ನೆಲ್ಲೂರು:ಪ್ರೀತಿ ಮಾಡಿ ಮದುವೆಯಾದ ಒಂದೇ ವರ್ಷದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆಯ ಹಾದಿ ಹಿಡಿದಿರುವ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಎನ್​ಟಿಆರ್​ ನಗರದ ಚರ್ಚ್​ ಸ್ಟ್ರೀಟ್​ನಲ್ಲಿ ನಡೆದಿದೆ.
ಮೃತಳನ್ನು ಮಾನಸ (28) ಎಂದು ಗುರುತಿಸಲಾಗಿದೆ. ಪ್ರಕಾಶಂ ಜಿಲ್ಲೆಯ ಉಲವಪಡು ವಲಯದ ಚಕಿಚರ್ಲಾ ಗ್ರಾಮದ ಮೌನಿಕಾ ಮತ್ತು ಮಹೇಂದ್ರ ದಂಪತಿಗೆ ಮೂರು ಮಕ್ಕಳು. ಅದರಲ್ಲಿ ಮಾನಸ ಹಿರಿಯ ಮಗಳು. ಪದ್ಮಾವತಿ ಯೂನಿವರ್ಸಿಟಿಯಲ್ಲಿ ಆರ್ಗ್ಯಾನಿಕ್​ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮಾಡಿದ್ದ ಮಾನಸ, ಧನಲಕ್ಷ್ಮೀಪುರಂನಲ್ಲಿರುವ ನಾರಾಯಣ ವಿದ್ಯಾ ಸಂಸ್ಥೆಯಲ್ಲಿ ಜೂನಿಯರ್​ ಲೆಕ್ಚರರ್​ ಆಗಿ ಕೆಲಸ ಮಾಡುತ್ತಿದ್ದಳು.
ನೆಲ್ಲೂರು ಗ್ರಾಮೀಣ ವಲಯದ ಚಿನಬಾಬು ಎಂಬಾತ ವ್ಯಾನ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ. ಚಿನಬಾಬು ಮತ್ತು ಮಾನಸ ನಸುವೆ ಸ್ನೇಹ ಬೆಳೆಯಿತು. ನಂತರ ಸ್ನೇಹ ಪ್ರೀತಿಗೆ ತಿರುಗಿತು. ಇದಾದ ಬಳಿಕ ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆ ಕೂಡ ಆದರು. ಒಂದು ವರ್ಷದ ಹಿಂದಷ್ಟೇ ಇಬ್ಬರ ಮದುವೆ ಆಗಿದೆ. ಮದುವೆಯಾದ ಬಳಿಕ ಇಬ್ಬರು ಮದರಾಜಗಡೂರಿನಲ್ಲಿ ವಾಸವಿದ್ದರು. ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾನಸ ತಾಯಿ ಅಳಿಯನ್ನು ಕೇಳಿಕೊಂಡಿದ್ದಳು. ಆದರೆ, ಮದುವೆಯಾದ ಬಳಿಕ ತನ್ನ ವರಸೆಯನ್ನು ತೋರಿದ ಚಿನಬಾಬು, ವರದಕ್ಷಿಣೆ ತರುವಂತೆ ಮಾನಸಳಿಗೆ ಕಿರುಕುಳ ನೀಡಲು ಆರಂಭಿಸಿದ.
ಇದರ ನಡುವೆ ಇಬ್ಬರು ಮದರಾಜಗಡೂರು ಬಿಟ್ಟು ನೆಲ್ಲೂರಿನ ರಾಮನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಹೀಗಿರುವಾಗ ಮಾನಸ ತನ್ನ ಕೆಲಸವನ್ನು ಬಿಟ್ಟು ಆಂಧ್ರದ ಸೆಟ್​ ಪರೀಕ್ಷೆಗೆ ತಯಾರಾಗಲು ಅಧ್ಯಯನವನ್ನು ಶುರು ಮಾಡಿದಳು. ಕೆಲಸ ಬಿಟ್ಟ ವಿಚಾರವಾಗಿ ಮಾನಸ ವಿರುದ್ಧ ಚಿನಬಾಬು ಕೂಗಾಡಿದ. ಇಬ್ಬರ ನಡುವೆ ತೀವ್ರವಾದ ಜಗಳ ನಡೆಯಿತು. ಇದೇ ಕೋಪದಲ್ಲಿ ಚಿನಬಾಬು ಮನೆಯನ್ನು ಬಿಟ್ಟು ಹೋಗಿದ್ದ. ಇತ್ತ ನೋವಿನಲ್ಲಿದ್ದ ಮಾನಸ ರೂಮಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ಮನೆಗೆ ಮರಳಿ ಬಂದು ನೋಡಿದ ಚಿನಬಾಬುಗೆ ಶಾಕ್​ ಕಾದಿತ್ತು. ತನ್ನ ಪತ್ನಿ ನೇಣು ಬಿಗಿದುಕೊಂಡಿದ್ದಳು.
ಇತ್ತ ಮಾನಸ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ತಾಯಿ ಕಣ್ಣೀರಾಕುತ್ತಾ ಓಡೋಡಿ ಬಂದಳು. ಚೆನ್ನಾಗಿದ್ದ ಮಗಳ ಜೀವನ ದುರಂತ ಅಂತ್ಯವಾಯ್ತಲ್ಲ ಅನ್ನೋ ನೋವು ಮಾನಸ ತಾಯಿಯನ್ನು ಕಾಡುತ್ತಿತ್ತು. ಮಾನಸ ಮೃತಪಟ್ಟ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ ಬಳಿಕ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮುಗಿದ ನಂತರ ಪಾಲಕರಿಗೆ ಹಸ್ತಾಂತರಿಸಿದ್ದಾರೆ. ಮಗಳ ಸಾವಿಗೆ ಗಂಡನೇ ಕಾರಣ ಎಂದು ಪಾಲಕರು ದೂರು ನೀಡಿದ್ದಾರೆ. ಮಾನಸ ಪತಿ ಚಿನಬಾಬು ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಲಾಟರಿ ಮೂಲಕ ಇಬ್ಬರ ಪ್ರೇಯಸಿಯರಲ್ಲಿ ಒಬ್ಬಳ ಆಯ್ಕೆ! ಮೋಸ ಹೋದ ಯುವತಿ ಹೇಳಿದ್ದೇನು?

ಹೊಸ ಕಾರು ಖರೀದಿಸಿ ವಿರೋಧಿಗಳಿಗೆ ಮಾತಿನಲ್ಲೇ ಚಾಟಿ ಬೀಸಿದ ಬಿಗ್​ಬಾಸ್​ ಖ್ಯಾತಿಯ ನಟಿ ಧನುಶ್ರೀ..!

ಒಳಉಡುಪಿನ ಬಗ್ಗೆ ಪ್ರಶ್ನಿಸಿದ ನೆಟ್ಟಿಗನಿಗೆ ನಟಿ ಅನಿಕಾ ಸುರೇಂದ್ರನ್​ ಕೊಟ್ಟ ಉತ್ತರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
