಿ ಲಭ್ಯವಿರುವ ಅಶ್ಲೀಲ ಚಿತ್ರಗಳಿಗೆ ಆರೋಪಿಗಳು ದಾಸರಾಗಿದ್ದರು. ವೆಬ್ ಸರಣಿಗಳಿಗೆ ಯಾವುದೇ ಸೆನ್ಸಾರ್ ಇಲ್ಲ. ಹೀಗಾಗಿ ಯಾವುದೇ ಫಿಲ್ಟರ್​ ಇಲ್ಲದೆ ಸಿನಿಮಾಗಳು ಪ್ರಸಾರವಾಗುತ್ತವೆ. ಇದರಿಂದ ಒಟಿಟಿ ಹೆಚ್ಚು ಯುವಕರನ್ನು ಸೆಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಿಂಸೆ, ಸೆಕ್ಸ್​, ಅಪರಾಧ ಚಟುವಟಿಕೆಗಳನ್ನು ಯಾವುದೇ ಸೆನ್ಸಾರ್​ ಇಲ್ಲದೇ ರಾಜಾರೋಷವಾಗಿ ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ನೋಡಿ ಪ್ರಭಾವಿತರಾಗಿದ್ದ ಹೈದರಾಬಾದ್​ ಗ್ಯಾಂಗ್​ರೇಪ್​ ಆರೋಪಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಪ್ಪೊಪ್ಪಿಗೆ ನೀಡಿದ್ದಾರೆ.
ಈ ಹಿಂದಿನ ಚಲನಚಿತ್ರಗಳಲ್ಲಿ ಯುವತಿಯರನ್ನು ಹಿಂಬಾಲಿಸುವುದು ಮತ್ತು ಹುಡುಗಿಯರನ್ನು ಚುಡಾಯಿಸುವುದನ್ನು ತೋರಿಸುತ್ತಿದ್ದವು. ಆದರೆ ಈಗಿನ ವೆಬ್ ಸರಣಿಗಳು ಹುಡುಗಿಯರನ್ನು ಹೇಗೆ ಬಲೆಗೆ ಬೀಳಿಸಬೇಕು? ಅವರನ್ನು ಹೇಗೆ ಮೋಹಿಸಬಹುದು ಎಂಬುದನ್ನು ಕೆಟ್ಟದಾಗಿ ತೋರಿಸುತ್ತವೆ. ಇದು ಯುವಕರ ಮನಸ್ಸನ್ನು ಕಲುಷಿತಗೊಳಿಸುತ್ತಿರುವುದಲ್ಲದೆ, ತಪ್ಪು ದಾರಿ ತುಳಿಯಲು ಪ್ರೇರಿಪಿಸುತ್ತಿದೆ.
ಅತ್ಯಾಚಾರ ಆರೋಪಿಗಳು ತಮ್ಮ ಇಂಟರ್​ಮಿಡಿಯೇಟ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ. ಇಬ್ಬರು ಹುಡುಗಿಯರನ್ನು ಬಲೆಗೆ ಬೀಳಿಸುವ ಉದ್ದೇಶದಿಂದ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಆದರೆ, ಅವರಲ್ಲಿ ಒಬ್ಬ ಹುಡುಗಿ ಮಾತ್ರ ಬಲೆಗೆ ಬೀಳಲಿಲ್ಲ. ಬಲೆಗೆ ಬಿದ್ದ ಇನ್ನೊಬ್ಬಳನ್ನು ಡ್ರಾಪ್​ ಕೊಡುವ ನೆಪದಲ್ಲಿ ಕರೆದೊಯ್ದು ಸರ್ಕಾರಿ ವಾಹನದಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರು ಸೇರಿದಂತೆ ಆರು ಆರೋಪಿಗಳನ್ನು ಎಫ್​ಐಆರ್​ನಲ್ಲಿ ಸೇರಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೇ.28ರಂದು 17 ವರ್ಷದ ಅಪ್ರಾಪ್ತೆ ಪಾರ್ಟಿಗೆಂದು ಪಬ್​ಗೆ ಹೋಗಿದ್ದಳು. ಈ ವೇಳೆ ಹುಡುಗನೊಬ್ಬನನ್ನು ಆಕೆ ಭೇಟಿಯಾಗಿದ್ದಳು. ಪಾರ್ಟಿಯ ಬಳಿಕ ಪರಿಚಿತ ಹುಡುಗ ಮತ್ತು ಆತನ ಸ್ನೇಹಿತರೊಂದಿಗೆ ಕ್ಲಬ್​ನಿಂದ ಹೊರಬಂದಿದ್ದಳು. ಪಾರ್ಟಿ ಮುಗಿದ ಬಳಿಕ ಮನೆಗೆ ಡ್ರಾಪ್​ ಮಾಡುತ್ತೇನೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಹುಡುಗಿ ಮರ್ಸಿಡೆಸ್​ ಬೆಂಜ್​ ಕಾರಿನಲ್ಲಿ ಹೋಗಿದ್ದಳು.
ಕಾರಿನಲ್ಲಿ ಹೋಗುವಾಗ ಹತ್ತಿರದ ಕೆಫೆ ಬಳಿ ಮೇ.28ರಂದು ಸಂಜೆ 6.30ಕ್ಕೆ ಇನ್ನೋವಾ ಕಾರಿಗೆ ಎಲ್ಲರು ಸ್ಥಳಾಂತರವಾಗಿದ್ದಾರೆ. ಬಳಿಕ ಆಕೆಯನ್ನು ರಸ್ತೆ ನಂಬರ್​ 44ರಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ರಾತ್ರಿ 7.30ರ ಸುಮಾರಿಗೆ ಆಕೆಯನ್ನು ಮತ್ತೆ ಪಬ್‌ಗೆ ಬಿಟ್ಟಿದ್ದಾರೆ. ಘಟನೆ ನಡೆದ ಪ್ರದೇಶವು ಹೈದರಾಬಾದ್‌ನ ಐಷಾರಾಮಿ ಪ್ರದೇಶವಾಗಿದ್ದು, ಅಲ್ಲಿ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು, ನಟರು ಮತ್ತು ಇತರ ಪ್ರಭಾವಿ ವ್ಯಕ್ತಿಗಳು ವಾಸಿಸುತ್ತಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಸಾದುದ್ದೀನ್​, ಕೃತ್ಯವು ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ನಡೆಯಿತು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದನು. ಇದರ ಆಧಾರದ ಮೇಲೆ ಕಾರನ್ನು ಫಾರ್ಮ್​ಹೌಸ್​ನಲ್ಲಿ ವಶಕ್ಕೆ ಪಡೆಯಲಾಯಿತು. ಅಂದಹಾಗೆ ಫಾರ್ಮ್​ಹೌಸ್​ ರಾಜಕೀಯ ಕುಟುಂಬದ ಜತೆ ಸಂಪರ್ಕ ಹೊಂದಿರುವ ಮಹಿಳೆ ಒಡೆತನದಲ್ಲಿದೆ. ವಶಕ್ಕೆ ಪಡೆದ ಇನ್ನೋವಾ ಕಾರನ್ನು ಸರ್ಕಾರಿ ವಾಹನ ಎಂದು ಗುರುತಿಸಲಾಗಿದೆ ಮತ್ತು ಅದನ್ನು ವಕ್ಫ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಬಳಸುತ್ತಿದ್ದರು. ಅಪರಾಧದ ಸಮಯದಲ್ಲಿ ಮರ್ಸಿಡಿಸ್ ಮತ್ತು ಇನ್ನೋವಾ ಎರಡನ್ನೂ ಅಪ್ರಾಪ್ತ ವಯಸ್ಕರು ಓಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮರ್ಸಿಡೆಸ್​ ಕಾರು ತೆಲಂಗಾಣ ಶಾಸಕರೊಬ್ಬರಿಗೆ ಸೇರಿದ್ದು ಎನ್ನಲಾಗಿದೆ.
ಆರು ಆರೋಪಿಗಳ ಪಟ್ಟಿ ಹೀಗಿದೆ….1. ಓಮರ್​ ಖಾನ್ (ವಯಸ್ಕ)​: ರಾಜಕೀಯ ನಂಟು ಹೊಂದಿರುವ ಶ್ರೀಮಂತ ಕುಟುಂಬಕ್ಕೆ ಸಂಬಂಧಿಸಿದವರು ಎನ್ನಲಾಗಿದೆ.2. ಸಾದುದ್ದಿನ್​ ಮಲಿಕ್​ (ವಯಸ್ಕ): ಸ್ಥಳೀಯ ಟಿಆರ್​ಎಸ್​ ನಾಯಕನ ಪುತ್ರ
ಅಪ್ರಾಪ್ತ ಆರೋಪಿಗಳು (ಹೆಸರು ಬಹಿರಂಗಪಡಿಸಿಲ್ಲ)3. ಓರ್ವ ಆರೋಪಿ ಟಿಆರ್​ಎಸ್​ ನಾಯಕನ ಪುತ್ರ4. ಜಿಎಂಸಿ ಕಾರ್ಪೊರೇಟರ್​ ಮಗ5. ಸಂಗಾರೆಡ್ಡಿಯ ಟಿಆರ್‌ಎಸ್ ಕಾರ್ಪೊರೇಟರ್ ಪುತ್ರ6. ಎಐಎಂಐಎಂ ಶಾಸಕರ ಪುತ್ರ. ಆಧಾರ್ ವಿವರಗಳ ಪ್ರಕಾರ, ಅವರು ಜುಲೈ 7 ರಂದು 18 ವರ್ಷಕ್ಕೆ ಕಾಲಿಡುತ್ತಾರೆ.(ಏಜೆನ್ಸೀಸ್​)
ಟೀ ಕುಡಿಯುವುದನ್ನು ಕಡಿಮೆ ಮಾಡುವಂತೆ ತನ್ನ ಪ್ರಜೆಗಳ ಬಳಿ ಮನವಿ ಮಾಡಿದ ಪಾಕ್​ ಸರ್ಕಾರ!

ನನಗೆ ಸರ್ಕಾರಿ ಕೆಲ್ಸ ಕೊಡಿ, ಇಲ್ಲ ಅಂದ್ರೆ ಕೊಳವೆ ಬಾವಿ ತೋಡಿಸಿಕೊಡಿ: ಮತಪೆಟ್ಟಿಗೆಯಲ್ಲಿ ಯುವಕನ ಮನವಿ ಪತ್ರ

ವಿಚಾರಣೆಗೆ ಹೆದರಿ ಠಾಣೆಯ ಶೌಚಾಲಯದಲ್ಲಿ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪೇದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + eighteen =
Remember me
