ನವದೆಹಲಿ:ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್ ಮಂಜೂರ್ ಅವರು ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ನನಸಾಗಿದೆ. ಇದಕ್ಕೆ ಕಾರಣವಾಗಿದ್ದು ಕೂ ಸಾಮಾಜಿಕ ಜಾಲತಾಣ ವೇದಿಕೆ.
ಹೌದು, ಅಥ್ಲೆಟಿ ಡ್ಯಾನಿಶ್ ಮಂಜೂರ್ ಅವರ ಕನಸು ನನಸಾಗಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣ. ಕೆಲ ದಿನಗಳ ಹಿಂದೆ ತನಗೆ ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ 58 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು (ಪ್ರಯಾಣದ ವೆಚ್ಚವನ್ನು ಭರಿಸಲು ಹಾಗು ಅಲ್ಲಿ ಉಳಿಯಲು ಹಣದ ಕೊರತೆ ಇದಿದ್ದರಿಂದ) ಹಣದ ಕೊರತೆ ಇದ್ದು, ಯಾರಾದರೂ ಪ್ರಾಯೋಜಕತ್ವ ನೀಡಿದರೆ ಅದು ಸಾಧ್ಯವಾಗುತ್ತದೆ ಹಾಗಾಗಿ ನೆರವು ನೀಡುವಂತೆ ಕೋರಿ ಅವರು ಕೂ ನಲ್ಲಿ ಪೋಸ್ಟ್ ಮಾಡಿದ್ದರು. ಹಿಂದಿ, ಪಂಜಾಬಿ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾರತದಾದ್ಯಂತ ತಲುಪಬಹುದಾದ ವೇದಿಕೆಯ ವಿಶಿಷ್ಟ ಭಾಷಾಂತರ ಫೀಚರ್ ಬಳಸಿಕೊಂಡು ಅವರು ಎಲ್ಲಾ ಭಾಷಿಗರನ್ನು ತಲುಪಿದ್ದರು.
ಕೂ ನಲ್ಲಿ ಸಕ್ರಿಯವಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲದ ಹೆಲ್ಪ್ ಫೌಂಡೇಶನ್‌ ಅವರ ಪೋಸ್ಟ್ ಅನ್ನು ನೋಡಿ ಅವರಿಗೆ ಪ್ರಾಯೋಜಕತ್ವ ನೀಡಿದ್ದು, ಇದರಿಂದ ಡ್ಯಾನಿಶ್ ಅವರ ಕನಸು ನನಸಾಗಿದೆ. ಇಸ್ರೇಲ್‌ನ ರಮ್ಲಾದಲ್ಲಿ ನಡೆಯಲಿರುವ ಒಲಿಂಪಿಕ್ ಶ್ರೇಯಾಂಕದ (ಜಿ 2) ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿದೆ.
ಪ್ರಾಯೋಜಕತ್ವ ಸ್ವೀಕರಿಸಿದ ನಂತರ ಕೂ ಮಾಡಿರುವ ಡ್ಯಾನಿಶ್ ಮಂಜೂರ್ ಅವರು ಸಹಾಯ ಒದಗಿಸಿದಕ್ಕಾಗಿ ಎಲ್ಲರಿಗು ಕೃತಜ್ಞತೆ ಸಲ್ಲಿಸಿದ್ದಾರೆ. ‘ನಾನು @koosportshindi & @KooOfficial ಗೆ ತುಂಬಾ ಕೃತಜ್ಞನಾಗಿದ್ದೇನೆ, ಈ ಮೂಲಕ ನಾನು ಜಮ್ಮು ಮತ್ತು ಕಾಶ್ಮೀರದ @help_foundation ನಿಂದ ಭಾರತದ ಒಲಿಂಪಿಕ್ ಶ್ರೇಯಾಂಕದ ಟೇಕ್ವಾಂಡೋ ಈವೆಂಟ್ ನಲ್ಲಿ ಭಾಗವಾಗಿಸಲು ಸಾಧ್ಯವಾಗಿದೆ. ಪ್ರತಿನಿಧಿಸಿ, ಮತ್ತು ನನಗೆ ಮಾರ್ಗದರ್ಶನ ನೀಡಿದ ನನ್ನ ತರಬೇತುದಾರ @atul_pangotra ಸರ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಈಗಷ್ಟೇ ಇಸ್ರೇಲ್‌ಗೆ ಬಂದಿದ್ದೇನೆ ಮತ್ತು ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡಲು ಪ್ರಯತ್ನಿಸುತ್ತೇನೆ. ದಯವಿಟ್ಟು ಬೆಂಬಲಿಸುತ್ತಲೇ ಇರಿ. ಜೈ ಹಿಂದ್.”
–Danish Manzoor (@danishtkd_)11 Aug 2022

ಕಾಶ್ಮೀರದ ಬಾರಾಮುಲ್ಲಾ ನಿವಾಸಿ ಡ್ಯಾನಿಶ್, COVID-19 ಲಾಕ್‌ಡೌನ್ ಸಮಯದಲ್ಲಿ ಮನೆಯಿಂದಲೇ ಟೇಕ್ವಾಂಡೋ ಅಭ್ಯಾಸವನ್ನು ಪ್ರಾರಂಭಿಸಿದರು. ಅವರು 2021 ರ ಟೋಕಿಯೊ ಸ್ಮಾರಕ ಓಪನ್ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ‘ಅತ್ಯುತ್ತಮ ಪುರುಷ ಅಥ್ಲೀಟ್’ ಎಂದು ಪ್ರಶಸ್ತಿ ಪಡೆದರು ಮತ್ತು ಬೆಳ್ಳಿ ಪದಕವನ್ನು ಗೆದ್ದರು.
ಇಂದಿನ ಡಿಜಿಟಲ್ ಯುಗದಲ್ಲಿ, ಬಿಕ್ಕಟ್ಟಿನ ಸಮಯದಲ್ಲಿ ಬೆಂಬಲ ಒದಗಿಸುವುದರಲ್ಲಿ ಸಾಮಾಜಿಕ ಮಾಧ್ಯಮವು ಪ್ರಮುಖವಾಗಿದೆ. ಎಲ್ಲರನ್ನೂ ಒಂದುಗೂಡಿಸುವ ಬಹುಭಾಷಾ ವೇದಿಕೆಯಾಗಿರುವುದರಿಂದ, ಭಾರತದಾದ್ಯಂತ ಲಕ್ಷಾಂತರ ಜನರಿಗೆ ಧ್ವನಿ ನೀಡುವಲ್ಲಿ ಕೂ ಪ್ರಮುಖ ಪಾತ್ರ ವಹಿಸಿದೆ. ಮಾತೃಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಡ್ಯಾನಿಶ್ 1.22 ಲಕ್ಷಕ್ಕೂ ಹೆಚ್ಚು ಫಾಲೊವೆರ್ಸ್ ಹೊಂದಿದ್ದಾರೆ.
ಇದೆ ವೇಳೆ, ಡ್ಯಾನಿಶ್‌ನ ಕೂಗೆ ಪ್ರತಿಕ್ರಿಯಿಸಿರುವ, ಹೆಲ್ಪ್ ಫೌಂಡೇಶನ್ ಎನ್‌ಜಿಒ ತನ್ನ ಪೋಸ್ಟ್‌ನಲ್ಲಿ, ಭಾರತದಲ್ಲಿ ಉದಯೋನ್ಮುಖ ತಾರೆಯನ್ನು ಬೆಂಬಲಿಸುವುದಕ್ಕಿಂತ ಉತ್ತಮವಾದದ್ದು ನಾವು ಏನು ಮಾಡಬಹುದು” ಎಂದು ಸಂತಸ ವ್ಯಕ್ತಪಡಿಸಿದೆ. ಭಾರತವನ್ನು ಪ್ರತಿನಿಧಿಸಲು @danishtkd_ ಅನ್ನು ಬೆಂಬಲಿಸುವ ಅವಕಾಶವನ್ನು ನಮಗೆ ನೀಡಿದ ಈ ವೇದಿಕೆಗಾಗಿ @Koosportshindi ಮತ್ತು @KooOfficial ಧನ್ಯವಾದಗಳು. ಆಲ್ ದಿ ಬೆಸ್ಟ್, ಡ್ಯಾನಿಶ್.
–HELP Foundation (@help_foundation)11 Aug 2022

ಭಾರತ ಸರ್ಕಾರ VLC ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿದ್ದೇಕೆ? ಈ ಆ್ಯಪ್​ ಹಿಂದಿರುವ ಕರಾಳತೆ ಇದೇನಾ?

ಸೈಬರ್ ಕಳ್ಳರ ಪಾಲಾದ ಹಣ ಗ್ರಾಹಕರಿಗೆ ಮರೀಚಿಕೆ!: ಶೇ.75 ಜನರಿಗೆ ಕಳೆದುಕೊಂಡ ದುಡ್ಡು ಮರಳಿಲ್ಲ..

1 ತಿಂಗಳು, 3 ಭಾಷೆ, 3 ಚಿತ್ರ!; ಚತುರ್ಭಾಷಾ ಚತುರೆ ಸಂಯುಕ್ತಾ ಮೆನನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
