ಕಾಂಚಿಪುರಂ:ಕೆಲ ಯುವತಿಯರು ಕಾಲೇಜಿನ ಕ್ಲಾಸ್​ರೂಮ್​ ಒಳಗೆ ಮದ್ಯ ಸೇವನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಪ್ರಾಂಶುಪಾಲು ಯುವತಿಯರನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ.
ತಮಿಳುನಾಡಿನ ಕಾಂಚಿಪುರದ ಎನಾಥೂರಿನ ಕಲಾ ಮತ್ತು ವಿಜ್ಞಾನ ಖಾಸಗಿ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ, ಕೆಲ ಯುವತಿಯರ ದುರ್ನಡತೆಯಿಂದ ಕಾಲೇಜಿಗೆ ಕೆಟ್ಟ ಹೆಸರು ಬಂದಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಕ್ಲಾಸ್​ರೂಮ್​ ಒಳಗೆ ಒಂದೇ ಡೆಸ್ಕ್​ ಮೇಲೆ ಕುಳಿತ್ತಿದ್ದಾರೆ ಮತ್ತು ತುಂಬಿದ ಜ್ಯೂಸ್ ಬಾಟಲ್​ ಖಾಲಿ ಮಾಡಿ, ಮದ್ಯವನ್ನು ಖಾಲಿ ಜ್ಯೂಸ್​ ಬಾಟಲ್​ಗೆ ತುಂಬಿಕೊಂಡು​​ ಅದಕ್ಕೆ ಜ್ಯೂಸ್​ ಮಿಶ್ರಣ ಮಾಡಿ ತರಗತಿ ಒಳಗೆ ಮದ್ಯ ಸೇವಿಸುತ್ತಿರುವುದು ವಿಡಿಯೋದಲ್ಲಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದು ಪ್ರಾಂಶುಪಾಲರ ಗಮನಕ್ಕೂ ಬಂದಿದೆ. ತಕ್ಷಣ ಯುವತಿಯರನ್ನು ಗುರುತಿಸಿದ ಪ್ರಾಂಶುಪಾಲರು ಅವರೆಲ್ಲರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶವನ್ನು ನೀಡಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ಪ್ರಥಮ ವರ್ಷದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ತರಗತಿಯಲ್ಲಿ ತಮ್ಮೊಂದಿಗೆ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮದ್ಯ ಖರೀದಿಸಿದ್ದ ಎಂದು ಅವರು ಹೇಳಿದ್ದಾರೆ. ಆಲ್ಕೋಹಾಲ್ ಎಂದು ತಿಳಿದ ನಂತರವೇ ಅದನ್ನು ಕುಡಿದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ ತೆಗೆದ ವಿಡಿಯೋ ಈಗ ಲೀಕ್ ಆಗಿದೆ ಎಂದು ತಿಳಿದುಬಂದಿದೆ.
ಎಲ್ಲಾ ವಿವರಣೆಗಳನ್ನು ಕೇಳಿದ ಪ್ರಾಂಶುಪಾಲರು, ಕಾಲೇಜಿನ ತರಗತಿಯಲ್ಲಿ ಮದ್ಯಪಾನ ಮಾಡಿದ 5 ವಿದ್ಯಾರ್ಥಿನಿಯರು ಮತ್ತು ಒಬ್ಬ ವಿದ್ಯಾರ್ಥಿಯನ್ನು ತಕ್ಷಣವೇ ಅಮಾನತುಗೊಳಿಸಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಕರೆಸಿಕೊಂಡು ಮುಂದೆ ಇಂತಹ ಘಟನೆ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಲದಿನಗಳ ಹಿಂದೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್​ನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹುಡುಗಿಯರು ಮತ್ತು ಹುಡುಗರ ಗುಂಪೊಂದು ಶಾಲಾ ಸಮವಸ್ತ್ರದಲ್ಲೇ ಬಸ್​ನಲ್ಲಿ ಬಿಯರ್​ ಸೇವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಆರಂಭದಲ್ಲಿ ಇದನ್ನು ಹಳೇ ವಿಡಿಯೋ ಎಂದು ನಂಬಲಾಗಿತ್ತು. ಆದರೆ, ಈ ಘಟನೆ ಇತ್ತೀಚೆಗಷ್ಟೇ ನಡೆದಿರುವುದಾಗಿ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿಗಳು ತಿರುಕಝುಕುಂದ್ರಂನಿಂದ ತಾಚೂರ್‌ಗೆ ತೆರಳುತ್ತಿದ್ದ ಬಸ್‌ನಲ್ಲಿದ್ದರು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)

ಬಸ್​ನಲ್ಲಿ ಹುಡುಗರ ಜತೆ ಎಣ್ಣೆ ಹೊಡೆದ ವಿದ್ಯಾರ್ಥಿನಿಯರ ವೈರಲ್​ ವಿಡಿಯೋ ಅಸಲಿಯತ್ತು ಬಯಲು!

ಮುಂಜಾನೆವರೆಗೂ ನಶೆಯಲ್ಲಿ ತೇಲಾಡ್ತಿದ್ದ ಯುವಕ-ಯುವತಿಯರಿಗೆ ಶಾಕ್​ ಕೊಟ್ಟ ಸಿಸಿಬಿ ಪೊಲೀಸರು!

ಸರ್ಕಾರದ ವಿರುದ್ಧ ಲಾರಿ ಮಾಲೀಕರ ಆಕ್ರೋಶ; 15 ವರ್ಷ ಹಳೆಯ ವಾಹನ ನಿಷೇಧ ಹಿಂಪಡೆಯಲು 30 ದಿನಗಳ ಗಡುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
