ನವದೆಹಲಿ:ವಕೀಲ ಆರ್​. ಕಪೂರ್​ ಎಂಬುವವರು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಭೇಟಿಯಾಗಲು ಅನುಮತಿ ಕೋರಿ ಪಟಿಯಾಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನಿರ್ಭಯಾ ಪ್ರಕರಣದ ಅಪರಾಧಿಗಳನ್ನು 22ರಂದು ಗಲ್ಲಿಗೇರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನದ ಬಗ್ಗೆ ಅವರ ಮನವೊಲಿಸಲು ತೆರಳಲು ಅನುಮತಿ ಕೋರಲಾಗಿದೆ.
ರ‍್ಯಾಕೊ ಎಂಬ ಎನ್​ಜಿಒ ಸಂಸ್ಥೆ ಪರ ವಕೀಲರಾದ ಆರ್​. ಕಪೂರ್​ ಅವರು ಈ ಮೊದಲು ತಿಹಾರ್​ ಜೈಲಿಗೆ ತೆರಳಿ ಅಧಿಕಾರಿಗಳಿಗೆ ಅಪರಾಧಿಗಳ ಭೇಟಿ ಬಗ್ಗೆ ಮನವಿ ಮಾಡಿದ್ದರು. ಆದರೆ ತಿಹಾರ್​ ಅಧಿಕಾರಿಗಳು ಕೋರ್ಟ್​ ಆದೇಶ ಬೇಕು ಎಂದ ಹಿನ್ನೆಲೆಯಲ್ಲಿ ಪಟಿಯಾಲ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ನಮ್ಮ ಜೀವಿತಾವಧಿಯನ್ನು ಕೊಲ್ಲುತ್ತಿರುವಾಗ ಮತ್ತೆ ನಮಗೆ ಮರಣದಂಡಣೆ ಶಿಕ್ಷೆ ಏಕೆ? ಮರಣದಂಡಣೆ ಶಿಕ್ಷೆಯಿಂದ ಮುಕ್ತಿ ನೀಡುವಂತೆ ನಿರ್ಭಯಾ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ
ನಿರ್ಭಯಾ ಪ್ರಕರಣದ ನಾಲ್ವರು ಅರೋಪಿಗಳಲ್ಲಿ ಒಬ್ಬನಾದ ಅಕ್ಷಯ್​ಸಿಂಗ್​ ಠಾಕೂರ್​ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೀಗೆ ಮನವಿ ಮಾಡಿದ್ದ.
ದೆಹಲಿಯಲ್ಲಿ ವಾಯು ಮತ್ತು ನೀರಿನ ಮಾಲಿನ್ಯದಿಂದಾಗಿ ಆಯುಷ್ಯ ಕಡಿಮೆಯಾಗುತ್ತಿದೆ. ಪ್ರಕರಣದಲ್ಲಿ ತಾನು ತಪ್ಪಾಗಿ ಸಿಲುಕಿದ್ದೇನೆ ಎಂದು ಅಕ್ಷಯ್ ಆ ಅರ್ಜಿಯಲ್ಲಿ ಉಲ್ಲೇಖಿಸಿದ್ದ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seventeen =
Remember me
