ನವದೆಹಲಿ:ಭಾರತದ ಬಹುಭಾಷಾ ಸಾಮಾಜಿಕ ಮಾಧ್ಯಮ ವೇದಿಕೆ ಕೂ ಆಪ್ ಅತ್ಯಾಕರ್ಷಕ ಅಭಿಯಾನವೊಂದನ್ನು ಪ್ರಕಟಿಸಿದೆ. ಜನರು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಸಂದರ್ಭದಲ್ಲಿ ಹೊಸ ಸಂಕಲ್ಪ ಕೈಗೊಳ್ಳುವುದನ್ನು ಹೊಸ ಅಭಿಯಾನ #NayeBharatKaSapna ಪ್ರೋತ್ಸಾಹಿಸುತ್ತದೆ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು ಈ ಅಭಿಯಾನದ ಹ್ಯಾಶ್‌ಟ್ಯಾಗ್ #NayeBharatKaSapna ಬಿಡುಗಡೆ ಮಾಡಿ, ಹೊಸ ಭಾರತಕ್ಕಾಗಿ ಬದಲಾಗುವ ಸಂಕಲ್ಪವನ್ನು ಸಾಮೂಹಿಕವಾಗಿ ಸ್ವೀಕರಿಸಲು ಬಳಕೆದಾರರನ್ನು ಉತ್ತೇಜಿಸಿದ್ದಾರೆ.
ಭಾರತ-ನಿರ್ಮಿತ ಉತ್ಪನ್ನಗಳನ್ನು ಬಳಸುವ ಮೂಲಕ #GoSwadeshi ನಿರ್ಣಯ ಕೈಗೊಳ್ಳುವುದು, ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವ ಮೂಲಕ #CleanTheEarth, ಮರುಬಳಕೆ (reuse), ಕಡಿಮೆಗೊಳಿಸು (reduce), ದುರಸ್ತಿ (repair) ಮತ್ತು ಪುನಃ ಬಳಸು (recycle) ಅಳವಡಿಸಿಕೊಳ್ಳುವ ಮೂಲಕ #FightClimateChange ಸಂಕಲ್ಪ ಮಾಡಬಹುದು. ಕರಣ್ ಜೋಹರ್ ಅವರು ವಸ್ತುಗಳ ಮರುಬಳಕೆ ಮತ್ತು ಪುನರ್ ನಿರ್ಮಾಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆ ವಿರುದ್ಧ ಹೊರಡುವ ಪ್ರತಿಜ್ಞೆ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
–Karan Johar (@karanjohar)1 Aug 2022

ಭಾರತದ ಬಹು-ಭಾಷಾ ವೇದಿಕೆ ಕೂ – ಈ ಅಭಿಯಾನದ ಮೂಲಕ, ಬಳಕೆದಾರರು ಈ ದೇಶಕ್ಕಾಗಿ ಏನು ಮಾಡಲು ಬಯಸುತ್ತಾರೆ ಎಂಬುದನ್ನು ಹಂಚಿಕೊಂಡು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವ ಅವಕಾಶ ಕಲ್ಪಿಸಿದೆ. ಆಗಸ್ಟ್ 1 ರಿಂದ15 ದಿನಗಳ ಕಾಲದ ಈ ಅಭಿಯಾನವು ಸಮಾಜದ ಕಲ್ಯಾಣಕ್ಕಾಗಿ ಪ್ರತಿದಿನ ಶ್ರಮಿಸುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೇರಿದಂತೆ ಭಾರತದ ಸಶಸ್ತ್ರ ಪಡೆಗಳು ಮತ್ತು ಕೋವಿಡ್ ಯೋಧರಿಗೆ ವಂದನೆಗಳನ್ನು ಸಲ್ಲಿಸಲು ಜನರನ್ನು ಪ್ರೋತ್ಸಾಹಿಸುತ್ತದೆ.
ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೂ ವೇದಿಕೆಯ ಮುಖ್ಯ ವ್ಯವಹಾರ ಅಧಿಕಾರಿಗಳಾದ ಸುನೀಲ್ ಕಾಮತ್ , ” ಶತಕೋಟಿ ಧ್ವನಿಗಳಿಗೆ ಡಿಜಿಟಲ್ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿಕೊಡುವುದರ ಮೂಲಕ, ಕೂ ಭಾರತದ ಭಾವನೆಯನ್ನು ಪ್ರತಿಬಿಂಬಿಸುತ್ತದೆ. #ನವಭಾರತದಕನಸು ಅಭಿಯಾನ ಪ್ರಗತಿಪರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಜನರನ್ನು ಪ್ರೇರೇಪಿಸುವ ಮೂಲಕ ಅಭಿವ್ಯಕ್ತಿಯ ಹೊಸ ಪ್ರಯಾಣವನ್ನು ಮುನ್ನಡೆಸುತ್ತದೆ. ಕರಣ್ ಜೋಹರ್ ಅವರು ಈ ಅಭಿಯಾನವನ್ನು ಪ್ರಾರಂಭಿಸಿದ್ದು ನಮಗೆ ಖುಷಿ ತಂದಿದೆ, ಜೊತೆಗೆ ಹೊಸ ಭಾರತಕ್ಕಾಗಿ ಸಾಮಾಜಿಕ ಕಾರಣವನ್ನು ತೆಗೆದುಕೊಳ್ಳಲು ತಮ್ಮ ಫಾಲೋವರ್ಸ್ ಪ್ರೇರೇಪಿಸುತ್ತಿರುವ ಎಲ್ಲಾ ಗಣ್ಯ ವ್ಯಕ್ತಿಗಳಿಗೆ ಕೃತಜ್ಞತೆಗಳು.” ಎಂದು ಮಾತನಾಡಿದರು
#ಹವಾಮಾನಬದಲಾವಣೆವಿರುದ್ಧಹೋರಾಟ ಕುರಿತು ತಮ್ಮ ಬದ್ಧತೆಯ ಬಗ್ಗೆ ಮಾತನಾಡುತ್ತಾ ಕರಣ್ ಜೋಹರ್, “ಈ ಹವಾಮಾನ ಬದಲಾವಣೆಯ ಹೋರಾಟದಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವಿದೆ. ನಾನು #ನವಭಾರತದಕನಸು ಅಭಿಯಾನದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ, ಕೂ ನಲ್ಲಿ ಬಹುಭಾಷಾ ಬಳಕೆದಾರರೊಂದಿಗೆ ಸಂವಹನ ನಡೆಸುತ್ತೇನೆ ಮತ್ತು ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಈ ಸ್ವಾತಂತ್ರ್ಯ ಮಾಸದಲ್ಲಿ ನಾವೆಲ್ಲರೂ ಕೈಜೋಡಿಸೋಣ ಮತ್ತು ನಮ್ಮ ಗ್ರಹ, ನಮ್ಮ ದೇಶ ಮತ್ತು ನಮ್ಮ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಜೈ ಹಿಂದ್!” ಎಂದು ಹೇಳಿದರು.
ಕೂ ಬಗ್ಗೆಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಭಾಷಾ ಆಧಾರಿತ ಮೈಕ್ರೋ-ಬ್ಲಾಗಿಂಗ್‌ನ ಆವಿಷ್ಕಾರಕವಾಗಿದ್ದು ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ – ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ. ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಕ್ಕೆ ಧಕ್ಕೆ ಬಾರದಂತೆ ಮೂಲ ಅರ್ಥವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 30 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದೆ, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.
ವಿಆರ್​ಎಲ್ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಹುಟ್ಟುಹಬ್ಬ: ವಿಜಯಾನಂದ ಚಿತ್ರತಂಡದಿಂದ ಟೀಸರ್ ಗಿಫ್ಟ್​

ಕಳ್ಳಬೇಟೆಗಾರರಿಗೆ ಸಿಂಹ ಸ್ವಪ್ನವಾಗಿದ್ದ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ “ರಾಣಾ” ಇನ್ನಿಲ್ಲ…

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಬೆಂಗಾವಲು ವಾಹನ ಅಪಘಾತ: ಮೂವರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
