ಚೆನ್ನೈ:ಸಿನಿಮಾಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅನೇಕ ಜನರ ಮೇಲೆ ಪ್ರಭಾವ ಬೀರುವುದಂತೂ ನಿಜ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಸಿನಿಮಾಗಳು ವೈಯಕ್ತಿಕವಾಗಿ ಎಲ್ಲರ ಮನಸ್ಸನ್ನು ಸ್ಪರ್ಶಿಸುತ್ತದೆ. ಅದು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದಾಗಿರಬಹುದು, ಸಿನಿಮಾ ಮಾತ್ರ ಪ್ರಭಾವಶಾಲಿ ಮಾಧ್ಯಮ ಎಂಬುದರಲ್ಲಿ ಸಂದೇಹವೇ ಇಲ್ಲ.
2020ರಲ್ಲಿ ಬಿಡುಗಡೆಯಾದ ಕಾಲಿವುಡ್​ ನಟಿ ಜ್ಯೋತಿಕಾ ಅಭಿನಯದ ಪೊಣ್ಮಗಲ್​ ವಂಧಲ್ ಸಿನಿಮಾ 9 ವರ್ಷದ ಅತ್ಯಾಚಾರ ಸಂತ್ರಸ್ತೆಯ​ ಜೀವವನ್ನು ಉಳಿಸಿದೆ. ಈ ಸಿನಿಮಾವನ್ನು ನೋಡಿದ ಬಳಿಕ ತಾನು 48 ವರ್ಷದ ತನ್ನ ಸಂಬಂಧಿಯಿಂದ ಅನೇಕ ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಪಾಲಕರ ಮುಂದೆ ಹೇಳಿಕೊಂಡಿದ್ದಾಳೆ.
ಮಗಳ ನೋವಿನ ಮಾತು ಕೇಳಿದ ಪಾಲಕರು ತಕ್ಷಣ ಸಂಬಂಧಿಯ ವಿರುದ್ಧ ದೂರು ನೀಡಿದ್ದು, ಆರೋಪಿಯ ಬಂಧನವೂ ಆಗಿದೆ. ವಿಚಾರಣೆ ನಡೆಸಿರುವ ಹೈಕೋರ್ಟ್​ ಆರೋಪಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
ಈ ವಿಷಯ ತಿಳಿಯುತ್ತಿದಂತೆ ಜಾಲತಾಣ ಮೂಲಕ ಜ್ಯೋತಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೌನವನ್ನು ಮುಚ್ಚಿ ಹಾಕಿ. ಪ್ರತಿಬಾರಿಯು ಮಹಿಳೆ ತನಗಾಗಿ ನಿಲ್ಲಬೇಕು, ಇದರಿಂದ ತಿಳಿಯದೆ ಅವಳು ಎಲ್ಲ ಮಹಿಳೆಯರ ಪರ ನಿಂತಿರುತ್ತಾಳೆ ಎಂದು ಹೇಳಿದ್ದಾರೆ.
ಇನ್ನು ಪೊಣ್ಮಗಲ್​ ವಂಧಲ್ ಸಿನಿಮಾ ಕುರಿತು ಹೇಳುವುದಾದರೆ, ಭಾರತೀಯ ನ್ಯಾಯಾಲಯಗಳಲ್ಲಿ ಅತ್ಯಾಚಾರ ಪ್ರಕರಣಗಳನ್ನು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ವಿವರಿಸಲಾಗಿದೆ. ಇದು ಪಿತೃಪ್ರಭುತ್ವದಂತಹ ಗಂಭೀರ ಸಮಸ್ಯೆಯನ್ನು ಸಹ ತಿಳಿಸುತ್ತದೆ ಮತ್ತು ನಮ್ಮ ದೇಶದಲ್ಲಿ ಕಾನೂನು ಪ್ರಕ್ರಿಯೆಗಳು ಹೇಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ. ಚಿತ್ರದಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಎಲ್ಲವನ್ನೂ ಚರ್ಚಿಸಬೇಕು ಎಂದು ಹೇಳಿರುವ ಒಂದು ದೃಶ್ಯವು ಸಹ ಇದೆ.
ಈ ಚಿತ್ರವನ್ನು ಜೆಜೆ ಫ್ರೆಡ್ರಿಕ್​ ನಿರ್ದೇಶಿಸಿದ್ದು, ನಟ ಹಾಗೂ ಜ್ಯೋತಿಕಾ ಪತಿ ಸೂರ್ಯ ನಿರ್ಮಾಣ ಮಾಡಿದ್ದಾರೆ.(ಏಜೆನ್ಸೀಸ್​)
ರಾಮನಗರ ಎಸ್​ಪಿ ಮನೆ ಸಮೀಪದಲ್ಲೇ ಇತ್ತು ಕೋಟ್ಯಂತರ ಮೌಲ್ಯದ ಹೈಡ್ರೋ ಗಾಂಜಾ! ಸಿಸಿಬಿ ಪೊಲೀಸರೇ ಶಾಕ್​

ಏಷ್ಯಾದ ಅತಿದೊಡ್ಡ ಸುರಂಗ ಮಾರ್ಗ ಶೀಘ್ರ ಮುಕ್ತಾಯ: ಚೀನಾ-ಪಾಕ್‌ ಗಡಿಯಲ್ಲಿರೋ ಇದಕ್ಕಿದೆ ಹಲವಾರು ವಿಶೇಷತೆ

ಮದುವೆಯಾದ ಒಂದೇ ತಿಂಗಳಲ್ಲಿ ಸಾಫ್ಟ್​ವೇರ್​ ಗಂಡನ ಕ್ರೂರತ್ವ: ಭರವಸೆಯ ಬದುಕು ದುರಂತದಲ್ಲಿ ಅಂತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − one =
Remember me
