ಚೆನ್ನೈ:ಫೈವ್​ ಸ್ಟಾರ್​ ಹೋಟೆಲ್​ಗಳು ಮತ್ತು ಶ್ರೀಮಂತರಿಗೆ ಸಂಬಂಧಿಸಿದ ಐಷಾರಾಮಿ ಮನೆಗಳಲ್ಲಿ ರೇವ್​ ಪಾರ್ಟಿಗಳು ನಡೆಯುವುದು ಸಾಮಾನ್ಯ. ಆದರೆ, ಕರೊನಾ ವೈರಲ್​ ಸಾಂಕ್ರಮಿಕದಿಂದಾಗಿ ಒಟ್ಟಾಗಿ ಸೇರುವುದನ್ನು ಎಲ್ಲೆಡೆ ನಿರ್ಬಂಧಿಸಲಾಗಿದೆ. ಆದರೂ, ಕೆಲವೆಡೆ ಗುಟ್ಟಾಗಿ ರೇವ್​ ಪಾರ್ಟಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.
ಇದೀಗ ಚೆನ್ನೈನಲ್ಲಿ ನಟಿಯೊಬ್ಬರನ್ನು ಇದೇ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಕಣ್ಣತ್ತೂರ್​ ಏರಿಯಾದ ಐಷಾರಾಮಿ ಬಂಗಲೆಯಲ್ಲಿ ರೇವ್​ ಪಾರ್ಟಿ ನಡೆಯುತ್ತಿರುವ ಸುಳಿವು ಪಡೆದು ದಾಳಿ ನಡೆಸಿದ ಚೆನ್ನೈ ಪೊಲೀಸರು ನಟಿಯನ್ನು ಸೋಮವಾರ ಬಂಧಿಸಿದ್ದಾರೆ.
ಅರೆಬೆತ್ತಲೆ ನೃತ್ಯ ಹಾಗೂ ದುಬಾರಿ ಆಲ್ಕೋಹಾಲ್​ನೊಂದಿಗೆ 15 ಮಹಿಳೆಯರು ಮತ್ತು ಅದೇ ಸಂಖ್ಯೆಯ ಪುರುಷರು ಎಂಜಾಯ್​ ಮಾಡುತ್ತಿದ್ದರು ಎಂಬುದು ದಾಳಿಯ ವೇಳೆ ಬಹಿರಂಗವಾಗಿದೆ.
ಪಾರ್ಟಿ ನಡೆಯುತ್ತಿದ್ದ ಬಂಗಲೆಯನ್ನು ನಟಿ ಕವಿತಾಶ್ರೀ ಅವರು ಬಾಡಿಗೆ ಪಡೆದಿದ್ದಾರೆಂದು ತಿಳಿದುಬಂದಿದೆ. ಬಂಗಲೆಗಳನ್ನು ಬಾಡಿಗೆ ಪಡೆದು ಪ್ರತಿ ರಾತ್ರಿ ರೇವ್​ ಪಾರ್ಟಿ ನಡೆಸುತ್ತಿದ್ದರು ಎಂಬ ಆರೋಪವಿದೆ. ಪಾರ್ಟಿಗಳಿಗೆ ಮಹಿಳೆಯರಿಗೆ ಉಚಿವ ಪ್ರವೇಶವನ್ನು ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ನಟಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕವಿತಾಶ್ರೀ ಅವರು ಅನೇಕ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಶಂಕರ್​ ನಿರ್ದೇಶನದ ಮತ್ತು ಪ್ರಭುದೇವ್​ ಅಭಿನಯದ ಕಾದಲನ್ ಚಿತ್ರದಲ್ಲಿ ಕವಿತಾಶ್ರೀ ಅವರು ನಟಿಸಿದ್ದಾರೆ.(ಏಜೆನ್ಸೀಸ್​)​
‘ಯಾವುದೇ ವೆಬ್​ ಸರಣಿಗಳಲ್ಲಿರುವ ಅಶ್ಲೀಲ ವಿಷಯವೂ ಪೋರ್ನ್ ಆಗುವುದಿಲ್ಲ’

ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

ಬ್ಲೂ ಫಿಲ್ಮ್​ ದಂಧೆಯಲ್ಲಿ ರಾಜ್​ ಕುಂದ್ರಾ ಸಿಕ್ಕಿಬಿದ್ದಿದ್ಹೇಗೆ? ಮುಂಬೈನ ಕರಾಳ ಲೋಕ ಬಿಚ್ಚಿಟ್ಟ ಪೊಲೀಸ್​ ಆಯುಕ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nineteen =
Remember me
