ಕರಿವೆಲ್ಲೂರು:ನಾರಿ ಮುನಿದರೆ ಮಾರಿ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಅನುಚಿತವಾಗಿ ವರ್ತಿಸಿದ ದುರುಳನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕರಿವೆಲ್ಲೂರಿನಲ್ಲಿ ನಡೆದಿದೆ.
ಕಣ್ಣೂರಿನಿಂದ ಕನ್ಹಂಗದ್​ ಪ್ರದೇಶಕ್ಕೆ ಕೆಎಸ್​ಆರ್​ಟಿಸಿ ಮೂಲಕ ಕಣ್ಣೂರಿನ ಕರಿವೇಲೂರು ಮೂಲದ ಆರ್​.ಟಿ.ಆರತಿ ಎಂಬಾಕೆ ಪ್ರಯಾಣ ಮಾಡುತ್ತಿದ್ದಳು. ಸರ್ಕಾರದ ನೀತಿಯನ್ನು ವಿರೋಧಿಸಿ ಕೇರಳದ ಖಾಸಗಿ ಬಸ್​ಗಳು ಸ್ಟ್ರೈಕ್​ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಆರತಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಆರೋಪಿಯನ್ನು ರಾಜೀವ್​ (52) ಎಂದು ಗುರುತಿಸಲಾಗಿದೆ. ಬಸ್​ ನೀಲೇಶ್ವರಮ್​ಗೆ ತೆರಳುತ್ತಿದ್ದಂತೆ ಆಕೆಯ ಜತೆ ರಾಜೀವ್​ ಅನುಚಿತವಾಗಿ ವರ್ತಿಸಿದ್ದಾನೆ. ಅನೇಕ ಬಾರಿ ಆತನಿಗೆ ಆರತಿ ಎಚ್ಚರಿಕೆ ನೀಡಿದರು. ತನ್ನ ನೀಚ ಕೆಲವನ್ನು ಆತ ಮುಂದುವರಿಸಿದ್ದಾನೆ. ಬಸ್​ನಲ್ಲಿ ಆರತಿಗೆ ಕಿರುಕುಳ ನೀಡುತ್ತಿದ್ದರೂ ಬಸ್ಸಿನಲ್ಲಿದ್ದ ಯಾರೊಬ್ಬರು ಕೂಡ ಅವಳಿಗೆ ಸಹಾಯ ಮಾಡಲಿಲ್ಲ.
ಇದಾದ ಬಳಿಕ ಆರತಿ ಪಿಂಕ್​ ಪೊಲೀಸರಿಗೆ ಕಾಲ್​ ಮಾಡಿ ಮಾಹಿತಿ ನೀಡುತ್ತಾಳೆ. ಇದು ಗೊತ್ತಾಗಿ ಬಸಷ್​ ಕನ್ಹಾಂಗದ್​ ನಿಲ್ದಾಣದಲ್ಲಿ ನಿಲ್ಲುತ್ತಿದ್ದಂತೆ ಬಸ್​ನಿಂದ ಇಳಿದು ಆರೋಪಿ ಪರಾರಿಯಾಗುತ್ತಾನೆ. ಆತನನ್ನು ಯಾವುದೇ ಕಾರಣಕ್ಕೂ ಬಿಡಲೇಬಾರದು ಎಂದು ನಿರ್ಧಾರಕ್ಕೆ ಬರುವ ಆರತಿ, ಆತನನ್ನು ಅಟ್ಟಿಸಿಕೊಂಡು ಹೋಗುತ್ತಾಳೆ. ಅಲ್ಲದೆ, ಆರೋಪಿಯು ಮಿಸ್​ ಆಗಬಾರದು ಅಂತಾ ಫೋಟೋವನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಳ್ಳುತ್ತಾಳೆ. ಆರೋಪಿ ರಾಜೀವ್​ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ, ಅಂಗಡಿ ಒಳಗೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಆರತಿ ಹಿಡಿಯುತ್ತಾಳೆ. ಬಳಿಕ ಆತನನ್ನು ಕನ್ಹಾಂಗದ್​ ಪೊಲೀಸರಿಗೆ ಒಪ್ಪಿಸುತ್ತಾಳೆ. ಆಕೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಾಜೀವ್​ನನ್ನು ಪೊಲೀಸರು ಬಂಧಿಸುತ್ತಾರೆ.
ಈ ಘಟನೆಯ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಕನ್ಹಂಗಾದ್​ನ ನೆಹರು ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ಆರತಿ, ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದರು. ಈ ಹಿಂದೆಯೂ ಆಕೆಗೆ ಬಸ್ಸಿನಲ್ಲಿ ಇಂತಹ ಅನುಭವವಾಗಿತ್ತು. ಆದರೆ, ಆಕೆ ಪೊಲೀಸರಿಗೆ ಕರೆ ಮಾಡುವ ಮುನ್ನವೇ ಆ ವ್ಯಕ್ತಿ ಓಡಿ ಹೋಗಿದ್ದ. ಇದೀಗ ಆರೋಪಿ ಸಿಕ್ಕಿಬಿದ್ದಿದ್ದಾನೆ.(ಏಜೆನ್ಸೀಸ್​)
ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚ: ಸಂಸತ್ತಿಗೆ ಸಾರಿಗೆ ಸಚಿವರು ಬಂದಿಳಿದ ಹೈಡ್ರೋಜನ್​ ಕಾರಿನ ವಿಶೇಷತೆ ಹೀಗಿದೆ..

ಸಿಎಂ ಅರವಿಂದ್​ ಕೇಜ್ರಿವಾಲ್​ ಮನೆ ಹಾನಿ ಪ್ರಕರಣ: 8 ಆರೋಪಿಗಳ ಬಂಧನ

ಜೀವನದಲ್ಲಿ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ: ಅತ್ಯಂತ ನೋವಿನ ಕ್ಷಣ ಬಿಚ್ಚಿಟ್ಟ ಪ್ರಕಾಶ್​ ರಾಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
