ನವದೆಹಲಿ:ಜಮ್ಮು-ಕಾಶ್ಮೀರದ ಕಾರ್ಗಿಲ್ ಗಿರಿಕಂದರ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ನುಸುಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿ, ವಿಜಯಪತಾಕೆ ಹಾರಿಸಿದ ಕ್ಷಣಕ್ಕೆ ಈಗ 23 ವರ್ಷ. ಇಂದು ಕಾರ್ಗಿಲ್ ವಿಜಯ ದಿವಸ ಹಿನ್ನೆಲೆಯಲ್ಲಿ ಇಡೀ ದೇಶ ವೀರ ಯೋಧರ ಸ್ಮರಣೆ ಮಾಡುತ್ತಿದೆ. ಈ ಕುರಿತು ಪ್ರಧಾನಿ ಮೋದಿ ಕೂಡ ಟ್ವೀಟ್​ ಮಾಡಿ ಶುಭಕೋರಿದ್ದಾರೆ.
ಕಾರ್ಗಿಲ್ ವಿಜಯ ದಿವಸವು ನಮ್ಮ ದೇಶದ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ತಮ್ಮ ಶೌರ್ಯವನ್ನು ಸಾಧಿಸಿದ ದೇಶದ ಎಲ್ಲ ವೀರ ಪುತ್ರರಿಗೆ ನನ್ನ ವಂದನೆಗಳು. ಜೈ ಹಿಂದ್ ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.
कारगिल विजय दिवस मां भारती की आन-बान और शान का प्रतीक है। इस अवसर पर मातृभूमि की रक्षा में पराक्रम की पराकाष्ठा करने वाले देश के सभी साहसी सपूतों को मेरा शत-शत नमन। जय हिंद!pic.twitter.com/wIHyTrNPMU
— Narendra Modi (@narendramodi)July 26, 2022

1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಪುಷ್ಪಾರ್ಚನೆ ಸಲ್ಲಿಸಿ, ವೀರ ಯೋಧರನ್ನು ಸ್ಮರಿಸಿದರು.
#WATCH| Defence Minister Rajnath Singh pays tribute to soldiers who lost their lives in the 1999 Kargil War and lays a wreath at the National War Memorial in Delhi, on#KargilVijayDiwaspic.twitter.com/kyHrOLZZGP
— ANI (@ANI)July 26, 2022

ಮೂರು ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್​ ಮನೋಜ್​ ಪಾಂಡೆ (ಭೂಸೇನಾ ಮುಖ್ಯಸ್ಥ), ಅಡ್ಮಿರಲ್​ ಆರ್​ ಹರಿ ಕುಮಾರ್​ (ನೌಕಾಪಡೆ) ಮತ್ತು ಏರ್​ ಚೀಪ್​ ಮಾರ್ಷಲ್​ ವಿ.ಆರ್​​. ಚೌಧರಿ (ವಾಯುಪಡೆ) ಅವರು ದೆಹಲಿಯ ರಾಷ್ಟ್ರೀಯ ಯದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
#WATCH| The three service chiefs – Army chief General Manoj Pande, Navy chief Admiral R Hari Kumar & Air Force chief Air Chief Marshal VR Chaudhari – lay wreaths at the National War Memorial in Delhi, on#KargilVijayDiwaspic.twitter.com/2vU0pjjaHb
— ANI (@ANI)July 26, 2022

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬಿಜೆಪಿ ಶ್ರೀನಗರದ ಲಾಲ್ ಚೌಕ್​ನಿಂದ ಲಡಾಖ್​ನ ದ್ರಾಸ್​ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದವರೆಗೆ ‘ತಿರಂಗಾ ಬೈಕ್’ ರ‍್ಯಾಲಿ ಹಮ್ಮಿಕೊಂಡಿದ್ದು, ಇದಕ್ಕೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಕ್ ಸೋಮವಾರ ಚಾಲನೆ ನೀಡಿದರು. ಲಾಕ್ ಚೌಕ್​ದ ಘಂಟಾ ಘರ್​ನಲ್ಲಿ 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸಿ, ಬೈಕರ್​ಗಳು ಯಾತ್ರೆ ಆರಂಭಿಸಿದರು. ಪ್ರತ್ಯೇಕತಾವಾದಿಗಳ ಕಾರಾಸ್ಥಾನವಾಗಿದ್ದ ಲಾಲ್ ಚೌಕ್​ನಲ್ಲಿ ಈಗ ರಾಷ್ಟ್ರಧ್ವಜ ಮುಕ್ತವಾಗಿ ಹಾರಾಡಿದೆ.
–H D Kumaraswamy (@h_d_kumaraswamy)26 July 2022

–Basavaraj Bommai (@bsbommai)26 July 2022

ಕಾರ್ಗಿಲ್​ ಯುದ್ಧದ ಹಾದಿ* 1999ರ ಮೇ 3: ಪಾಕಿಸ್ತಾನಿಯರು ಅನಧಿಕೃತವಾಗಿ ಕಾರ್ಗಿಲ್ ಪ್ರವೇಶಿಸಿದ ಮಾಹಿತಿ.
* ಮೇ 5: ಪಾಕ್ ಸೇನೆ ಐವರು ಭಾರತೀಯ ಯೋಧರನ್ನು ಸೆರೆ ಹಿಡಿದು ಹಿಂಸಿಸಿ ಸಾಯಿಸಿತು.
* ಮೇ 26: ಒಳನುಸುಳಿದವರಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ವಾಯುದಾಳಿ ನಡೆಸಿತು.
*  ಜೂನ್ 1: ಪಾಕಿಸ್ತಾನ ದಾಳಿ ತೀವ್ರತೆ ಹೆಚ್ಚಿಸಿತು.
* ಜೂನ್ 6: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಪಾಕ್ ಸೈನಿಕರ ವಿರುದ್ಧ ದಾಳಿ ಆರಂಭಿಸಿತು.
* ಜೂನ್ 29: ಟೈಗರ್ ಹಿಲ್ ಸಮೀಪದ ಪಾಯಿಂಟ್ 5060 ಮತ್ತು ಪಾಯಿಂಟ್ 5,100 ಎಂಬ ಎರಡು ಪ್ರಮುಖ ಸಿಪಾಯಿ ನೆಲೆಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿತು.
* ಜುಲೈ 2: ಭಾರತೀಯ ಸೇನೆ ಕಾರ್ಗಿಲ್​ನಲ್ಲಿ ಮುಮ್ಮುಖ ದಾಳಿ ಆರಂಭಿಸಿತು.
* ಜುಲೈ 11: ಪಾಕಿಸ್ತಾನವು ಸೇನಾ ವಾಪಸಾತಿ ಪ್ರಕ್ರಿಯೆ ಪ್ರಾರಂಭಿಸಿತು; ಬಟಾಲಿಕ್​ನಲ್ಲಿ ಪ್ರಮುಖ ಶಿಖರಗಳನ್ನು ಭಾರತ ವಶಪಡಿಸಿಕೊಂಡಿತು.
* ಜುಲೈ 14: ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಘೊಷಿಸಿದರು. ಪಾಕಿಸ್ತಾನದೊಂದಿಗಿನ ಮಾತುಕತೆಗಳಿಗೆ ಭಾರತವು ಷರತ್ತನ್ನು ನಿಗದಿಪಡಿಸಿತು.
* ಜುಲೈ 26: ಕಾರ್ಗಿಲ್ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು. ಒಳನುಗ್ಗಿದ್ದ ಪಾಕಿಸ್ತಾನಿಯರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿತು.
–Araga Jnanendra (@aragajnanendra)26 July 2022

–Dr. Murugesh R Nirani (@murugesh_nirani)26 July 2022

ಬಲಹೀನ ಪಾಕ್; ಬಲಗೊಂಡ ಭಾರತ..

ನೀವು ಹೀಗೆ ಮಾಡಿದ್ರೆ ಮೊಸಳೆಗಳು ನಿಮ್ಮನ್ನು ಕಚ್ಚದೇ ಬಿಡುವುದಿಲ್ಲ: ಬಿಜೆಪಿಗೆ ಸಿಎಂ ಮಮತಾ ವಾರ್ನಿಂಗ್​

ಏನಾಯ್ತು ರಾಕಿ ಭಾಯ್​ಗೆ? ಯಾಕಿಷ್ಟು ಸೈಲೆಂಟ್​ ಆಗಿದ್ದಾರೆ? ಆದಷ್ಟು ಬೇಗ ಯಶ್​ ಇದನ್ನು ಮಾಡಲೇಬೇಕಿದೆ….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − seven =
Remember me
